Advertisement
ಏಪ್ರಿಲ್‌ನ 2ನೇ ವಾರಾಂತ್ಯದಲ್ಲಿ ಸಾಲು ಸಾಲು ರಜೆ ಹಿನ್ನೆಲೆ ನೆರೆಯ ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂ ರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರು ವುದು ಪ್ರವಾ ಸೋದ್ಯಮ ಅವಲಂಭಿಸಿರುವವರಲ್ಲಿ ಸಂತಸ ತಂದಿದೆ.
Related Articles
Advertisement
ಹೋಟೆಲ್ ರೂಂಗಳು ಭರ್ತಿ: ಪ್ರವಾಸಿಗರು ಮೈಸೂರಿನತ್ತ ಪ್ರವಾಹದಂತೆ ಹರಿದುಬರುತ್ತಿರುವ ಹಿನ್ನೆಲೆ ನಗರದ ಎಲ್ಲಾ ಹೋಟೆಲ್‌ಗಳ ಕೊಠಡಿಗಳು ಏ.16ರವರೆಗೆ ಶೇ.100 ಭರ್ತಿಯಾಗಿವೆ. ಕೊರೊನಾ ಬಳಿಕ ಚೇತರಿಕೆಯ ಹಾದಿಯಲ್ಲಿರುವ ಹೋಟೆಲ್ ಉದ್ಯಮಕ್ಕೆ ದಸರಾ ನಂತರ ಇದೆ ಮೊದಲ ಬಾರಿಗೆ ಸಾಕಷ್ಟು ಉತ್ತೇಜನ ದೊರೆತಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಪ್ರವಾಸೋದ್ಯಮವು 2 ವರ್ಷಗಳಿಂದ ನೆಲಕಚ್ಚಿದೆ. ಸಾಲು ಸಾಲು ರಜೆ ಇರುವುದರಿಂದ ಏ. 13ರಿಂದ 16 ರವರೆಗೆ ನಾಲ್ಕು ದಿನಗಳು ಮೈಸೂರಿನ ಎಲ್ಲ ಹೋಟೆಲ್ ರೂಂಗಳು ಭರ್ತಿಯಾಗಿವೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಸಾಲು ಸಾಲು ರಜೆ ಹಿನ್ನೆಲೆ ಮೈಸೂರಿನ ಅಂದ ಸವಿಯಲು ಸಾವಿರಾರು ಪ್ರವಾಸಿಗರು ವಿವಿಧ ಜಿಲ್ಲೆ, ರಾಜ್ಯ, ದೇಶಗಳಿಂದ ಅರಮನೆ ನಗರಿಗೆ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಗೆ ಕಾಣುತ್ತಿದ್ದು, ಆಟೋ, ಟಾಂಗಾ ಹಾಗೂ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕೆಆರ್‌ಎಸ್, ಮೃಗಾಲಯದಲ್ಲಿ ವಿವಿಧೆಡೆ ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ.
ಗರಿಗೆದರಿದ ವ್ಯಾಪಾರ : ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಪ್ರಾವಸೋದ್ಯಮವನ್ನೇ ನಂಬಿರುವ ಪ್ರವಾಸಿ ಟ್ಯಾಕ್ಸಿ , ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳು, ಮಾಲ್, ಚಿತ್ರಮಂದಿರ, ಸಾರಿಗೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ವ್ಯಾಪರ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.
ಸಾಲು ಸಾಲು ರಜೆ ಹಿನ್ನೆಲೆ ತಂಪಾದ ವಾತಾವರಣವಿರುವ ಮೃಗಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಒರಾಂಗುಟಾನ್, ಆಫ್ರಿಕಾದ ಚೀತಾ, ಗೊರಿಲ್ಲದಂತಹ ಅಪರೂಪದ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಗುರುವಾರ ಮೃಗಾಲಯಕ್ಕೆ 9 ಸಾವಿರ ಮಂದಿ ಭೇಟಿ ನೀಡಿದ್ದರೆ ಶುಕ್ರವಾರ 12 ಸಾವಿರದಷ್ಟು ಮಂದಿ ಆಗಮಿಸಿದ್ದರು. ಎಲ್.ಆರ್. ಮಹದೇವಸ್ವಾಮಿ,ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ
ಕಳೆದ 2ವರ್ಷಗಳ ಬಳಿಕ ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ರಜೆ ಹಿನ್ನೆಲೆ ಪ್ರವಾಸಿ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೋಟೆಲ್, ಚಿತ್ರ ಮಂದಿರ, ಮಾಲ್, ಸಾರಿಗೆ ಕ್ಷೇತ್ರಗಳಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. – ಬಿ.ಎಸ್. ಪ್ರಶಾಂತ್, ಅಧ್ಯಕ್ಷರು ಸಂಘ ಸಂಸ್ಥೆಗಳ ಒಕ್ಕೂಟ ಮೈಸೂರು.
-ಸತೀಶ್ ದೇಪುರ