Advertisement
ಯುಗಾದಿ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಸಾಂಪ್ರದಾಯಿಕ ಸೀರೆ ಹಾಗೂ ಲೆಹೆಂಗಾಗಳಿಗೆ ವಿಭಿನ್ನ ರೂಪ ನೀಡಲಾಗಿದ್ದು, ಸಿನಿ ಲೋಕದ ತಾರೆಯರು ಯುಗಾದಿ ಹಬ್ಬಕ್ಕೆ ತಮ್ಮ ನೆಚ್ಚಿನ ಉಡುಪುಗಳ ತಯಾರಿ ಅಲ್ಲಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ವಿನ್ಯಾಸಕಾರರು ಕೂಡ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದು, ಹಬ್ಬದ ವೇಳೆ ಧರಿಸುವ ಸೀರೆ ಅಥವಾ ಲೆಹೆಂಗಾಗಳು ನಾನಾ ಹೊಸ ರೂಪದಲ್ಲಿ ಲಭ್ಯವಾಗುತ್ತಿವೆ.
ರೇಷ್ಮೆ ಸೀರೆಯ ಖದರ್ ಇಂದಿಗೂ ಮಾಸಿಲ್ಲ. ಹಬ್ಬದ ಸಮಯದಲ್ಲಿ ರೇಷ್ಮೆ ಸೀರೆಯನ್ನು ನೀಟಾಗಿ ಧರಿಸಿ, ಟ್ರೆಡಿಷನಲ್ ಜುವೆಲರಿಯನ್ನು ಧರಿಸುವುದು ಇಂದಿಗೂ ಚಾಲ್ತಿಯಲ್ಲಿದೆ. ಟ್ರೆಡಿಷನಲ್ ರೇಷ್ಮೆ ಸೀರೆಯನ್ನು ದೇಸಿ ಶೈಲಿಯಲ್ಲಿ ಉಟ್ಟುಕೊಳ್ಳುವುದು ಎವರ್‌ಗ್ರೀನ್ ಫೆಸ್ಟಿವ್ ಸೀಸನ್ ಫ್ಯಾಷನ್ ಸ್ಟೇಟ್‌ಮೆಂಟ್ ಆಗಿದ್ದು, ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಚಾಲ್ತಿಯಲ್ಲಿದೆ. ಸಾಫr… ರೇಷ್ಮೆ ಸೀರೆಯನ್ನು ಡಬ್ಬಲ್ ನೆರಿಗೆಯನ್ನು ಮಾಡಿ ಧರಿಸಬಹುದು. ಸಣ್ಣ ಇರುವವರು ಡಬ್ಬಲ್ ಸೀರೆಯನ್ನು ಡಬ್ಬಲ್ ಫ್ಲೀಟ್ ಮಾಡಿ ವಿಭಿನ್ನವಾಗಿ ಧರಿಸಬಹುದು. ಸಿದ್ಧ ದಾವಣಿ ಲಂಗದ ಸೀರೆ
ಟೀನೇಜ್ ಹುಡುಗಿಯರಿಗೆಂದು ಇದೀಗ ದಾವಣಿ ಲಂಗದ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ದಕ್ಷಿಣ ಭಾರತದ ಶೈಲಿಯ ಮಾದರಿಯಲ್ಲಿದ್ದು, ಸುಲಭವಾಗಿ ಧರಿಸಬಹುದ ಕಾರಣ ಬೆಡಗಿಯರನ್ನು ಸೆಳೆಯುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಇದಕ್ಕೆ ಟ್ರೆಡಿಷನಲ್ ಲುಕ್ ನೀಡಿರುವುದು ಆಕರ್ಷಕವಾಗಿ ಕಾಣುತ್ತಿದೆ.
Related Articles
ಲೆಹೆಂಗಾ ಹಾಗೂ ಸೀರೆ ಬ್ಲೌಸ್ ಕಾಂಬಿನೇಷನ್ ಅಲ್ಲಿ ಈ ಸೀರೆಯನ್ನು ವಿಭಿನ್ನವಾಗಿ ಧರಿಸುವುದು ಇಂದಿನ ಯುವತಿಯರ ಟ್ರಡಿಷನಲ್ ಟ್ರೆಂಡ್‌ನ ಲಿಸ್ಟ್‌ನಲ್ಲಿ ಸೇರಿದೆ. ಈ ಸೀರೆಯ ಸೆರಗನ್ನು ಮಾಮೂಲಿ ಸೀರೆಯಂತೆ ಧರಿಸಿ, ಮುಂಭಾಗ ಅರ್ಧ ನೆರಿಗೆ ಹಿಂಭಾಗದಲ್ಲಿ ಧೋತಿಯಂತೆ ನೆರಿಗೆಗಳನ್ನು ಮಾಡಲಾಗುತ್ತದೆ. ಇದು ಸೀರೆಯನ್ನು ಧರಿಸುವ ಹೊಸ ಪ್ರಯೋಗ. ಈ ಪ್ರಯೋಗಾತ್ಮಕ ಸೀರೆ ಧರಿಸುವುದು ಕಾಲೇಜು ಯುವತಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
Advertisement
– ಸುಶ್ಮಿತಾ ಜೈನ್