ಕಾರವಾರ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧ ಆಗುತ್ತಿದ್ದಂತೆ, ಸಮುದ್ರ ದಡದಲ್ಲಿ ಬಲೆ ಹಾಕಿ ಮೀನು ಹಿಡಿಯುವ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲಾ ಕಡಲ ತೀರದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕಾಣಿಸುತ್ತಿದ್ದು, ಇನ್ನೂ ಪೂರ್ಣ ಕಣ್ಮರೆಯಾಗಿಲ್ಲ. ಇದು ಹೆಚ್ಚು ಲಾಭದಾಯಕ ಉದ್ಯಮವಲ್ಲ. ಒಂದು ಕುಟುಂಬ ಒಂದು ದಿನದ ಹೊಟ್ಟೆ ತುಂಬಲು ತೊಂದರೆ ಇಲ್ಲ ಎನ್ನಬಹುದಾಗಿದೆ.
Advertisement
ಅಬ್ಬರದ ಅಲೆ ಕಡಿಮೆಯಾದಾಗ, ಸಮುದ್ರದಲ್ಲಿ 8 ರಿಂದ 10 ಜನರ ಗುಂಪು ಎಂಡಿ ಬಲೆಯನ್ನು ಸಮುದ್ರದಲ್ಲಿ 35 ರಿಂದ 40 ಮೀಟರ್ ಉದ್ದಗಲಕ್ಕೆ ಎಳೆದು, ಸಮುದ್ರದ ಆಳಕ್ಕೆ ಬಲೆ ಮುಳುಗಿಸಿ, ಗಂಟೆಕಾಲ ಬಿಟ್ಟು, ಮತ್ತೆ ಬಲೆ ಎಳೆಯುವರು.
Related Articles
Advertisement
ಚಿನ್ನದ ಬಲೆಯಲ್ಲಿ ಚಿಮ್ಮುವ ಮೀನು: ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಬಳಸುವ ಎಂಡಿ ಬಲೆಗೆ ಸಿಕ್ಕು ಚಿಮ್ಮುವ ಮೀನನ್ನು ದಡಕ್ಕೆ ಬಂದ ಪ್ರವಾಸಿಗರು ನೋಡಲು ನೆರೆಯುವುದುಂಟು. ಅಲ್ಲದೇ ಕೆಲ ಸ್ಥಳೀಯರು ತಾಜಾ ಮೀನನ್ನು ಖರೀದಿಸಲು ಸಾಂಪ್ರದಾಯಿಕ ಮೀನುಗಾರಿಕೆ ನೋಡಲು ಬರುವವರು ಸಹ ಇದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ ಮೊದಲಿನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸಂಪ್ರದಾಯಿಕ ಮೀನುಗಾರಿಕೆ ಮಾಡುವವರು ಈಗಲೂ ಬೆರಳೆಣಿಕೆಯಷ್ಟು ಉಳಿದಿದ್ದಾರೆ ಎಂಬುದು ಸಮಾಧಾನಕರ.
ಸಾಂಪ್ರದಾಯಿಕ ಮೀನುಗಾರಿಕೆ ನೋಡುವುದೇ ಚೆಂದ. ನಮಗೆ ಇದೆಲ್ಲಾ ಹೊಸದು. ಸಮುದ್ರ ನೋಡಲು ಬಂದವರಿಗೆ ಮೀನು ಹಿಡಿಯುವುದು ಸಹ ಕಂಡಿತು.*ಶರಣಪ್ಪ ದಿಂಡೂರ, ಕುಷ್ಟಗಿ ಪ್ರವಾಸಿಗ ಸಾಂಪ್ರದಾಯಿಕ ಮೀನುಗಾರಿಕೆ ಲಾಭಕ್ಕಾಗಿ ಮಾಡುವುದಿಲ್ಲ. ಮಳೆಗಾಲದಲ್ಲಿ ಅಂದಂದಿನ ಆಹಾರಕ್ಕಾಗಿ ಮಾಡುವುದು. ಹೆಚ್ಚಿಗೆ ಮೀನು ಸಿಕ್ಕರೆ ಮಾತ್ರ ಮಾರಾಟ ಮಾಡುವೆವು.
*ಗಣಪತಿ ಹರಿಕಂತ್ರ,ಕಾರವಾರ ಕಡಲತೀರ ನಿವಾಸಿ *ನಾಗರಾಜ್ ಹರಪನಹಳ್ಳಿ