Advertisement
ಕೋವಿಡ್ ವೈರಸ್‌ನಿಂದಾಗಿ ಪ್ರವಾಸಿಗರಿಲ್ಲದೆ,ಬಣಗುಡುತ್ತಿದ್ದ ತಾಲೂಕಿನ ರೆಸಾರ್ಟ್‌ಗಳು, ಹೋಂ ಸ್ಟೇಗಳುಇದೀಗಪ್ರವಾಸಿಗರಿಂದ ತುಂಬಿತುಳುಕುತ್ತಿವೆ. ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಾದ ಮಂಜ್ರಾಬಾದ್ ಕೋಟೆ, ಬಿಸಿಲೆ ಘಾಟ್, ಮಗಜಹಳ್ಳಿ ಜಲಪಾತ, ಮೂಕನಮನೆ ಜಲಪಾತ, ಕಾಡುಮನೆ ಸೇರಿದಂತೆ ಇಲ್ಲಿನ ಬೆಟ್ಟ ಗುಡ್ಡ,ಕಣಿವೆ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
Related Articles
Advertisement
ಹೋಟೆಲ್‌ಗಳೂ ಭರ್ತಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಹೆದ್ದಾರಿ ಬದಿಯ ಹೋಟೆಲ್‌ಗಳು ಗ್ರಾಹಕರಿಂದ ತುಂಬಿದ್ದ ದೃಶ್ಯ ಭಾನುವಾರ ಕಂಡು ಬಂದಿತು. ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್‌ಗಳ ಬಳಿ ಪ್ರವಾಸಿಗರು ತಿಂಡಿ ತಿನಿಸು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಂಚಾರ ದಟ್ಟಣೆ: ಕೇವಲ ಮಲೆನಾಡಿಗೆ ಮಾತ್ರವಲ್ಲ, ಕರಾವಳಿಯ ಪವಿತ್ರ ತೀರ್ಥ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮುಂತಾದ ಸ್ಥಳಗಳಿಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಮತ್ತು ಭಾನುವಾರ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಸ್ಥಳೀಯರು ರಸ್ತೆ ದಾಟಲು ಐದು ಹತ್ತು ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರವಾಸಿಗರ ಚಿತ್ತಾಕರ್ಷಿಸುತ್ತಿದೆ ಕಾಫಿ ತೋಟ,ಭತ್ತದ ಗದ್ದೆ : ಸಕಲೇಶಪುರ ಅಂದ ತಕ್ಷಣ ನೆನಪಿಗೆ ಬರುವುದುಕಾಫಿತೋಟ, ಗಿರಿ ಕಂದರ. ಇದರ ಜೊತೆಗೆ ಭತ್ತದ ಗದ್ದೆಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಬಾರಿ ಉತ್ತಮವಾಗಿ ಮಳೆ ಸುರಿದಕಾರಣ, ಎಲ್ಲೆಡೆ ಭತ್ತದ ನಾಟಿ ಮಾಡಿದ್ದು, ತಗ್ಗು ಪ್ರದೇಶದಲ್ಲಿ ಸಣ್ಣ ಸಣ್ಣ ಮಡಿಗಳನ್ನುಕಟ್ಟಿ ನಾಟಿ ಮಾಡಿರುವ ಭತ್ತದ ಪೈರು, ಅದರ ಮೇಲೆ ಮುಸುಕಿದ ಮಂಜು ಪ್ರವಾಸಿಗರ ಚಿತ್ತಾಕರ್ಷಿಸುತ್ತದೆ.
ಗ್ರಾಮೀಣ ಜನ ಹಬ್ಬ ಹರಿದಿನಗಳನ್ನು ಮನೆಯಲ್ಲೇ ಆಚರಿಸಿದರೆ, ನಗರ ಪ್ರದೇಶದ ಹಬ್ಬದ ನೆಪದಲ್ಲಿ ಸಿಗುವ ರಜೆಯನ್ನು ಸವಿಯಲು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. – ಬ್ಯಾಕರವಳ್ಳಿ ಜಯಣ್ಣ, ಮಾಲಿಕರು, ಹೋಂಸ್ಟೇ.
ಕೋವಿಡ್ ದಿಂದಾಗಿ 6 ತಿಂಗಳಿಂದ ಹೊರಗಡೆ ಪ್ರವಾಸಿ ತಾಣಗಳಿಗೆ ಹೋಗಿರಲಿಲ್ಲ. ಮೂರು ದಿನ ರಜೆ ಇರುವಕಾರಣ,ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಇಲ್ಲಿನ ಪ್ರಕೃತಿ ಆಹ್ವಾದಿಸುವುದು ನಮಗೆ ಒಂದು ರೀತಿ ಹಬ್ಬದ ಸಂಭ್ರಮವಾಗಿದೆ. – ದತ್ತು ಪ್ರಸಾದ್, ಬೆಂಗಳೂರು ನಿವಾಸಿ
– ಸುಧೀರ್‌ಎಸ್.ಎಲ್