Advertisement

Ayodhya: ಅಯೋಧ್ಯೆಯಲ್ಲಿ ಹಳೆಯ ಮಂದಿರದ ಕುರುಹುಗಳು ಪತ್ತೆ

08:34 PM Sep 13, 2023 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅದಕ್ಕೆ ಸಂಬಂಧಿಸಿದ ಉತ್ಖನನ ಕಾರ್ಯದ ವೇಳೆ ಬಹಳ ವರ್ಷಗಳ ಹಿಂದೆ ಇದ್ದ ರಾಮ ಮಂದಿರದ ಕುರುಹುಗಳು ಪತ್ತೆಯಾಗಿದೆ. ಅಗೆಯುವ ವೇಳೆ ವಿವಿಧ ವಿನ್ಯಾಸಗಳು ಇರುವ ದೇವರ ಮೂರ್ತಿಗಳು, ಕಂಬಗಳು ಪತ್ತೆಯಾಗಿವೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಟ್ವೀಟ್‌ ಮಾಡಿದ್ದಾರೆ. ಅಗೆತದ ವೇಳೆ ಸಿಕ್ಕಿರುವ ವಿವಿಧ ದೇವರ ಫೋಟೋಗಳನ್ನು ತಾತ್ಕಾಲಿಕ ಶೆಡ್‌ನ‌ಲ್ಲಿ ಸಂಗ್ರಹಿಸಿ ಇರಿಸಲಾಗಿದೆ.

Advertisement

ಇದೇ ವೇಳೆ, ಮಂದಿರ ನಿರ್ಮಾಣದ ಕೆಲಸ ಭರದಿಂದ ಸಾಗಿದ್ದು, ಮುಂದಿನ ವರ್ಷದ ಜನವರಿ ಮೂರನೇ ವಾರದಿಂದ ದೇಗುಲ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಆರಂಭವಾಗುವ ಸಾಧ್ಯತೆಗಳಿವೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next