Advertisement

ಟವರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ: ಬಿ.ವೈ. ರಾಘವೇಂದ್ರ

02:12 PM May 19, 2020 | mahesh |

ಶಿವಮೊಗ್ಗ: ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬಳಕೆದಾರರ ಅಗತ್ಯಕ್ಕೆ ಪೂರಕವಾಗಿ ಜಿಯೋ ಮತ್ತು ಏರ್‌ಟೆಲ್‌ನಂತಹ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳ ಸಹಭಾಗಿತ್ವದಲ್ಲಿ ಟವರ್‌ಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಸೋಮವಾರ ಖಾಸಗಿ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು, ಆಡಳಿತಾ ಧಿಕಾರಿಗಳು, ಬಿ.ಎಸ್‌. ಎನ್‌.ಎಲ್‌. ಅಧಿ ಕಾರಿಗಳು ಹಾಗೂ ಜಿಲ್ಲಾಕಾರಿಗಳು ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಮೊಬೈಲ್‌ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮೊಬೈಲ್‌ ಸೇವೆ ದೊರೆಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಗಾಗ್ಗೆ ದೂರುಗಳು ಕೇಳಿ ಬರುತ್ತಿವೆ.

ನಗರದ ಮಿತಿಯಲ್ಲಿದ್ದರೂ ಮೊಬೈಲ್‌ ಕಿರಿಕಿರಿ, ಅಗತ್ಯಕ್ಕಿರುವಷ್ಟು ಇಂಟರ್‌ನೆಟ್‌ ವೇಗ ದೊರೆಯುತ್ತಿಲ್ಲ. ಆದ್ದರಿಂದ ತರಂಗಾತರಂಗಳನ್ನು ಹೆಚ್ಚಿಸಲು ಉದ್ದೇಶಿದ್ದು, ಈಗಾಗಲೇ ಖಾಸಗಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಈಗಾಗಲೇ ಟವರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.

ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 120 ಟವರ್‌ಗಳ ಅಗತ್ಯವಿದ್ದು, ಕೂಡಲೇ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿ.ಎಸ್‌.ಎನ್‌.ಎಲ್‌. ಟವರ್‌ ನಿರ್ಮಾಣ ಮಾತ್ರವಲ್ಲದೇ ಜಿಯೋ ಮತ್ತು ಏರ್‌ಟೆಲ್‌ ನ ಪ್ರತಿ ಕಂಪನಿಗಳಿಗೆ 69 ಟವರ್‌ಗಳನ್ನು ನಿರ್ಮಿಸಲು ಗುರಿ ನೀಡಲಾಗಿತ್ತು. ಪ್ರಸ್ತುತ ಜಿಯೋ ಸಂಸ್ಥೆಯು 37 ಮತ್ತು ಏರ್‌ಟೆಲ್‌ ಸಂಸ್ಥೆಯು 25 ಟವರ್‌ಗಳನ್ನು ನಿರ್ಮಿಸಿದ್ದು, ಮಲೆನಾಡು ಭಾಗದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದಾಗಿ ಉಳಿದ ಟವರ್‌ಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗಿರಬಹುದಾದ ಸಮಸ್ಯೆಗಳ ಕುರಿತು ಒಂದು ವಾರದೊಳಗಾಗಿ ಜಿಲ್ಲಾಧಿಕಾರಿಗಳು ಹಾಗೂ ಬಿ.ಎಸ್‌.ಎನ್‌.ಎಲ್‌. ಅ ಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ 241 ಬಿ.ಎಸ್‌.ಎನ್‌.ಎಲ್‌. ಟವರ್‌ಗಳಿದ್ದು, ಅವುಗಳಲ್ಲಿ 100 ಟವರ್‌ಗಳನ್ನು ವಿಶೇಷವಾಗಿ ಗಮನ ಹರಿಸಿ ನಿರ್ವಹಣೆ ಮಾಡಲಾಗುತ್ತಿದೆ. ಅಂತೆಯೇ ಉಳಿದ 141 ಟವರ್‌ಗಳನ್ನು ವಿದ್ಯುತ್‌, ಜನರೇಟರ್‌, ಸಿಬ್ಬಂದಿ  ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಟವರ್‌ನ ವ್ಯವಸ್ಥಿತ ನಿರ್ವಹಣೆಗೆ ಕನಿಷ್ಟ 10ಕಿ.ವ್ಯಾ. ವಿದ್ಯುತ್‌ನ ಅಗತ್ಯವಿದ್ದು, ಇದರ ಪೂರೈಕೆಯಲ್ಲಿ ವ್ಯತ್ಯಯವಿರುವುದು ಕಂಡುಬರುತ್ತಿದೆ. ಇಂತಹ ಟವರ್‌ಗಳಿಗೆ ನಿರಂತರ ವಿದ್ಯುತ್‌ ಹರಿಸುವ ಅಗತ್ಯವಿದೆ ಎಂದರು. ಟವರ್‌ಗಳ ಅಗತ್ಯಕ್ಕೆ ವಿದ್ಯುತ್‌
ಗಳನ್ನು ಸರಬರಾಜು ಮಾಡಲು ಜಿಲ್ಲೆಯಲ್ಲಿ 110 ಕೆ.ವಿ.ಸಾಮರ್ಥ್ಯದ 112 ವಿದ್ಯುತ್‌ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದಲ್ಲಿನ ಬಿ.ಎಸ್‌. ಎನ್‌.ಎಲ್‌. ಟವರ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದ ಅವರು, ಈ ಘಟಕಗಳಿಗೆ ನಿರಂತರವಾಗಿ ವಿದ್ಯುತ್‌ ಹರಿಸುವ ಬಗ್ಗೆಯೂ ಚರ್ಚಿಸಲಾಗುವುದೆಂದರು.

Advertisement

ಪ್ರಸ್ತುತ ಬಿ.ಎಸ್‌.ಎನ್‌.ಎಲ್‌. ಸಂಸ್ಥೆಯು ವಿಯೋಮ್‌ ಸಂಸ್ಥೆಯ ಸ್ವಾಮ್ಯತೆಗೊಳಪಟ್ಟ 30 ಟವರ್‌ಗಳ ಸೇವೆಯನ್ನು ಬಳಸಿಕೊಳ್ಳುತ್ತಿದೆ. ಕೊರೊನಾ ಭೀತಿಯಿಂದ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಬಂದು ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದ ಯುವ ಉದ್ಯೋಗಿಗಳಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಗ್ರಾಪಂ ನೆಟ್‌ಸೇವೆಯನ್ನು ಬಳಸಿಕೊಳ್ಳಲು ಅವಕಾಶ
ಮಾಡಿಕೊಡಲಾಗಿತ್ತು ಎಂದರು.

ಕಳೆದ ಆರು ತಿಂಗಳಿಂದೀಚೆಗೆ ಸುಮಾರು 60 ಟವರ್‌ಗಳನ್ನು ಸ್ಥಾಪನೆಯಾಗಿದ್ದು, ಮುಂದಿನ ಆರು ತಿಂಗಳ ಅವ ಧಿಯಲ್ಲಿ ಇನ್ನೂ 60 ಟವರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ, ಬಿ.ಎಸ್‌. ಎನ್‌.ಎಲ್‌. ನಿಗಮದ ವಿಭಾಗೀಯ ವ್ಯವಸ್ಥಾಪಕ ಕೃಷ್ಣ ಮೊಗೇರ, ಜಿಯೋ ಸಂಸ್ಥೆಯ ಮಿಥುನ್‌, ಏರ್‌ಟೆಲ್‌ನ ಜನರಲ್‌ ಮ್ಯಾನೇಜರ್‌ ಪದ್ಮನಾಭ, ಶಾಂತಕುಮಾರ್‌, ಮ್ಯಾಥ್ಯೂ, ಮೆಸ್ಕಾಂನ ಇಂಜಿನಿಯರ್‌ ನಟರಾಜ್‌, ಜ್ಯೋತಿಪ್ರಕಾಶ್‌ ಸೇರಿದಂತೆ ಹಲವು ಅಧಿ ಕಾರಿಗಳು ಹಾಗೂ ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next