ಹೊಳೆನರಸೀಪುರ: ರಾಜ್ಯ ಸರ್ಕಾರ ಸಣ್ಣ ಮತ್ತು ಅತೀಸಣ್ಣ ರೈತರು ಬೆಳೆದ ರಾಗಿಯನ್ನು ರೈತರುಗಳು ಇಂದು ಕೃಷಿ ಮಾರುಕಟ್ಟೆ ಆವರಣದಲ್ಲಿ ತಮ್ಮ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಗೆ ಒಪ್ಪಿಸಿದರು.
ಮೇ ಮೊದಲ ವಾರದಲ್ಲಿ ಕರ್ನಾಟಕ ಸರ್ಕಾರ ಮೂರನೇ ಹಂತದಲ್ಲಿ 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಅವಕಾಶ ನೀಡಿ ಅವಕಾಶ ನೀಡಲಾಗಿತ್ತು. 2521ರೈತರಿಂದ ರಾಗಿ ಖರೀದಿ: ತಾಲೂಕಿನಲ್ಲಿ 2521 ಮಂದಿ ನೋಂದಣಿ ಮಾಡಿಸಿದ್ದಲ್ಲದೆ, ಸುಮಾರು 36,605 ಕ್ವಿಂಟಲ್ ರಾಗಿಯನ್ನು ಪ್ರತಿ ಕ್ವಿಂಟಲ್ 3375 ರೂ.ಗಳಿಗೆ ನೀಡುವುದಾಗಿ ಒಪ್ಪಂದ ನಡೆದಿತ್ತು.
ಒಪ್ಪಂದದ ಪ್ರಕಾರ ಮೇ 25 ರಿಂದ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತಾಲೂಕು ಆಹಾರ ನಿರೀಕ್ಷಕರು ಪ್ರಚುರ ಸಹ ಪಡಿಸಿದರು. ಆದರೆ ರೈತರು ಮೇ 27ರಂದು ತಮ್ಮ ವಾಹನಗಳಲ್ಲಿ ಕೃಷಿ ಮಾರುಕಟ್ಟೆ ಅವರಣಕ್ಕೆ ರಾಗಿಯನ್ನು ತಂದು ಒಪ್ಪಿಸಿದರು. ಮೇ 27 ಶುಕ್ರವಾರ ಬೆಳಂಬೆಳಗ್ಗೆ ರೈತರು ತಮ್ಮ ವಾಹನಗಲ್ಲಿ ರಾಗಿಯನ್ನು ತುಂಬಿಕೊಂಡು ಬಂದು ಸಾಲಾಗಿ ನಿಂತು ರಾಗಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಗೆ ಒಪ್ಪಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಒತ್ತಾಸೆ: ರಾಗಿ ಖರೀದಿಗೆ ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದ ಪರಿಣಾಮ ರಾಜ್ಯದಲ್ಲಿ ಮೂರು ಭಾರೀ ರಾಗಿ ಖರೀದಿಗೆ ಅವಕಾಶ ದೊರೆಯಲು ಸಾಧ್ಯವಾಯಿತೆಂದು ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ರೈತ ನಾಗರಾಜು ಆಕ್ಷೇಪ: ಮಲ್ಲಪ್ಪನಹಳ್ಳಿಯ ರೈತ ನಾಗರಾಜು ಮಾತನಾಡಿ, ಖರೀದಿಗೆ ಮೇ 25 ರಂದೆ ಅವಕಾಶ ನೀಡಿದ್ದರೂ ಸಹ ನಮ್ಮಿಂದ ಖರೀದಿ ಆರಂಭಿಸಿದ್ದೆ. ಇಂದು, ಕಳೆದ ಮೂರು ದಿನಗಳಿಂದ ಕೃಷಿ ಮಾರುಕಟ್ಟೆಯಲ್ಲಿ ತಾವು ತಂಗಿರುವುದಾಗಿ ತಿಳಿಸಿ, ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ರಾಗಿಯನ್ನು 1600 ರೂ.ಗಳಿಂದ 1800 ರೂ.ಗಳಿಗೆ ವರ್ತಕರುಗಳು ಕೇಳುತ್ತಿದ್ದಾರೆ. ಆದರೆ, ತಾವುಗಳು ಮಾರಾಟ ಮಂಡಳದ ಮೂಲಕ ನೀಡಿದರೆ ಒಳ್ಳೆಯ
ಬೆಂಬಲ ಬೆಲೆ ದೊರೆಯುತ್ತದೆ ಎಂಬ ಉದ್ದೇಶದಿಂದ ನಾವುಗಳು ನೀಡಲು ಬಂದಿದ್ದೇವೆ. ಆದರೆ ಅಧಿಕಾರಿಗಳು ನಮ್ಮನ್ನು ಕಳೆದ ಮೂರು ದಿನಗಳಿಂದ ಕಾಯುವಂತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.