Advertisement

ಲಗ್ಗೆ ಇಟ್ಟ ಪ್ರವಾಸಿಗರು ಹೋಮ್‌ ಸ್ಟೇ ಮಾಲಿಕರು ಖುಷ್

06:21 PM Dec 28, 2020 | Suhan S |

ಸಕಲೇಶಪುರ: ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿತಾಲೂಕಿನ ಪ್ರವಾಸಿ ತಾಣಗಳಿಗೆ ಸಾವಿರಾರುಪ್ರವಾಸಿಗರು ಭೇಟಿ ನೀಡಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಸಮಸ್ಯೆಯಾದರೆ, ರೆಸಾರ್ಟ್‌, ಹೋಂ ಸ್ಟೇ,ಹೋಟೆಲ್‌ಗ‌ಳು ತುಂಬಿಹೋಗಿದ್ದು ಮಾಲಿಕರಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.

Advertisement

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ 3 ದಿನ ಸತತ ರಜೆ ಬಂದಿದೆ. ಅಲ್ಲದೇ, ಹೊಸ ವರ್ಷ ಆಚರಣೆಗಾಗಿ ಕೋವಿಡ್ ಆತಂಕ ಮರೆತ ಪ್ರವಾಸಿಗರು ಹೊರಊರುಗಳಿಂದ ಬಂದಿದ್ದರಿಂದ ತಾಲೂಕಿನರೆಸಾರ್ಟ್‌, ಹೋಂ ಸ್ಟೇಗಳು ಭರ್ತಿಯಾಗಿವೆ.ಅಲ್ಲದೇ, ಕೋವಿಡ್ ಆತಂಕ ಮರೆತ ಪ್ರವಾಸಿಗರಿಂದ ತುಂಬಿ ತುಳುಕುವಂತಾಗಿದೆ.

ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಬಂದ ಪ್ರವಾಸಿಗರು ಮಾತ್ರವಲ್ಲದೆ ಇತರ ಪ್ರವಾಸಿಗರೂತಾಲೂಕಿನ ಪ್ರೇಕ್ಷಣೀಯ ಸ್ಥಳಗಳಾದಮಂಜ್ರಾಬಾದ್‌ ಕೋಟೆ, ಬಿಸಿಲೆ ಘಾಟ್‌,ಮಗಜಹಳ್ಳಿ ಜಲಪಾತ, ಮೂಕನ ಮನೆ ಜಲಪಾತ,ಕಾಡುಮನೆ ಸೇರಿ ವಿವಿಧ ಬೆಟ್ಟ ಗುಡ್ಡಗಳಿಗೆಪ್ರಯಾಣಿಕರು ಲಗ್ಗೆ ಇಟ್ಟಿದ್ದಾರೆ. ಹೀಗೆ ಬಂದ ಬಹುತೇಕ ಪ್ರವಾಸಿಗರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ತಿರುಗಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ.

2ನೇ ಹಂತದ ಚುನಾವಣೆಯಲ್ಲಿ ತಾಲೂಕಿನ ಬಹುತೇಕ ಆರಕ್ಷಕರು ಹಾಗೂ ಹೋಂಗಾರ್ಡ್‌ಗಳುಚುನಾವಣೆ ನಿರ್ವಹಣೆಗಾಗಿ ಆಲೂರು ಸೇರಿ ಇತರ ತಾಲೂಕುಗಳಿಗೆ ಹೋಗಿದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಇದ್ದ ಆರಕ್ಷಕರು ಸಂಚಾರ ಸಮಸ್ಯೆ ನಿರ್ವಹಣೆ ಮಾಡಲು ಪರದಾಡಬೇಕಾಯಿತು.

ಮಂಜ್ರಾಬಾದ್‌ ಕೋಟೆ ಸಮೀಪವಂತೂ ನೂರಾರು ವಾಹನ ಸಾಲುಗಟ್ಟಿ ನಿಂತಿದ್ದು ಅದರಲ್ಲೂಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಒಂದು ಭಾಗ ಹೆಚ್ಚಿನ ಸಂಖ್ಯೆಯಲ್ಲಿ ವಾಹನನಿಂತಿದ್ದವು. ಇದರಿಂದಾಗಿ ಸುಗಮ ವಾಹನಗಳಸಂಚಾರಕ್ಕೆ ಅಡಚಣೆಯುಂಟಾಯಿತು. ಪಟ್ಟಣಸೇರಿ ಪಟ್ಟಣಕ್ಕೆ ಹೊಂದಿಕೊಂಡಿರುವ ಹೆದ್ದಾರಿ ಬದಿ ಹೋಟೆಲ್‌ಗ‌ಳಲ್ಲಿ ಪ್ರವಾಸಿಗರ ದಂಡು ಕಾಣುತ್ತಿತ್ತು.

Advertisement

ಬೆಂಗಳೂರಿನಲ್ಲಿ “ಹೊಸವರ್ಷ ಬಿಗಿ’ ಅರಿತು ಬಂದರು :

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಬಿಗಿ ಹೇರುವ ಸಾಧ್ಯತೆ ಅರಿತು ಕಳೆದ 3-4 ದಿನಗಳಿಂದ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ತಾಲೂಕಿಗೆ ಬರುತ್ತಿದ್ದಾರೆ. ಕೇವಲ ಮಲೆನಾಡಿಗೆ ಮಾತ್ರವಲ್ಲ ಕರಾವಳಿಯ ಪವಿತ್ರ ತೀರ್ಥ ಯಾತ್ರೆ ಸ್ಥಳಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಸ್ಥಳಗಳಿಗೆ ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ದಟ್ಟಣೆಯಿಂದ ಸ್ಥಳೀಯರು ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಳೆದ 3-4 ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ತಾಲೂಕಿನ ಆರ್ಥಿಕತೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಚೇತನ್‌, ಹೋಂ ಸ್ಟೇ ಮಾಲೀಕರು

ರೆಸಾರ್ಟ್‌ ಹಾಗೂ ಹೋಂಸ್ಟೇಗಳ ಮಾಲಿಕರು ನಿಯಮಗಳನ್ನು ಮೀರಿ ಚಟುವಟಿಕೆ ನಡೆಸಿದರೆ ಅಂತಹ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗಿರೀಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌

 

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next