Advertisement

“ಸಂಪ್ರದಾಯದಂತೆ ಮೂಲ್ಕಿ ಸೀಮೆ ಅರಸು ಕಂಬಳ’

01:18 AM Dec 25, 2019 | mahesh |

ಪಡುಪಣಂಬೂರು: ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಅರಸು ಕಂಬಳವು ಸಂಪ್ರದಾಯಬದ್ಧವಾಗಿಯೇ ನಡೆಯಲಿದೆ. ಪರಂಪರೆಯನ್ನು ನಡೆಸಿಕೊಂಡು ಸೀಮೆಯ ಜನರ ಸಹಕಾರದಿಂದ ಶ್ರದ್ಧೆಯಿಂದ ನಡೆಯುವ ಕಂಬಳವನ್ನು ಕೃಷಿ ಬದುಕಿನ ಚಿತ್ರಣವಾಗಿ ಹಿರಿಯರು ಮೂಡಿಸಿದ್ದಾರೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.  ಪಡುಪಣಂಬೂರು ಮೂಲ್ಕಿ ಅರಮನೆಯಲ್ಲಿ ಮೂಲ್ಕಿ ಸೀಮೆಯ ಅರಸು ಕಂಬಳದ ಪೂರ್ವಭಾವಿಯಾಗಿ ನಡೆಯುವ ಕಂಬಳದ ಕುದಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಸುವ್ಯವಸ್ಥಿತವಾಗಿ ಸಜ್ಜು
ಮೂಲ್ಕಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಡಿ. 28ರಂದು ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿಯ ನೇತೃತ್ವದಲ್ಲಿ ಸಂಯೋಜಿಸಲಾಗಿರುವ ಕಂಬಳಕ್ಕೆ ಸಾವಿರಾರು
ಮಂದಿ ಆಗಮಿ ಸಲಿರುವುದರಿಂದ ಸಮಿತಿಯು ಉಪ ಸಮಿತಿಗಳನ್ನು ರಚಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗಿದೆ ಎಂದರು.

ಸಾಂಕೇತಿಕ ಚಾಲನೆ
ಈ ಸಂದರ್ಭ ಅರಮನೆಯ ಕೋಣ ಗಳನ್ನು ಚಾವಡಿಯತ್ತ ಬರಮಾಡಿಕೊಂಡು ಕಂಬಳದ ಗದ್ದೆಯ ಕರೆಯಲ್ಲಿ ಸಾಂಕೇತಿಕವಾಗಿ ಓಟ ನಡೆಸಲು ಅರಸರು ಸಂಪ್ರದಾಯದಂತೆ ಚಾಲನೆ ನೀಡಿದರು. ಮೂಲ್ಕಿ ಅರಮನೆಯ ಗೌತಮ್‌ ಜೈನ್‌, ಸಮಿತಿಯ ದಿನೇಶ್‌ ಸುವರ್ಣ ಬೆಳ್ಳಾಯರು, ಅರಮನೆಯ ಸಿಬಂದಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಂಬಳದ ಕುದಿ
ಮೂಲ್ಕಿ ಸೀಮೆಯ ಅರಸು ಕಂಬಳವು ಸಂಪ್ರದಾಯದಂತೆ ನಡೆಯುವುದರಿಂದ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆಯುವ ಕಂಬಳಕ್ಕೆ ದಿನವನ್ನು ರಾಜಪುರೋಹಿತರು ಅರಸರ ಜನ್ಮ ನಕ್ಷತ್ರದಂತೆ ನಿಗದಿ ಮಾಡುತ್ತಾರೆ. ಗದ್ದೆಯಲ್ಲಿನ ಕಂಬಳದ ಕರೆಯಲ್ಲಿ ಸ್ಪರ್ಧಾ ಪೂರ್ವಕವಾಗಿ ಕೋಣಗಳನ್ನು ತರಬೇತಿಗೊಳಿಸಲು ಮುಕ್ತ ಅವಕಾಶ ಇದೆ. ಅನಂತರ ಇಂತಿಷ್ಟೇ ದಿನದಲ್ಲಿ ಕಂಬಳದ ಕುದಿಯಂದು ಅರಮನೆಯ ಕೋಣಗಳು ಕರೆಯಲ್ಲಿ ಇಳಿದ ನಂತರ ಕಂಬಳದ ದಿನದವರೆಗೆ ಇತರ ಯಾವುದೇ ಕೋಣಗಳು ಕರೆಗೆ ಇಳಿಯಬಾರದು ಎಂಬ ಕಟ್ಟು ಕಟ್ಟಲೆಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next