Advertisement
ಪ್ರವಾಸಿಗರಿಗೆ ನಿರಾಶೆಮಲ್ಪೆ ಬೀಚ್, ಸೈಂಟ್‌ಮೇರಿ ದ್ವೀಪದಲ್ಲಿ ನೀರಿಗಿಳಿಯಲು, ವಾಟರ್ ನ್ಪೋರ್ಟ್ಸ್ಗಳನ್ನು ಆನುಭವಿಸಲು ನಿಷೇಧ ಜಾರಿಯಲ್ಲಿದೆ. ಇದರಿಂದಾಗಿ ರಜೆ ಹಾಕಿ ಬರುವ ಪ್ರವಾಸಿಗರು ಬೀಚ್‌ನಲ್ಲಿ ಸಂಭ್ರಮಿಸಲು ಸಾಧ್ಯವಾಗದೆ ನಿರಾಶರಾಗಿ ಹಿಂದಿರುಗುತ್ತಿದ್ದಾರೆ.
ಮಳೆಗಾಲದಲ್ಲಿ ಕಡಲು ಪ್ರಕ್ಷಬ್ಧ ವಾಗಿರುವ ಕಾರಣ ಜಿಲ್ಲಾಡಳಿತದ ಆದೇಶದಂತೆ ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ವಾಟರ್ ನ್ಪೋಟ್ಸ್, ಸೈಂಟ್‌ಮೆರೀಸ್ ಪ್ರವೇಶಕ್ಕೆ ನಿಷೇಧವಿದೆ. ಬೀಚ್ ಅಭಿವೃದ್ದಿ ಸಮಿತಿಯ ವತಿಯಿಂದ ನೀರಿಗೆ ಇಳಿಯದಂತೆ ಕಡಲತೀರದಲ್ಲಿ ನೆಟ್ ಅಳವಡಿಸಲಾಗಿದ್ದು ತೆರವಾಗಿಲ್ಲ. ಮುಂದೆ ಸಮುದ್ರದ ನೀರಿನ ಒತ್ತಡ ವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುತ್ತದೆ ಎನ್ನಲಾಗಿದೆ.