Advertisement
ವಿವಿಧ ಆಟಿಕೆಗಳುಟಾಯ್ ಡಿಸೈನಿಂಗ್ ಉದ್ಯಮದಲ್ಲಿ ಕಚ್ಚಾ ವಸ್ತುಗಳಾದ ಪ್ಲಾಸ್ಟಿಕ್, ಸೆರಾಮಿಕ್, ಲೋಹ, ಮರ ಮತ್ತು ಮೃದು ವಸ್ತುಗಳಾದ ಬಟ್ಟೆ, ಹತ್ತಿ, ಫೈಬರ್, ರಬ್ಬರ್ ಇವುಗಳನ್ನು ಬಳಸಿ ಆಟಿಕೆಗಳನ್ನು ರೂಪಿಸಲಾಗುತ್ತದೆ. ಆಟಿಕೆಗಳ ವಿನ್ಯಾಸ ಮಾಡುವುದಷ್ಟೇ ಅಲ್ಲದೆ, ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವುದು ಬಹಳ ಮುಖ್ಯ. ಅಂದರೆ ಕಣ್ಣಿಗೆ ಆಕರ್ಷಕವಾಗಿ ಕಾಣುವಂತೆ ರೂಪಿಸುವುದಷ್ಟೇ ಅಲ್ಲದೆ ಸುರಕ್ಷತೆಯಂಥ ಮಾನದಂಡಗಳನ್ನೂ ಗಮನದಲ್ಲಿರಿಸಿಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ಆಟಿಕೆಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಆಟಿಕೆಗಳ ಉದ್ಯಮದಲ್ಲಿಯೂ ಅನೇಕ ವಿಧಗಳಿವೆ. ಸಾಫ್ಟ್ ಟಾಯ್ಸ, ಆಕ್ಷನ್ ಹೀರೋ ಫಿಗರ್, ಆರ್ಟ್ಸ್ ಮತ್ತು ಕ್ರಾಫ್ಟ್, ಬಿಲ್ಡಿಂಗ್ ಸೆಟ್‌ಗಳು, ಗೇಮ್/ ಪಜಲ್‌ಗಳು, ಹೊರಾಂಗಣ ಆಟಿಕೆಗಳು ಮತ್ತು ನ್ಪೋರ್ಟ್ಸ್ ಟಾಯ್ಸ ಎಂದು ಸ್ಥೂಲವಾಗಿ ವಿಂಗಡಿಸಬಹುದು.
ತೊಟ್ಟಿಲ ಮಗುವಿಗಾಗಿ ಅತಿ ಸಾಧಾರಣ ಸಾಫ್ಟ್ ಟಾಯ್‌ನಿಂದ ಮೊದಲುಗೊಂಡು, ಟೀನೇಜರ್‌ಗಳು ಮೆಚ್ಚುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಟಾಯ್‌ವರೆಗೆ ಎಲ್ಲವನ್ನೂ ರೂಪಿಸುವ ಛಾತಿ ಇರಬೇಕು. ಪ್ರಾಡಕ್ಟ್ ಡಿಸೈನ್, ಮಟೀರಿಯಲ್ ಡಿಸೈನ್, ಗೇಮ್ ಡಿಸೈನ್ ವಿಷಯಗಳಲ್ಲಿಯೂ ಪರಣತಿ ಹೊಂದಿರಬೇಕಾಗುತ್ತದೆ. ಈ ವಿಷಯಗಳಲ್ಲಿ ಸ್ಪೆಷಲೈಜೇಷನ್ ಮಾಡಬಹುದು. ಟಾಯ್ ಡಿಸೈನ್ ಕೋರ್ಸುಗಳನ್ನು ಮಾಡುವಾಗಲೇ ತನ್ನ ಆಸಕ್ತಿಯನ್ನು ಗುರುತಿಸಿಕೊಂಡು ಆ ವಿಭಾಗದಲ್ಲಿ ಪರಿಣತಿ ಸಾಧಿಸಬಹುದು. ಇಂಟರ್ನ್ಶಿಪ್ ಮಾಡುವಾಗ ವಿವಿಧ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಳ್ಳುವ ಸಮಯದಲ್ಲಿ ಆಕಾಂಕ್ಷಿಗಳು ತಮ್ಮ ಆಸಕ್ತಿಯನ್ನು ಕಂಡುಕೊಳ್ಳಬಹುದು. ಇರಬೇಕಾದ ಕೌಶಲಗಳು
ಸೃಜನಶೀಲತೆ ಮತ್ತು ಹೊಸದನ್ನು ಸಾಧಿಸುವ ಹುಮ್ಮಸ್ಸು
ಉತ್ತಮ ಸಂವಹನಶಕ್ತಿ, ಹಾಸ್ಯಪ್ರಜ್ಞೆ
ಫ್ಯಾಬ್ರಿಕ್ ಜ್ಞಾನ
ನಾಯಕತ್ವ, ಪ್ರಸಂಟೇಷನ್ ಸ್ಕಿಲ್ಸ್
ಸಂಶೋಧನಾ ಪ್ರವೃತ್ತಿ
ಸೂಕ್ಷ್ಮ ವಿವರಗಳತ್ತ ಗಮನ ನೀಡುವ ತಾಳ್ಮೆ
ಇಅಈ ಪರಿಣತಿ
ಚಿತ್ರ ಬಿಡಿಸುವ ಸಾಮರ್ಥ್ಯ
ಮಾಡೆಲ್ ಮೇಕಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್
ಹೊಲಿಗೆ, ಅಲಂಕಾರಿಕ ಕಲೆ
Related Articles
ಸೈನ್ಸ್, ಕಾಮರ್ಸ್, ಆರ್ಟ್ಸ್ ವಿಭಾಗಗಳಲ್ಲಿ ಪಿ.ಯು.ಸಿ. ಮುಗಿಸಿರುವ ಯಾವುದೇ ವಿದ್ಯಾರ್ಥಿ ಟಾಯ್ ಡಿಸೈನ್ ಪದವಿ ಅಧ್ಯಯನಕ್ಕೆ ಸೇರಬಹುದು. ಗುಜರಾತ್‌ನ NID (National Institute of Design), ವಿದ್ಯಾಸಂಸ್ಥೆ ಭಾರತದಲ್ಲೇ ಟಾಯ್ ಡಿಸೈನಿಂಗ್‌ಗೆ ಹೆಸರುವಾಸಿ. ದೇಶದ ಹಲವೆಡೆ ಆನ್‌ಲೈನ್ ಸರ್ಟಿಫಿಕೇಷನ್ ಕೋರ್ಸ್‌ಗಳು ಕೂಡಾ ಇವೆ. NIDಯಲ್ಲಿ ಸ್ನಾತಕೋತ್ತರ ಪದ (M.Des) ಕೂಡ ಲಭ್ಯವಿದೆ. ಪದವಿ, ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ಅವರಿಗೆ ಡಿಸೈನಿಂಗ್‌ನ ಮೂಲ ತಣ್ತೀಗಳನ್ನು, ಕಚ್ಚಾ ವಸ್ತುಗಳ ಬಳಕೆಯನ್ನು, ಮುದ್ರಣ, ತಂತ್ರಜ್ಞಾನ, ಮಾರುಕಟ್ಟೆ ಅಧ್ಯಯನ, ಮಾರಾಟ ಜಾಲ- ಇವೆಲ್ಲವನ್ನು ಕಲಿಸಲಾಗುವುದು.
Advertisement
ಅವಕಾಶಗಳುಟಾಯ್ ಮೇಕರ್ ಅಥವಾ ಪ್ರಾಡಕ್ಟ್ ಡಿಸೈನರ್ ಆಗಿ ಆಟಿಕೆ ಉದ್ಯಮವನ್ನು ಪ್ರವೇಶಿಸಬಹುದು. ಉನ್ನತ ಪದವಿ ಹೊಂದಿದ್ದರೆ ಟಾಯ್ ಇಂಜಿನಿಯರ್ ಆಗಿಯೂ ಸೇವೆ ಆರಂಭಿಸಬಹುದು. ಜಾಗತಿಕ ಮಟ್ಟದಲ್ಲಿ ಹ್ಯಾಮ್ಲಿàಸ್, ಲೆಗೋಸ್, ಟಾಯ್ ಆರ್ ಅಸ್, ಹಾಟ್‌ವೀಲ್ಸ್, ಹ್ಯಾನ್ಸ್‌ಬ್ರೋ ಮುಂತಾದ ಕಂಪೆನಿಗಳಲ್ಲಿ ಹಾಗೂ ಭಾರತದಲ್ಲಿ ಫನ್‌ಸ್ಕೂಲ್, ಫಸ್ಟ್ ಕ್ರೈ ಮುಂತಾದ ಕಂಪೆನಿಗಳಲ್ಲಿ ಟಾಯ್ ಡಿಸೈನರ್‌ಗಳಿಗೆ ಅವಕಾಶವಿದೆ. ರಘು ವಿ., ಪ್ರಾಂಶುಪಾಲರು