Advertisement

ಆಗುಂಬೆ ಘಾಟಿಯಲ್ಲಿ 20ಕ್ಕೂ ಅಧಿಕ ಮಂಗಗಳಿಗೆ ವಿಷಪ್ರಾಶನ

11:40 AM Oct 28, 2017 | Team Udayavani |

ಹೆಬ್ರಿ: ನಾಡಾ³ಲು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿ ಎರಡನೇ ಹೇರ್‌ಪಿನ್‌ ತಿರುವಿನ ರಸ್ತೆ ಬದಿಯಲ್ಲಿ ಇಪ್ಪತ್ತಕ್ಕೂ ಅಧಿಕ ಕಾಡು ಮಂಗಗಳು ವಿಷ ಪದಾರ್ಥ ತಿಂದು ಸಾವನ್ನಪ್ಪಿದ‌ ಘಟನೆ ಅ.26ರಂದು ರಾತ್ರಿ ನಡೆದಿದೆ.

Advertisement

ಕಾಡು ಪ್ರಾಣಿಗಳಿಗಿಂತ ಕಡೆಯಾದ ಕಟುಕ ಹೃದಯಿಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದ ಮಂಗಗಳಿಗೆ ಯಾರೋ ಕಿಡಿಗೇಡಿಗಳು ಅವುಗಳಿಗೆ ಆಹಾರದಲ್ಲಿ ವಿಷ ಉಣಿಸಿ ಚೀಲದಲ್ಲಿ ಕಟ್ಟಿ ರಾತ್ರೋ ರಾತ್ರಿ ಘಾಟಿಯ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಜೀವನ್ಮರಣ ಸ್ಥಿತಿಯಲ್ಲಿ ಹೊರಳಾಡುತ್ತಿದ್ದ ಮಂಗಗಳ ರಾಶಿಯನ್ನು ಗಮನಿಸಿದ ಸ್ಥಳೀಯರು ಹಾಗೂ ಕೆಲವು ಪ್ರಯಾಣಿಕರು ಮಂಗಗಳಿಗೆ ನೀರು ಕುಡಿಸಿ ಬದುಕಿಸಲು ಬಹಳ ಪ್ರಯತ್ನಪಟ್ಟರೂ ವಿಫಲವಾಗಿವೆ. 

ಇತ್ತೀಚೆಗೆ ಇಂತಹ ಮೂಕ ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಸಾಯಿಸುತ್ತಿರುವುದು ಹೆಚ್ಚಾಗುತ್ತಿದ್ದು ತಪ್ಪಿತಸ್ಥರಿಗೆ  ಕಠಿನ ಶಿಕ್ಷೆಯಾಗಬೇಕು ಹಾಗೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ವಲಯ ವನ್ಯಜೀವಿ ಇಲಾಖೆಯವರು ಆಗಮಿಸಿ ಮೃತ ಮಂಗಗಳ ದಫ‌ನದ ವಿಲೇವಾರಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next