Advertisement
ಕಾರವಾರ ಪಕ್ಕದ ಗೋವಾ ಸರ್ಕಾರ ಹೊಸವರ್ಷ ಆಚರಿಸಲು ಹಲವು ನಿಯಮಗಳನ್ನು ಪ್ರವಾಸಿಗರ ಮೇಲೆ ಹೇರಿದೆ. ಕೆಲಅಘೋಷಿತನಿರ್ಬಂಧಗಳನ್ನು ಹೇರಿರುವ ಕಾರಣ ಉತ್ತರ ಕನ್ನಡ ಜಿಲ್ಲೆಯ ಬೀಚ್‌ಗಳಲ್ಲಿ ನಾಲ್ಕು ದಿನ ಮೊದಲೇ ಪ್ರವಾಸಿಗರ ಸಂಖ್ಯೆ ಏರಿದೆ. ಜಿಲ್ಲೆಯ ಹೋಮ್ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.ಬಹುತೇಕ ಪ್ರವಾಸಿಗರು ಕೊರೊನಾ ಭಯದಿಂದ ಮುಕ್ತರಾಗಿದ್ದಾರೆ.ಸರ್ಕಾರದ ಕಟ್ಟೆಚ್ಚರದ ನಡುವೆಯೂ ಕೆಲವರು ಮಾಸ್ಕ್ ಧರಿಸಿದ್ದು ಕಾಣಿಸಿದರೆ. ಹಲವರು ಮಾಸ್ಕ್ ಪಕ್ಕಕ್ಕಿಟ್ಟು ಸಂಭ್ರಮದಲ್ಲಿ ಮುಳುಗಿದ್ದಾರೆ.
Related Articles
Advertisement
ಲೈಫ್‌ಗಾರ್ಡ್ ಇಲ್ಲದೇ ಆತಂಕ : ಇಲ್ಲಿನ ಟಾಗೋರ್ ಕಡಲ ತೀರಕ್ಕೆ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಕಡಲಿಗಿಳಿಯುವ ಪ್ರವಾಸಿಗರ ಸುರಕ್ಷತೆಗೆ ಇರಬೇಕಿದ್ದ ಲೈಫ್‌ಗಾರ್ಡ್‌ಗಳು ಸ್ಥಳದಲ್ಲಿ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ವೇತನ ಕಡಿಮೆ ಇರುವುದರಿಂದ ನಿಯೋಜಿತ ಸಿಬ್ಬಂದಿ ಕೆಲವು ದಿನದಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಕಳೆದ 3 ವರ್ಷದಲ್ಲಿ ಅಪಾಯಕ್ಕೆ ಸಿಲುಕಿದ್ದ 82 ಪ್ರವಾಸಿಗರನ್ನು ಲೈಫ್‌ಗಾರ್ಡ್ ಸಿಬ್ಬಂದಿ ಸುರಕ್ಷಿತವಾಗಿ ದಡ ಸೇರಿಸಿದ್ದರು. ಕೋವಿಡ್-19 ಕಾರಣ ಪ್ರವಾಸಿಗರು ಬಾರದ ಸನ್ನಿವೇಶದಲ್ಲಿ ಕೆಲವು ತಿಂಗಳು ಕೆಲಸ ಇರಲಿಲ್ಲ. ಆ ಸಮಯದಲ್ಲಿ ಲೈಫ್‌ಗಾರ್ಡ್ಸ್ ಸಿಬ್ಬಂದಿಗೆಗೌರವ ವೇತನ 5000 ರೂ. ನೀಡಲಾಗಿತ್ತು. ಪುನಃ ಪ್ರವಾಸೋದ್ಯಮ ಚಟುವಟಿಕೆ ಆರಂಭವಾಗುತ್ತಿದ್ದಂತೆ ಮರುನಿಯೋಜನೆಗೊಂಡವರಿಗೆ 5000 ರೂ. ಗೌರವಧನ ನೀಡುವ ಬಗ್ಗೆ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಮೊದಲು ಗೌರವಧನ, ಇದ್ದಂತೆ 10 ಸಾವಿರದಿಂದ 12 ಸಾವಿರ ರೂ. ವೇತನ ನೀಡಲು ಸಿಬ್ಬಂದಿ ಒತ್ತಾಯಿಸಿದ್ದು, ಜಿಲ್ಲಾಡಳಿತ ಮೂಲ ವೇತನ ನೀಡಲು ಒಪ್ಪದ ಕಾರಣ, 10 ರಿಂದ 12 ದಿನಗಳಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ
ಗೋವಾದಲ್ಲಿ ಕಠಿಣ ನಿಯಮ ;
ಗೋವಾದಲ್ಲಿ ಹೊಸ ವರ್ಷಾಚರಣೆಗೆ ಸಾಕಷ್ಟು ನಿರ್ಬಂಧ ಹೇರಲಾಗಿದ್ದು ಕೋವಿಡ್ ಹರಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಅಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರ ಮೇಲೆ ಪೊಲೀಸರು ಅತಿಯಾದನಿರ್ಬಂಧ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಕಾರವಾರಕ್ಕೆ ಬಂದಿದ್ದಾಗಿ ಬೆಂಗಳೂರಿನ ಪ್ರವಾಸಿಗರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು. ನಾವು ಬೀಚ್‌ಗಳಲ್ಲಿ ಎಂಜಾಯ್ ಮಾಡುವ ಉದ್ದೇಶದಿಂದ ಗೋವಾಕ್ಕೆ ಆಗಮಿಸಿದ್ದೆವು. ಆದರೆ ಅಲ್ಲಿ ಈ ಬಾರಿಸಾಕಷ್ಟು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಕಾರವಾರಕ್ಕೆ ಬಂದು ಇಲ್ಲಿಯೇ ಉಳಿದುಕೊಂಡಿದ್ದೇವೆ. ಹೊಸ ವರ್ಷಾಚರಣೆ ನಂತರ ಗೋಕರ್ಣ, ಮುಡೇìಶ್ವರಕ್ಕೆ ಭೇಟಿ ನೀಡಿ ಬೆಂಗಳೂರಿಗೆ ತೆರಳುವುದಾಗಿಪ್ರವಾಸಿಗರು ತಿಳಿಸಿದರು. ಕಾರವಾರ, ಗೋಕರ್ಣ ಹಾಗೂ ಮುರ್ಡೇಶ್ವರ ಬೀಚ್‌ನಲ್ಲಿ ಹೊಸ ವರ್ಷಾಚರಣೆ ಮಾಡಲು ಉದ್ದೇಶಿಸಿರುವ ಪ್ರವಾಸಿಗರಿಗೂ, ಕೊನೆ ಗಳಿಗೆಯಲ್ಲಿಬೀಚ್‌ಗಳಲ್ಲಿ ಆಚರಣೆಗೆ ಪೊಲೀಸರು ಅಡ್ಡಿ ಪಡಿಸಬಹುದು ಎಂಬ ಭಯವಿದೆ. ನಾವು ಕೋವಿಡ್‌ನ ಎಲ್ಲ ಶಿಷ್ಟಾಚಾರ ಪಾಲಿಸುವುದಾಗಿ ಬಹುತೇಕ ಪ್ರವಾಸಿಗರು ಹೇಳಿಕೊಂಡರು.
ಧಾರ್ಮಿಕ ಪ್ರವಾಸಿ ಕೇಂದ್ರಗಳಿರುವ ಮುರ್ಡೇಶ್ವರ, ಗೋಕರ್ಣ, ಶಿರಿಸಿ ಮಾರಿಕಾಂಬೆ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸಿಗಳ ಆಗಮನಸಹಜ. ಅವರನ್ನು ನಾವು ನಿಯಂತ್ರಿಸುವುದಿಲ್ಲ. ಆದರೆಕೋವಿಡ್ ಸಂದರ್ಭದಲ್ಲಿನನಿಯಮ ಪಾಲನೆ ಅನಿವಾರ್ಯ. –ಪುರುಷೋತ್ತಮ, ಉಪನಿರ್ದೇಶಕರು (ಪ್ರಭಾರ) ಪ್ರವಾಸೋದ್ಯಮ ಇಲಾಖೆ
ಕರ್ನಾಟಕದ ಕರಾವಳಿಯಲ್ಲೇ ಇಷ್ಟೊಂದು ಸುಂದರ ಬೀಚ್ ಗಳು ಇರುವಾಗ ಗೋವಾಕ್ಕೆ ಯಾಕೆಹೋಗಬೇಕು. ಈ ಸಲ ಉತ್ತರ ಕನ್ನಡದ ವಿವಿಧ ತಾಣಗಳನ್ನು ಸುತ್ತಿ ಹೊಸ ವರ್ಷದ ಮರುದಿನ ಬೆಂಗಳೂರಿಗೆ ಮರಳುತ್ತೇವೆ. –ಜಿತೇಂದ್ರ ಪ್ರಸನ್ನ, ಸಾಫ್ಟವೇರ್ ಉದ್ಯೋಗಿ, ಬೆಂಗಳೂರು.
-ನಾಗರಾಜ್ ಹರಪನಹಳ್ಳಿ