Advertisement
6ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಸೋಲು ಕೂಡ ಏರುಪೇರಿನ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಅವರನ್ನು ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್ 6-4, 6-4ರಿಂದ ಮಣಿಸಿದರು.
ಅಗ್ರ ಶ್ರೇಯಾಂಕ ದ ನವೋಮಿ ಒಸಾಕಾ ಪೋಲ್ಯಾಂಡ್‌ನ ಮಾಗಾx ಲೆನೆಟ್ ಅವರನ್ನು 6-2, 6-4ರಿಂದ ಮಣಿಸಿ 3ನೇ ಸುತ್ತಿಗೆ ಏರಿದರು. ಒಸಾಕಾ ಎದುರಾಳಿ ಅಮೆರಿಕದ 15ರ ಹರೆಯದ ಪ್ರತಿಭಾನ್ವಿತ ಆಟಗಾರ್ತಿ ಕೊಕೊ ಗಾಫ್. ದಿನದ ಇನ್ನೊಂದು ಪಂದ್ಯದಲ್ಲಿ ಅವರು ಹಂಗೇರಿಯ ಟೈಮಿಯಾ ಬಬೋಸ್ ವಿರುದ್ಧ 6-2, 4-6, 6-4 ಅಂತರದ ಜಯ ಸಾಧಿಸಿದರು. ಈ ಪಂದ್ಯಕ್ಕಾಗಿ ಅಮೆರಿಕದ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 2 ಬಾರಿಯ ರನ್ನರ್ ಅಪ್ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಅಮೆರಿಕದ ಡೇನಿಯಲ್ ಕೊಲಿನ್ಸ್ ವಿರುದ್ಧ 4-6, 6-3, 6-4ರಿಂದ; ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅಮೆರಿಕದ ಮತ್ತೋರ್ವ ಆಟಗಾರ್ತಿ ಅಲಿಸನ್ ರಿಸ್ಕೆ ವಿರುದ್ಧ 6-4, 6-3 ಅಂತರದಿಂದ ಮೇಲುಗೈ ಸಾಧಿಸಿದರು. ಆದರೆ ಅಮೆರಿಕದ ಸೋಫಿಯಾ ಕೆನಿನ್ 3ನೇ ಸುತ್ತು ತಲಪುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಜರ್ಮನಿಯ ಲಾರಾ ಸಿಗ¾ಂಡ್ ವಿರುದ್ಧ 7-6 (7-4), 6-0 ಅಂತರದ ಗೆಲುವು ಒಲಿಸಿಕೊಂಡರು.
Related Articles
Advertisement