ಪಣಜಿ: ಗೋವಾದಲ್ಲಿ ಪ್ರವಾಸಿ ಸೀಸನ್ ಆರಂಭವಾಗುತ್ತಿದ್ದಂತೆಯೇ ಕೆಲವು ಬೀಚ್ ಗಳಲ್ಲಿ ಜೆಲ್ಲಿ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಜೆಲ್ಲಿ ಮೀನುಗಳಿರುವ ಪ್ರದೇಶಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಗೋವಾಕ್ಕೆ ಆಗಮಿಸುವ ಪ್ರವಾಸಿರು ಎಚ್ಚರಿಕೆ ವಹಿಸುವ ಅಗತ್ಯವಿದೆ.
ಪ್ರಪಂಚದಾದ್ಯಂತದ ಕರಾವಳಿ ಪ್ರದೇಶಗಳಲ್ಲಿ ಕೆಲವು ಜಾತಿಯ ಜೆಲ್ಲಿ ಮೀನುಗಳು ವಿಷಪೂರಿತವಾಗಿವೆ ಮತ್ತು ಅವುಗಳ ಕಚ್ಚಿದರೆ ತೊಂದರೆಯುಂಟಾಗುವ ಸಾಧ್ಯತೆಯಿರುತ್ತದೆ. ಫಿಲಿಪೈನ್ಸ್‍ನಂತಹ ದೇಶಗಳಲ್ಲಿ, ಪ್ರತಿ ವರ್ಷ ಅನೇಕ ನಾಗರಿಕರು ಜೆಲ್ಲಿ ಮೀನುಗಳ ಕುಟುಕಿಗೆ ಬಲಿಯಾಗುತ್ತಾರೆ. ಗೋವಾ ರಾಜ್ಯದ ಕರಂಜಾಲೆ, ಮಿರಮಾರ್ ಸಿಕೇರಿ, ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಲ್ಲಿ ಮೀನುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹಿರಿಯ ಸಾಗರ ವಿಜ್ಞಾನಿ ಡಾ. ಬಾಬನ್ ಇಂಗೋಲ್ ನೀಡಿರುವ ಪ್ರತಿಕ್ರಿಯೆಯ ಅನುಸಾರ, ಜೆಲ್ಲಿ ಮೀನುಗಳು ಪ್ರಪಂಚದಾದ್ಯಂತ ಮತ್ತು ಎರಡೂ ಧ್ರುವ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಜೆಲ್ಲಿ ಮೀನುಗಳು ಮೇಲ್ಮೈ ನೀರಿನಿಂದ ಆಳ ಸಮುದ್ರದವರೆಗೆ ಕಂಡುಬರುತ್ತವೆ. ಸ್ಕೈಫೋಜೋವಾನ್ಸ್ – ಉಪ್ಪುನೀರಿನ ಜೆಲ್ಲಿ ಮೀನುಗಳು ಪ್ರತ್ಯೇಕವಾಗಿ ಸಮುದ್ರದಲ್ಲಿವೆ. ಆದರೆ ಹೈಡ್ರೋಜೋವಾದಂತಹ ಜೆಲ್ಲಿ ಮೀನುಗಳು ಸಿಹಿ ನೀರಿನಲ್ಲಿಯೂ ಕಂಡುಬರುತ್ತವೆ ಎಂಬ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ಸದ್ಯ ಪ್ರವಾಸಿ ಸೀಜನ್ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದಾರೆ. ಆದರೆ ಸಮುಕ್ಕೆ ತೆರಳುವ ಮುನ್ನ ಪ್ರವಾಸಿಗರು ಜೆಲ್ಲಿ ಫಿಶ್‍ಗಳ ಕುರಿತು ಕೊಂಚ ಎಚ್ಚರ ವಿರುವ ಅಗತ್ಯವಿದೆ.