Advertisement
ಪೌರಾಣಿಕ, ಐತಿಹಾಸಿಕ ಹಿನ್ನೆಲೆಯದಾವಣಗೆರೆ ಜಿಲ್ಲೆಯಲ್ಲಿ ಸಂತೇಬೆನ್ನೂರಿನಪುಷ್ಕರಣಿ, ಏಷ್ಯಾದ ಎರಡನೇ ಅತಿದೊಡ್ಡದಾದ ಶಾಂತಿಸಾಗರ (ಸೂಳೆಕೆರೆ),ಪೌರಾಣಿಕತೆಯ ನೆಲವೀಡು ಹರಿಹರ,ದಾವಣಗೆರೆ ತಾಲೂಕಿನ ನೀರ್ಥಡಿ,ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರಸೇರಿದಂತೆ ಬೆರಳಣಿಕೆ ಸಂಖ್ಯೆಯಲ್ಲಿರುವಪ್ರವಾಸಿತಾಣಗಳು ಈವರೆಗೆ ಕಾಣಬೇಕಾದಅಭಿವೃದ್ಧಿ ಕಾಣದ ಕಾರಣಕ್ಕೆ ಜಿಲ್ಲೆಯಲ್ಲಿಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿಬೆಳೆದಿಲ್ಲ.
Related Articles
Advertisement
ಶಾಂತಿಸಾಗರ (ಸೂಳೆಕೆರೆ): ಏಷ್ಯಾದಲ್ಲೇಎರಡನೇ ಅತಿ ದೊಡ್ಡ ಕೆರೆ ಖ್ಯಾತಿಯಶಾಂತಿಸಾಗರವನ್ನು (ಸೂಳೆಕೆರೆ) ರಾಜ್ಯದಬಹು ದೊಡ್ಡ ಪ್ರವಾಸಿ, ಜಲವಿಹಾರಕೇಂದ್ರವನ್ನಾಗಿ ಅಭಿವೃದ್ದಿಪಡಿಸಲುವಿಪುಲ ಅವಕಾಶಗಳಿವೆ. ಕೆಲವು ಅಭಿವೃದ್ಧಿಕಾರ್ಯಗಳು ಕಂಡು ಬರುತ್ತಿವೆ. ಆದರೆಈವರೆಗೆ ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂಹ ದಿಟ್ಟ ಪ್ರಯತ್ನ ನಡೆಯದಕಾರಣ ಸೂಳೆಕೆರೆಯ ಖ್ಯಾತಿ ಒಂದೆರೆಡುಜಿಲ್ಲೆಗೆ ಮಾತ್ರ ಸೀಮಿತವಾಗಿದೆ.
ಸಂತೇಬೆನ್ನೂರಿನ ಪುಷ್ಕರಣಿ: ಸೂಳೆಕೆರೆಗೆ ಅನತಿ ದೂರದಲ್ಲಿರುವ ಐತಿಹಾಸಿಕ ಸಂತೇಬೆನ್ನೂರಿನ ಪುಷ್ಕರಣಿ ಸಹ ಜನಾಕರ್ಷಕಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಕಂಡಿಲ್ಲ.ಇಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣನಡೆದಿದೆ. ಸುಂದರ, ಮನೋಹರ,ಅತ್ಯಾಕರ್ಷಕ ಪುಷ್ಕರಣಿಗೆ ಇನ್ನಷ್ಟು ಮೆರಗುನೀಡಿ ಅಗತ್ಯ ಮೂಲ ಸೌಲಭ್ಯ ಒದಗಿಸಿದಲ್ಲಿಪುಷ್ಕರಣಿಯ ಸಂತೇಬೆನ್ನೂರು ರಾಜ್ಯದಅತ್ಯುತ್ತಮ ಪ್ರವಾಸಿ ಕೇಂದ್ರವಾಗಲಿದೆ.ಷಹಾಜಿ ಮಹಾರಾಜರ ಸಮಾಧಿ:ಸಂತೇಬೆನ್ನೂರು ಸಮೀಪದ ಹೊದಿಗೆರೆಯಲ್ಲಿಶಿವಾಜಿ ಮಹಾರಾಜರ ತಂದೆ ಷಹಾಜಿಮಹಾರಾಜರ ಸಮಾಧಿ ಇದೆ. ಐತಿಹಾಸಿಕ ಹಿನ್ನೆಲೆಯ ಹೊದಿಗೆರೆಯಲ್ಲಿನ ಷಹಜಿಮಹಾರಾಜ ಸಮಾಧಿಯ ಬಗ್ಗೆಯೇಅನೇಕರಿಗೆ ಮಾಹಿತಿಯೇ ಇಲ್ಲ ಎನ್ನುವುದು ಸತ್ಯ.
ಚನ್ನಗಿರಿ ಕೋಟೆ, ಧಾರ್ಮಿಕಶ್ರದ್ದಾಕೇಂದ್ರ ಜೋಳದಾಳ್, ಬಸವಾಪಟ್ಟಣಸಮೀಪದ ಪುಣ್ಯಕ್ಷೇತ್ರಗಳನ್ನ ಪ್ರವಾಸಿಕೇಂದ್ರವನ್ನಾಗಿಸಬೇಕಾಗಿದೆ.ಗಾಜಿನಮನೆ: ಜಿಲ್ಲಾ ಕೇಂದ್ರದಾವಣಗೆರೆಯಲ್ಲಿ ಕಳೆದ ಎರಡು ವರ್ಷಗಳಹಿಂದೆ ಪ್ರಾರಂಭವಾಗಿರುವ ಏಷ್ಯಾದಎರಡನೇ ಅತಿ ದೊಡ್ಡ ಗಾಜಿನಮನೆ ಈಗಜನರನ್ನು ಆಕರ್ಷಿಸುತ್ತಿದೆ.
ಗಾಜಿನ ಮನೆಗೆ ಇನ್ನೂ ಹೆಚ್ಚಿನ ಮೂಲ ಸೌಲಭ್ಯ ಒದಗಿಸಿದಲ್ಲಿ ಮತ್ತು ಗಾಜಿನ ಮನೆಗೆ ಹೊಂದಿಕೊಂಡಿರುವಕುಂದುವಾಡ ಕೆರೆಯಲ್ಲಿ ಕಾರಂಜಿ,ಬೋಟಿಂಗ್ ಇತರೆ ಜಲ, ಸಾಹಸ ಕ್ರೀಡೆಗಳಪ್ರಾರಂಭಿಸಿದ್ದಲ್ಲಿ ಬೆಣ್ಣೆ ನಗರಿ ಖ್ಯಾತಿಯದಾವಣಗೆರೆ ಪ್ರವಾಸಿ ಕೇಂದ್ರವಾಗಿಯೂ ಜನಮಾನಸದಲ್ಲಿ ರಾರಾಜಿಸಬಹುದಾದ ಎಲ್ಲ ಸಾಧ್ಯತೆಗಳೂ ಇವೆ.
ದಾವಣಗೆರೆ ತಾಲೂಕಿನ ಗಡಿಯಂಚಿನ ನೀರ್ಥಡಿ ಪೌರಾಣಿಕ ಕ್ಷೇತ್ರವಾಗಿದೆ. ಸುಂದರಕೆತ್ತನೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಇದೆ. ಆದರೆ, ಸೂಕ್ತ ಪ್ರಚಾರದ ಕೊರತೆಯಿಂದಬೆಳಕಿಗೆ ಬಂದಿಲ್ಲ. ಸಂಬಂಧಿತರು ಗಮನಹರಿಸಬೇಕಾಗಿದೆ.
ಹೊನ್ನಾಳಿ ತಾಲೂಕಿನಲ್ಲಿಬಂಜಾರ ಸಮುದಾಯದ ಆರಾಧ್ಯದೈವ ಸಂತ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪ, ಪೌರಾಣಿಕ ಹಿನ್ನೆಲೆಯ ತೀರ್ಥರಾಮೇಶ್ವರ, ಗಡ್ಡೆರಾಮೇಶ್ವರ ಕ್ಷೇತ್ರಗಳು ಸಹ ಪ್ರವಾಸಿ ತಾಣಗಳಾಗಿ ಗಮನಸೆಳೆಯುವಲ್ಲಿ ಹಿಂದಿವೆ.ಜಿಲ್ಲೆಯಲ್ಲಿ ಅಂತಹ ಪ್ರವಾಸಿತಾಣಗಳು ಇಲ್ಲ. ಆದರೆ ಇರುವ ಸ್ಥಳಗಳನ್ನೇಅಭಿವೃದ್ಧಿಪಡಿಸಿದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣಬಹುದು. ಪ್ರವಾಸೋದ್ಯಮದಿನದಂದು ಅಂತಹ ಪ್ರಯತ್ನಕ್ಕೆ ನಾಂದಿಹಾಡಲಿ ಎಂಬುದು ಜನರ ಅಪೇಕ್ಷೆ.
ರಾ. ರವಿಬಾಬು