Advertisement

ದಸರಾಕ್ಕೆ ಮೆರಗು ನೀಡಿದ ಸಾಂಪ್ರದಾಯಿಕ ಆಟಗಳ ಸ್ಪರ್ಧೆ

11:46 AM Oct 03, 2019 | keerthan |

ಮೈಸೂರು: ನಾಡಹಬ್ಬ ದಸರಾ ಉತ್ಸವಕ್ಕೆ ಗುರುವಾರ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಇಲಾಖೆ ಆವರಣದಲ್ಲಿ ಆಯೋಜಿಸಿದ ಪಾರಂಪರಿಕ ಆಟಗಳ ಸ್ಪರ್ಧೆ ಮೆರಗು ನೀಡಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪಗಡೆ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಒಟ್ಟು 645 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ಪಗಡೆ ಆಟ, ಅಳುಗುಳಿ ಮನೆ, ಕುಂಟೆಬಿಲ್ಲೆ ಮುಂತಾದ ಆಟಗಳ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ವಿ. ಸೋಮಣ್ಣ ಮಾತನಾಡಿ, ಪಾರಂಪರಿಕ ಆಟಗಳು ನಮ್ಮ ಪೂರ್ವಜರ ಕೊಡುಗೆ. ಇಂದಿನ ಆಧುನಿಕ ಯುಗಕ್ಕೆ ಈ ಆಟಗಳ ಅವಶ್ಯಕತೆ ಇದೆ ಎಂದರು.

ದುಶ್ಚಟಗಳಿಂದ ದೂರ ಇರಲು ಇಂಥ ಆಟಗಳ ಅವಶ್ಯಕತೆ ಇದೆ.  ನಾಡಿನ ಸಂಸ್ಕೃತಿ, ಪರಂಪರೆಯನ್ನು ಬೇರೆ ಕಡೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ.  ಅಷ್ಟೊಂದು ಶ್ರೀಮಂತ ಸಂಸ್ಕೃತಿಯನ್ನು ನಾಡು ಹೊಂದಿದೆ ಎಂದರು.

Advertisement

ಪುರಾತತ್ವ ಇಲಾಖೆ ಸೋಂಬೇರಿಗಳ ಕೂಟ ಅಂದುಕೊಂಡಿದ್ದೆ. ಆದರೆ, ಇಂತಹ ಅತ್ಯುತ್ತಮ ಪಾರಂಪರಿಕ ಆಟಗಳನ್ನು ಆಡಿಸುವ ಮೂಲಕ ಇಲಾಖೆ ಉಪ ನಿರ್ದೇಶಕಿ ನಿರ್ಮಲ ಮಠಪತಿ ಇಲಾಖೆಯನ್ನು ಚಟುವಟಿಕೆ ತಾಣವಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕರ ಬಗ್ಗೆ ಗರಂ: ಇಂತಹ ದೊಡ್ಡ ಕಾರ್ಯಕ್ರಮ ನಡೆಸುವ ಸಂದರ್ಭ ಇಲಾಖೆ ನಿರ್ದೇಶಕ ಹಾಜರಿಬೇಕು. ಆದರೆ, ಕುಂಟು ನೆಪ ಹೇಳಿಕೊಂಡು ಗೈರು ಹಾಜರಾಗುವುದು ಸರಿಯಲ್ಲ. ಅವರನ್ನು ಒಮ್ಮೆ ನನ್ನನ್ನು ಭೇಟಿಯಾಗುವಂತೆ ತಿಳಿಸಿ ಎಂದು ಉಪ ನಿರ್ದೇಶಕಿ ನಿರ್ಮಲ ಮಠಪತಿ ಅವರಿಗೆ ನಿರ್ದೇಶನ ನೀಡಿದರು.

ಸಾಮಾನ್ಯ ಜನರಿಗೆ ಸರ್ಕಾರಿ ಕಚೇರಿ ಮುಕ್ತವಾಗಿರಬೇಕು. ಅದು ಬಿಟ್ಟು ನೊಣ ಹೊಡೆಯುವ, ತೂಕಡಿಸುವ ಕೇಂದ್ರ ಆಗಬಾರದು. ಇಂಥ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next