Advertisement
ಹೊಯ್ಸಳರ ಕಾಲದ, ಸೂಕ್ಷ್ಮ ಕೆತ್ತನೆ ಹೊಂದಿರುವ ಹೊಯ್ಸಳೇಶ್ವರ, ಜೈನಬಸದಿ, ಕೇದಾರೇಶ್ವರ ದೇವಾಲಯಗಳ ಶಿಲ್ಪ ಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ದೇಶದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಪ್ರವಾಸಿ ಸ್ಥಳಗಳನ್ನು ಮುಚ್ಚಿತ್ತು. ಲಾಕ್‌ಡೌನ್‌ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರು, ಈಗ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಹೆಚ್ಚು ಒಲವು ತೋರುತ್ತಿದ್ದು, ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದ್ದಾರೆ.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಒಟ್ಟು 15 ಹೆಕ್ಟೇರ್ ವಿಶಾಲ ಉದ್ಯಾನ ಹೊಂದಿದ್ದು, ಆರು ತಿಂಗಳಿಂದ ಜನರ ಓಡಾಟವಿಲ್ಲದೆ, ಮುಂಗಾರು ಮಳೆ ಸಮರ್ಪಕವಾಗಿ ಸುರಿಯುತ್ತಿರುವ ಕಾರಣ, ಇಡೀ ಉದ್ಯಾನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
Related Articles
Advertisement
ಶನಿವಾರ, ಭಾನುವಾರ ಹೆಚ್ಚು:ದೇವಾಲಯದ ವೀಕಣೆಗೆ ಪ್ರವಾಸಿಗರು ಬೇರೆ ದಿನಗಳಲ್ಲಿ 100 ರಿಂದ 500 ಮಂದಿ ಆಗಮಿಸಿದರೆ, ಶನಿವಾರ ಮತ್ತು ಭಾನುವಾರ 2000ವರೆಗೂ ಆಗಮಿಸುತ್ತಾರೆ. ದೇವಾಲಯವನ್ನೇ ನಂಬಿ ಜೀವನ ನಡೆಸುತ್ತಿರುವ ಮಾರ್ಗದರ್ಶಕರಿಗೂ ಈಗ ಅಷ್ಟಿಷ್ಟು ಹಣ ಕೈಸೇರುತಿದ್ದು, ಜೀವನ ಸುಧಾ ರಿಸುತ್ತಿದೆ. ವ್ಯಾಪಾರ ಚುರುಕು: ಹೊಯ್ಸಳೇಶ್ವರ ದೇವಾಲಯವನ್ನೇನಂಬಿಬದುಕುಸಾಗಿಸುತ್ತಿದ್ದ ಛಾಯಾಚಿತ್ರ ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಉದ್ಯಮ ಕೊರೊನಾದಿಂದ ಮುಚ್ಚಲ್ಪಟ್ಟಿದ್ದವು. ಪ್ರವಾಸಿಗರ ಆಗಮನದಿಂದ ನಿಧಾನವಾಗಿ ಎಲ್ಲವೂ ಚೇತರಿಕೆಕಾಣುತ್ತಿವೆ.