Advertisement

ಪ್ರವಾಸಗಳು ಪ್ರಾಯೋಗಿಕ ಕಲಿಕೆಗೆ ಪೂರಕ

10:15 AM May 20, 2019 | Suhan S |

ಹಾಸನ: ಪ್ರವಾಸಗಳು ಮಕ್ಕಳಲ್ಲಿ ಪ್ರಾಯೋಗಿಕ ಕಲಿಕೆಯನ್ನುಂಟು ಮಾಡುತ್ತವೆ. ಪ್ರವಾಸಗಳಿಂದ ಮಕ್ಕಳು ಸ್ಥಳ ಪರಿಚಯ ವಾಗುತ್ತದೆ ಎಂದು ಇಎನ್‌ಸಿಎಸ್‌(ಏಕಲವ್ಯಸೌಟ್ಸ್‌ ಆ್ಯಂಡ್‌ ಗೈಡ್ಸ್‌ ) ಓಪನ್‌ ಗ್ರೂಪಿನ ಅಧ್ಯಕ್ಷ ಕೊಟ್ರೇಶ್‌ ಎಸ್‌.ಉಪ್ಪಾರ್‌ ಅಭಿಪ್ರಾಯಪಟ್ಟರು.

Advertisement

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಇಎನ್‌ಸಿಎಸ್‌ ಓಪನ್‌ ಗ್ರೂಪ್‌ ಜಿಲ್ಲಾ ಸಂಸ್ಥೆಯ ಸಹಕಾರದಲ್ಲಿ ಹಮ್ಮಿಕೊಂಡಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಟೈಮ್ಸ್‌ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ಪ್ರಾಯೋಜ ಕತ್ವದಲ್ಲಿ ಗೆಂಡೆಕಟ್ಟೆ ಅರಣ್ಯಧಾಮ ಹಾಗೂ ಕೋರವಂಗಲದ ದೇವಾಲಯಕ್ಕೆ ಏರ್ಪಡಿಸಿದ್ದ ಕಿರುಪ್ರವಾಸದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರವಾಸದ ಅನುಭವಗಳು ಮಕ್ಕಳ ಮನಸ್ಸಿನ ಮೇಲೆ ತುಂಬಾ ದಿವಸಗಳ ಕಾಲ ಗಾಢಪ್ರಭಾವ ಬೀರುತ್ತವೆ. ಪ್ರಕೃತಿಯ ಸೌಂದರ್ಯ ಸವಿಯುವುದರ ಜೊತೆಗೆ ಆ ಚೆಲುವಿನ ಉಳಿಗಾಗಿ ಹೋರಾಡುವ ಅಂಶವನ್ನು ತಿಳಿದುಕೊಳ್ಳುತ್ತಾರೆ. ಮನರಂಜನೆಗಾಗಿ ಈ ಪ್ರವಾಸವನ್ನು ಹಮ್ಮಿಕೊಂಡಿಲ್ಲ. ಇಲ್ಲಿನ ಜೀವ ವೈಧ್ಯತೆಯನ್ನು ತಿಳಿಯಲು, ಪ್ರಕೃತಿಯಲ್ಲಿ ಆಟಗಳು ಮುಂತಾದ ಅಂಶಗಳನ್ನು ಹೊತ್ತು ಬಂದಿದ್ದೇವೆ ಎಂದರು. ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಗಿಡಮರಗಳನ್ನು, ಪ್ರಾಣಿ ಪಕ್ಷಿಗಳನ್ನು ಪರಿಚಯಿಸುವುದರ ಜೊತೆಗೆ ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಡಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಆರ್‌.ಜಿ. ಗಿರೀಶ್‌, ಜಂಟಿ ಕಾರ್ಯದರ್ಶಿ ಚನ್ನಬಸವೇಶ್ವರ, ರೋವರ್‌ ಲೀಡರ್‌ ಕುಮಾರಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next