Advertisement
ಒಂದೇ ದಿನ 3 ಕಟ್ಟ !ಮರೋಡಿ ಗ್ರಾಮದ ಕಲ್ಲೊಟ್ಟುಬೈಲು, ಗುಂಡಾವುಬೈಲು, ನಡ್ಯಾರುಬೈಲು, ಕಲ್ಲಟ್ಟ, ಬಳ್ಳಿದಡ್ಡ, ಹಾಂತ್ಯಾರು, ಮತ್ತೂಟ್ಟು, ಪಿಜತ್ತಾರು, ಬೋವುರಿ, ಹೊಯಿಗೆದಿಡ್ಡು, ಪೆರಾಡಿ ಗ್ರಾಮದ ಹಾರ್ದೊಟ್ಟು, ಹಲೆಕ್ಕಿ ಬೈಲು, ಕಾಂತ್ಯೊಟ್ಟು, ಬಾಂತೊಟ್ಟು, ಪಂಬುದೊಟ್ಟು ಸ್ಥಳಗಳಲ್ಲಿ ಗೋಣಿ ಚೀಲಗಳಿಗೆ ಮಣ್ಣು-ಮರಳು ಮಿಶ್ರಣವನ್ನು ತುಂಬಿಸಿ ಮತ್ತು ಹಲಗೆಗಳನ್ನು ಬಳಸಿ ಕಟ್ಟಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಟ್ಟ ಗಳಲ್ಲಿ ನೀರು ಸಂಗ್ರಹಿಸಿ ಕೃಷಿ ಜಮೀನಿಗೆ ಒದಗಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ಅದರಲ್ಲೂ ಒಂದೇ ದಿನ ಮೂರು ಕಟ್ಟಗಳನ್ನು ನಿರ್ಮಿಸಿರುವುದು ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳಲ್ಲಿ ಇರುವ ಆಸಕ್ತಿಯನ್ನು ತೋರಿಸುತ್ತದೆ.
ಕಟ್ಟ ನಿರ್ಮಾಣದಲ್ಲಿ ಮೂಡುಬಿದಿರೆ ಅಳ್ವಾಸ್ ಕಾಲೇಜಿನ ಎನ್ನೆಸ್ಸೆಸ್‌ನ 47 ಮಂದಿ, ಮಾನವಿಕಾ ವಿಭಾಗದ 70 ಮಂದಿ ವಿದ್ಯಾರ್ಥಿಗಳೊಂದಿಗೆ ಸ್ಥಳೀಯರೂ ಕೈ ಜೋಡಿಸಿದ್ದಾರೆ. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್ ಪ್ರಾಧ್ಯಾಪಕ ವಸಂತ ಎನ್., ಉಪನ್ಯಾಸಕಿ ದೀಕ್ಷಿತಾ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ, ಹರಿಣಾಕ್ಷಿ ನೇತೃತ್ವ ವಹಿಸಿದ್ದರು.
Related Articles
ಮರೋಡಿ ಗ್ರಾಮಸ್ಥರು ಜಲಸಂರಕ್ಷಣೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, 11 ಕಟ್ಟ ನಿರ್ಮಿಸುವುದಾಗಿ ತಿಳಿಸಿದ್ದರು. ಇದೀಗ ವಿವಿಧೆಡೆಗಳಲ್ಲಿ 14 ಕಟ್ಟಗಳನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಹಕಾರದಲ್ಲಿ ನಿರ್ಮಿಸಿದ್ದಾರೆ. ಎಲ್ಲ ಕಟ್ಟಗಳ ನಿರ್ಮಾಣಕ್ಕೆ ಪೆರಿಂಜೆಯ ಇಂಟರ್‌ಲಾಕ್ಸ್ ಮಾಲಕರು 3,000ಕ್ಕೂ ಹೆಚ್ಚು ಗೋಣಿಚೀಲ ಒದಗಿಸಿದ್ದಾರೆ.
– ಪಿ. ಧರಣೇಂದ್ರ ಕುಮಾರ್, ಜಿ.ಪಂ. ಸದಸ್ಯರು
Advertisement
ಜಲಸಂರಕ್ಷಣೆ ಉತ್ತಮ ಕಾರ್ಯಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಅವರ ಸೂಚನೆಯಂತೆ ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಸಂರಕ್ಷಣೆ ಮಾಡುವ ಉದ್ದೇಶದಿಂದ ವಿವಿಧ ಗ್ರಾ.ಪಂ.ಗಳಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕಟ್ಟ ನಿರ್ಮಿಸಲಾಗಿದೆ. ಅದರಲ್ಲಿ ನಾರಾವಿ ಜಿ.ಪಂ. ವ್ಯಾಪ್ತಿಯಲ್ಲಿ ನೀರಿನ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಡೆಸಲು ಹೆಚ್ಚಿನ ಪ್ರೋತ್ಸಾಹ ಲಭಿಸಿದೆ. ಜಲಸಂರಕ್ಷಣೆ ಉತ್ತಮ ಕಾರ್ಯ.
– ಪ್ರೊ| ವಸಂತ್, ಎನ್ನೆಸ್ಸೆಸ್ ಘಟಕದ ಶಿಬಿರಾಧಿಕಾರಿ, ಮೂಡುಬಿದಿರೆ ಆಳ್ವಾಸ್ ಕಾಲೇಜು