Advertisement

ಮುಂಬಯಿ: ತಾಂತ್ರಿಕ ದೋಷದ ಪರಿಣಾಮ ಎನ್ ಎಸ್ ಇ ವಹಿವಾಟು ಸ್ಥಗಿತ

12:55 PM Feb 24, 2021 | |

ಮುಂಬಯಿ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಎನ್ ಎಸ್ ಇ(ರಾಷ್ಟ್ರೀಯ ಷೇರು ಸೂಚ್ಯಂಕ) ವಹಿವಾಟನ್ನು ಬುಧವಾರ(ಫೆ.24, 2021) ಸ್ಥಗಿತಗೊಂಡಿರುವುದಾಗಿ ತಿಳಿಸಿದೆ. ಸ್ಪಾಟ್ ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕದ ಲೈವ್ ಬೆಲೆ ಅಪ್ ಡೇಟ್ ಮಾಡುವುದನ್ನು ನಿಲ್ಲಿಸಿದ್ದರಿಂದ ಎನ್ ಎಸ್ ಇ ವಹಿವಾಟು ನಿಲ್ಲಿಸಿರುವುದಾಗಿ ವಿವರಿಸಿದೆ.

Advertisement

ಇದನ್ನೂ ಓದಿ:ಈ ಬಾರಿ 40 ಲಕ್ಷ ಟ್ರ್ಯಾಕ್ಟರ್ ಜತೆ ಸಂಸತ್ ಗೆ ಮುತ್ತಿಗೆ ಹಾಕ್ತೇವೆ: ಕೇಂದ್ರಕ್ಕೆ ಟಿಕಾಯತ್

ಎನ್ ಎಸ್ ಇ ಟೆಲಿಕಾಂ ಮೂಲಕ ಎರಡು ಸರ್ವೀಸ್ ಪ್ರೊವೈಡರ್ ಗಳ ಸಂಪರ್ಕ ಹೊಂದಿದೆ. ನಾವು ಟೆಲಿಕಾಂ ಸಂಪರ್ಕದ ಎರಡು ಸರ್ವೀಸ್ ಪ್ರೊವೈಡರ್ ಮೂಲಕ ವಹಿವಾಟು ನಡೆಸುತ್ತಿದ್ದು, ತಾಂತ್ರಿಕ ದೋಷದಿಂದಾಗಿ ಎನ್ ಎಸ್ ಇ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಎನ್ ಎಸ್ ಇ ಟ್ವೀಟರ್ ನಲ್ಲಿ ತಿಳಿಸಿದೆ.

ನಾವು ಆದಷ್ಟು ಶೀಘ್ರವಾಗಿ ವಹಿವಾಟು ಆರಂಭಿಸಲಿದ್ದೇವೆ. ಎನ್ ಎಸ್ ಇ ಎಲ್ಲಾ ವಹಿವಾಟನ್ನು 11.40ರವರೆಗೆ ಸ್ಥಗಿತಗೊಳಿಸಿದ್ದು, ತಾಂತ್ರಿಕ ದೋಷ ಪರಿಹಾರವಾದ ಕೂಡಲೇ ವಹಿವಾಟು ಆರಂಭಿಸುವುದಾಗಿ ಎನ್ ಎಸ್ ಇ ಹೇಳಿದೆ.

ನಿಫ್ಟಿ ಸೂಚ್ಯಂಕ 14,820ರ ಗಡಿ ತಲುಪಿತ್ತು. ಹಿಂದಿನ ದಿನ 113 ಅಂಕಗಳೊಂದಿಗೆ ವಹಿವಾಟು ಮುಕ್ತಾಯ ಕಂಡಿತ್ತು. ಏತನ್ಮಧ್ಯೆ ನಿಫ್ಟಿ ಮತ್ತು ನಿಫ್ಟಿ ಬ್ಯಾಂಕ್ ಫ್ಯೂಚರ್ಸ್ ಅಪ್ ಡೇಟ್ ನಿರಾತಂಕವಾಗಿ ನಡೆಯುತ್ತಿದೆ ಎಂದು ತಿಳಿಸಿದೆ.

Advertisement

ಭಾರತದ ಈಕ್ವಿಟಿ ಬೆಲೆ ಬುಧವಾರ ಭರ್ಜರಿ ಏರಿಕೆಯಾಗಿದ್ದು, ಇದರಿಂದಾಗಿ ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಫ್ಟಿ ಹೆಚ್ಚಿನ ಲಾಭಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next