ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ವಿಶ್ವಾಸ ಮತ ಯಾಚನೆಗೂ ಮುನ್ನ ತಾನು ನೀಡಿರುವ ಮೂವರು ಆಯ್ಕೆಗಳನ್ನು ಪಾಕ್ ಸೇನೆ ನಿರಾಕರಿಸಿರುವುದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ:ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕೆ 5 ಕೋಟಿ ರೂ.ಗಳ ಮೂಲಧನ: ಸಿಎಂ ಬೊಮ್ಮಾಯಿ
ರಾಜೀನಾಮೆ ನೀಡುವುದು, ಅವಧಿ ಪೂರ್ವ ಚುನಾವಣೆ ನಡೆಸುವುದು ಅಥವಾ ವಿಶ್ವಾಸ ಮತ ಯಾಚಿಸುವುದು ಸೇರಿದಂತೆ ಮೂರು ಆಯ್ಕೆ ನೀಡಬೇಕೆಂದು ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದು ಇದನ್ನು ಪಾಕ್ ಸೇನೆ ನಿರಾಕರಿಸಿರುವುದಾಗಿ ವರದಿ ವಿವರಿಸಿದೆ.
ಪಾಕ್ ನಲ್ಲಿ ಮಿಲಿಟರಿ ಆಡಳಿತ ನಡೆದದ್ದೇ ಹೆಚ್ಚು:
Related Articles
ಪಾಕಿಸ್ತಾನದಲ್ಲಿನ ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಗಮನಿಸಿದಾಗ, ಈ ದೇಶದಲ್ಲಿ ಯಾವೊಬ್ಬ ಪ್ರಧಾನಿಯೂ ಪೂರ್ಣಾವಧಿ ಪೂರ್ಣಗೊಳಿಸಿಲ್ಲ. 2018ರಲ್ಲಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಚುನಾವಣೆಯ ಸಂದರ್ಭದಿಂದಲೇ ಗಂಭೀರವಾದ ಬೆದರಿಕೆಯನ್ನು ಎದುರಿಸುತ್ತಿರುವುದಾಗಿ ವರದಿ ಹೇಳಿದೆ.
ಇಮ್ರಾನ್ ಖಾನ್ ಆಡಳಿತದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ವಿದೇಶಿ ನೀತಿಯ ದುರುಪಯೋಗದ ಬಗ್ಗೆ ವಿರೋಧ ಪಕ್ಷಗಳು ಆರೋಪಿಸಿವೆ. ಕುತೂಹಲದ ಸಂಗತಿ ಏನೆಂದರೆ ಪಾಕಿಸ್ತಾನದ ಇತಿಹಾಸದಲ್ಲಿಯೇ ಯಾವೊಬ್ಬ ಪ್ರಧಾನಿಯೂ 5 ವರ್ಷ ಕಾಲ ಅಧಿಕಾರ ನಡೆಸಿಲ್ಲ. ಕೇವಲ ಮೂವರು ಪ್ರಧಾನಿಗಳು ನಾಲ್ಕು ವರ್ಷ ಅವಧಿ ಪೂರೈಸಿದ್ದು, ಎರಡು ಚುನಾಯಿತ ಸರ್ಕಾರಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದವು.
ಇದನ್ನು ಹೊರತುಪಡಿಸಿ 1958ರಿಂದ ಈವರೆಗೆ ಪಾಕಿಸ್ತಾನದಲ್ಲಿ ಮಿಲಿಟರಿಯೇ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಪಾಕಿಸ್ತಾನದ ಇತಿಹಾಸದಲ್ಲಿ ಮಿಲಿಟರಿ ಹಾಗೂ ಐಎಸ್ ಐಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ವರದಿ ವಿವರಿಸಿದೆ.