ಮುಜಫರನಗರ : ಇಬ್ಬರು ಅಪರಿಚಿತ ದುಷ್ಕರ್ಮಿಗಳು ವ್ಯಾಪಾರಿಯೋರ್ವರ ಮೇಲೆ ಗುಂಡೆಸೆದು ಅವರಲ್ಲಿದ್ದ ನಗದು ಮತ್ತು ಅಮೂಲ್ಯ ವಸ್ತುಗಳನ್ನು ಲೂಟಿ ಗೈದ ಘಟನೆ ವರದಿಯಾಗಿದೆ.
Advertisement
ವ್ಯಾಪಾರಿ ನಿತಿನ್ ಗರ್ಗ್ ಅವರು ನಿನ್ನೆ ರಾತ್ರಿ ತಮ್ಮ ವ್ಯಾಪಾರ ವಹಿವಾಟು ಮುಗಿಸಿ ಮನೆಗೆ ಮರುಳುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಲೂಟಿ ಕೃತ್ಯ ಎಸಗಿದರು.
ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಲೂಟಿಕೋರ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.