Advertisement

ಉಪವಾಸ ನಡೆದು ಹೊರಟಿದ್ದ ಕಟ್ಟಡ ಕಾರ್ಮಿಕರಿಗೆ ಹಣ್ಣುನೀಡಿದ ವರ್ತಕ

12:08 PM Apr 15, 2020 | keerthan |

ಗಂಗಾವತಿ: ದೇಶದಲ್ಲಿ ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಕೂಲಿ ಕೆಲಸ ಮಾಡಲು ಗುಳೆ ಹೋಗಿದ್ದ ಕಾರ್ಮಿಕರು ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿದ್ದಾರೆ.

Advertisement

ತುಮಕೂರು ಜಿಲ್ಲೆಯ ಶಿರಾದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರನ್ನು ಊರುಗಳಿಗೆ ತೆರಳುವಂತೆ ಸೂಚನೆ ನೀಡಿದ್ದರಿಂದ ಶಿರಾದಿಂದ ಕೂಡ್ಲಿಗಿ ವರೆಗೆ ಲಾರಿಯಲ್ಲಿ ಬಂದು ಕೂಡ್ಲಿಗಿ ಯಿಂದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಳಿಗಾರ ಓಣಿಯ 9 ಜನ ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರು ನಡೆದುಕೊಂಡು ಹೊರಟಿದ್ದರು. ಮಂಗಳವಾರ ರಾತ್ರಿ ಕೂಡ್ಲಿಗಿ ಯಿಂದ ಹೊರಟು ಬುಧವಾರ ಬೆಳ್ಳಿಗ್ಗೆ ಗಂಗಾವತಿ ತಲುಪಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಕಾರ್ಮಿಕರಿಗೆ ನಗರದ ವರ್ತಕ ಉದಯ ಕುಮಾರ ಎನ್ನುವ ಯುವಕ 10 ಕೆಜಿಗೂ ಅಧಿಕ ಕರಬೂಜಾ ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೋವಿಡ್-19 ವೈರಸ್ ಹರಡುವ ಹಿನ್ನೆಲೆಯಲ್ಲಿ ದೇಶದಲ್ಲಿ ಕರ್ಪ್ಯೂ ಮುಂದುವರಿದಿದ್ದು ದುಡಿದು ಊಟ ಮಾಡುವವರ ಸ್ಥಿತಿ ಗಂಭೀರವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next