Advertisement

45 ಕೋಟಿ ವೆಚ್ಚದಲ್ಲಿ ಪಟ್ಟಣ ಅಭಿವೃದ್ಧಿ: ನಾಯ್ಕ

05:28 PM Feb 06, 2018 | Team Udayavani |

ಮರಿಯಮ್ಮನಹಳ್ಳಿ: ಪಟ್ಟಣ ಅಭಿವೃದ್ಧಿಗಾಗಿ ಈಗಾಗಲೇ 45 ಕೋಟಿ ರೂ. ಅನುದಾನ ತರುವುದರೊಂದಿಗೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಎಸ್‌.ಭೀಮಾನಾಯ್ಕ ತಿಳಿಸಿದರು.

Advertisement

ಪಟ್ಟಣದ ಆರಾಧ್ಯ ದೇವತೆ ಶ್ರೀರಾಂಪುರ ದುರ್ಗಮ್ಮದೇವಿ ಜೀರ್ಣೋದ್ಧಾರಗೊಂಡ ದೇವಸ್ಥಾನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಆಗಿರದಿದ್ದ ಅಭಿವೃದ್ಧಿ ಕಾರ್ಯಗಳು ಈಗ ಪಟ್ಟಣದಲ್ಲಿ ಆಗಿದ್ದು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲೆಡೆ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು. ನಗರೋತ್ಥಾನದಲ್ಲಿ ಬಂದಿರುವ ಅನುದಾನದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಸವಿತಾ ಸಮಾಜಕ್ಕೆ 5 ಲಕ್ಷ ರೂ. ಅನುದಾನ, ಬ್ರಾಹ್ಮಣ ಸಮಾಜಕ್ಕೆ 3 ಲಕ್ಷ ರೂ. ಅನುದಾನ, ಈಗ ಈಡಿಗರ ಸಮಾಜಕ್ಕೆ
ಅನುದಾನ ನೀಡಲಾಗಿದೆ ಎಂದು ತಿಳಿಸಿದರು. 

ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಪಟ್ಟಣಕ್ಕೆ ಎಸ್‌ ಸಿ-ಎಸ್‌ಟಿಗೆ ಈವರೆಗೆ 1070 ಮನೆಗಳು ಮಂಜೂರಾಗಿದ್ದು, ಅವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ 500 ಮನೆಗಳು ಸಾಮಾನ್ಯ ವರ್ಗದವರಿಗೆ ಬಂದಿದ್ದು, ಅದರಲ್ಲಿ ಮರಿಯಮ್ಮನಹಳ್ಳಿ ಹಾಗೂ ಕೊಟ್ಟೂರು ಪಟ್ಟಣಕ್ಕೆ 150 ಮತ್ತು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಗೆ 200 ಮನೆಗಳಿಗೆ ಅತೀ ಶೀಘ್ರದಲ್ಲಿ
ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ಅವಧಿಯಲ್ಲಿನ ಶಾಸಕರು ತಮ್ಮ ಸ್ವಗ್ರಾಮಕ್ಕೆ ಏನನ್ನೂ ಮಾಡಿಲ್ಲ. ಆದರೆ ನನ್ನ ಅವಧಿಯಲ್ಲಿ ಮರಿಯಮ್ಮನಹಳ್ಳಿ ತಾಂಡಕ್ಕೆ ಸಿಸಿ ರಸ್ತೆ, 200 ಮನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು. ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ವಿವಿಧ ಕಾಮಗಾರಿಗಳಿಗಾಗಿ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಾರೆ ಎಂದು ತಿಳಿಸಿದರು.

ಪಪ ಉಪಾಧ್ಯಕ್ಷ ಬಂಗಾರು ಮಂಜುನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅಧಿಕಾರಿ ಮಹೇಶ, ಸದಸ್ಯ ವಿಷ್ಣುನಾಯ್ಕ, ಎಸ್‌.ನವೀನ್‌ಕುಮಾರ್‌, ಲಕ್ಷ್ಮಿ
ನಾರಾಯಣಸ್ವಾಮಿ, ಎನ್‌.ಸತ್ಯನಾರಾಯಣ, ಎಪಿಎಂಸಿ ಸದಸ್ಯ ಕುರಿ ಶಿವಮೂರ್ತಿ, ಗೋವಿಂದರ ಪರಶುರಾಮ್‌, ನಸ್ರಿನ್‌ ಸುಭಾನ್‌, ಎ.ರೇಷ್ಮಾ ಸುಭಾನ್‌, ಆದಿಮನಿ ಹುಸೇನ್‌ ಬಾಷಾ, ಎನ್‌.ಬುಡೇನ್‌ ಸಾಬ್‌, ರೇಖ್ಯಾನಾಯ್ಕ, ಬಿ.ವಿಜಯಕುಮಾರ್‌, ವಸ್ತ್ರದ ಆನಂದ, ಡಣಾಪುರ ಗ್ರಾಪಂ ಅಧ್ಯಕ್ಷ ಗಾಂಜಿ ಭೀಮಪ್ಪ, ಸದಸ್ಯೆ ಸುನಂದಮ್ಮ, ಬಿ.ತಾಯಪ್ಪ, ತಳವಾರ ಹುಲುಪ್ಪ, ಬಿ.ಎಂ.ಎಸ್‌. ಕೊಟ್ರೇಶ್‌, ಕೆ.ಎಚ್‌.ಸುಬ್ರಮಣಿ, ಕೆ.ಮಾರುತೇಶ್‌, ಬಿ.ಎಂ. ಎಸ್‌. ರಾಜೀವ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next