Advertisement

ಎಚ್ಚರಿಕೆ ಮಧ್ಯೆಯೂ ವ್ಯಾಪಾರ-ವಹಿವಾಟು

04:42 PM Mar 25, 2020 | Suhan S |

ಗಂಗಾವತಿ: ಕೋವಿಡ್ 19 ವೈರಸ್‌ ಹರದಡಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ಇಡೀ ರಾಜ್ಯವನ್ನು ಲಾಕ್‌ ಡೌನ್‌ ಮಾಡಿದ್ದರೂ ಇದನ್ನು ಉಲ್ಲಂಘಿಸುವ ಘಟನೆಗಳು ಗಂಗಾವತಿ ಮತ್ತು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಕಂಡು ಬರುತ್ತಿವೆ. ನಗರ ಪ್ರದೇಶದಲ್ಲಿ ತರಕಾರಿ ಮಾರ್ಕೆಟ್‌ನಲ್ಲಿ ಬೆಳಗ್ಗೆ ಜನರು ತರಕಾರಿ, ಹೂವು, ಹಣ್ಣು ಖರೀದಿ ಮಾಡಲು ಗುಂಪು ಗುಂಪಾಗಿ ಸೇರಿ ಖರೀದಿ ಮಾಡುತ್ತಿದ್ದ ದೃಶ್ಯ ಕಂಡುಬಂತು. ಕೇಂದ್ರ ಬಸ್‌ ನಿಲ್ದಾಣ ಪೂರ್ಣ ಸ್ಥಬ್ಧವಾಗಿತ್ತು. ಹಾಲು ಆಸ್ಪತ್ರೆ ಮತ್ತು ಔಷಧಿ  ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸಿದವು. ವಾರ್ಡ್‌ಗಳ ಒಳಗಡೆ ಸಣ್ಣಪುಟ್ಟ ಹೊಟೇಲ್‌ ಕಿರಾಣಿ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

Advertisement

ಲಾಠಿ ಚಾರ್ಜ್‌: ಡೇಲಿ ಮಾರ್ಕೆಟ್‌ ಮತ್ತು ವಾರದ ಸಂತೆ ಬಯಲು ಪ್ರದೇಶದಲ್ಲಿ ಆದೇಶ ಉಲ್ಲಂಘಿಸಿ ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ವ್ಯಾಪಾರಿಗಳು ಮತ್ತು ಜನರನ್ನು ಚದುರಿಸಿದರು. ಶ್ರೀಚನ್ನಬಸವಸ್ವಾಮಿ, ಇಂದಿರಾ ಗಾಂಧಿ, ಶ್ರೀಕೃಷ್ಣದೇವರಾಯ ರಾಣಾಪ್ರತಾಪಸಿಂಗ್‌ ವೃತ್ತಗಳಲ್ಲಿ ಬೈಕ್‌ ಸವಾರರು ಆಟೋ ಹಾಗೂ ಟಂಟಂ ವಾಹನಗಳ ಚಾಲಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next