Advertisement

ದರ್ಬೆಯಲ್ಲಿ  ಪ್ರವಾಸಿ ಸೌಧ ಉದ್ಘಾಟನೆಗೆ ಸಿದ್ಧ

07:40 AM Aug 11, 2017 | Harsha Rao |

ನಗರ : ನಗರದ ಹೊರ ವಲಯದ ದರ್ಬೆಯಲ್ಲಿನ ಪ್ರವಾಸಿ ಮಂದಿರದ ಬಳಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಸುಸಜ್ಜಿತ ಪ್ರವಾಸಿ ಸೌಧ ಉದ್ಘಾಟನೆಗೆ ಸಿದ್ಧವಾಗಿದೆ.

Advertisement

ವಿಐಪಿ ಹಾಗೂ ಇತರ ಅಧಿಕಾರಿಗಳು ಪುತ್ತೂರು ಅಥವಾ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಮೂರು ಕೊಠಡಿ ನಿರ್ಮಿಸಿದ್ದು, ಅದರಲ್ಲಿ ಒಂದು ಕೊಠಡಿ ವಿವಿಪಿ ಬಳಕೆಗೆ ಮೀಸಲು ಇರಿಸಲಾಗಿದೆ. ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಫರ್ನಿಚರ್‌ ಜೋಡಣೆ ಕೆಲಸ ಪ್ರಗತಿಯಲ್ಲಿದೆ.

1.5 ಕೋಟಿ ರೂ.
ಶಾಸಕರು ಒದಗಿಸಿದ 1.5 ಕೋ.ರೂ.ಅನುದಾನದಲ್ಲಿ 2016ರಲ್ಲಿ ಪ್ರವಾಸಿ ಮಂದಿರ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದು, ಒಂದು ವರ್ಷದಲ್ಲಿ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ  ಕಾಮಗಾರಿ ಅನುಷ್ಠಾನಗೊಂಡಿದೆ. ಕಟ್ಟ ಡದ ಮುಂಭಾಗದಲ್ಲಿ ಗಾರ್ಡನ್‌, ದ್ವಿ-ಪಥ ಇಂಟರ್‌ಲಾಕ್‌ ದಾರಿ ನಿರ್ಮಿಸಲಾಗಿದೆ.

ಕೊಠಡಿ ಸಂಖ್ಯೆ ಹೆಚ್ಚಳ
ಹೊಸ ಕಟ್ಟಡದ ಸಮೀಪ ಪ್ರವಾಸಿ ಮಂದಿರ ಇದೆ. ಹಳೆ ಕಟ್ಟಡವಿದಾಗಿದ್ದು, ಇಲ್ಲಿನ ವಾಸ್ತು ಶೈಲಿಯು ಹಳೆ ಪ್ರಕಾರದಲ್ಲೇ ಇದೆ. ಅದರಲ್ಲಿ 4 ಕೊಠಡಿ, ಪ್ರವಾಸಿ ಮಂದಿರದಲ್ಲಿ ಹೊಸ ಕೊಠಡಿ ನಿರ್ಮಿಸಲಾಗಿತ್ತು. ಈಗ ಹೊಸದಾಗಿ ಮೂರು ಕೊಠಡಿ ಸೇರ್ಪಡೆಗೊಂಡಿದ್ದು, ಪ್ರವಾಸಿ ಮಂದಿರ ಹಾಗೂ ಪ್ರವಾಸಿ ಸೌಧದ ಸಾಮರ್ಥ್ಯ 8ಕ್ಕೆ ಏರಿಕೆ ಕಂಡಿದೆ.

ಉದ್ಘಾಟನೆಗೆ ಸಿದ್ಧತೆ
ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟ ನೆಗೆ ಲೋಕೋಪಯೋಗಿ ಇಲಾಖಾ ಸಚಿವರು ಬರುವ ನಿರೀಕ್ಷೆಯಿದೆ. ಶಾಂತಿಮೊಗರು ಸೇತುವೆ ಇನ್ನಿತರ ಕಾಮಗಾರಿ ಉದ್ಘಾಟನೆ ಸಂದರ್ಭ ಈ ಕಟ್ಟಡವನ್ನು ಉದ್ಘಾಟಿಸುವ ಇರಾದೆ ಹೊಂದಲಾಗಿದೆ.

Advertisement

ಕಾಮಗಾರಿ ಪೂರ್ಣ 
ಕಟ್ಟಡ ಕೆಲಸ ಪೂರ್ಣ ಆಗಿದ್ದು, ಪರ್ನಿಚರ್‌ ಜೋಡಣೆ ಅಂತಿಮ ಹಂತದಲ್ಲಿದೆ. ಸುಮಾರು 1.5 ಕೋಟಿ ವೆಚ್ಚದಲ್ಲಿ ಮೂರು ಕೊಠಡಿಗಳು ಹೊಂದಿರುವ ಪ್ರವಾಸಿ ಸೌಧ ನಿರ್ಮಿಸಲಾಗಿದೆ.
– ಪ್ರಮೋದ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next