Advertisement
ಬೆಂಗಳೂರು ನಗರದಿಂದ ಪಶ್ವಿಮಕ್ಕೆ ಕೇವಲ 40 ರಿಂದ 50 ಕಿ.ಮೀ ಸಮೀಪವಿರುವ ಮಾಗಡಿ ಅಕ್ಷರಸಃ ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು. ಭಾರತ ರತ್ನ ಸರ್‌ಎಂ. ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ನಿರ್ಮಾಣ ಗೊಂಡಿರುವ ಪ್ರಸಿದ್ಧ ತಿಪ್ಪ ಗೊಂಡನಹಳ್ಳಿ ಜಲಾ ಶಯವಿದೆ. ಪ್ರಕೃತಿಯ ಮಡಲಿಲ್ಲ ಇರುವ ಈ ಜಲಾಶಯ ಪರಿಸರ ಪ್ರೇಮಿ ಗಳಿಗೆ ಸುಂದರ ತಾಣವಾಗಿದೆ. ಇಲ್ಲಿ ಬೀಸುವ ತಂಗಾಳಿಯನ್ನು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದನ್ನುನೋಡಿಕೊಂಡು ಮಾಗಡಿಗೆ ಬಂದರೆ ಮಾಗಡಿ ಪಟ್ಟಣದ ಒಂದು ಕಿ.ಮೀ ಸಮೀಪದಲ್ಲಿಯೇ ಮಾಂಡವ್ಯ ಮಹರ್ಷಿಗಳ ತಪೋಭೂಮಿ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನವಿದೆ. ಚೋಳರ ಕಾಲದ ಈ ದೇವಸ್ಥಾನ ಅತ್ಯಂತ ಸುಂದರವಾಗಿದೆ. ದೇವರ ಮುಂದೆ ಮಾಂಡವ್ಯ ಮಹರ್ಷಿಗಳು ಆರಾಧಿಸಿದ ಸಾಲಿ ಗ್ರಾಮವಿದೆ. ಇದಕ್ಕೆ ಎಷ್ಟೇ ಕೊಡ ನೀರು ಅಭಿಷೇಕ ನೆರವೇರಿಸಿದರೂ ಅದು ಎಲ್ಲಿ ಸೇರುತ್ತದೆ ಎಂಬುದೇ ನಿಗೂಢ. ಆಸ್ತಿಕ ಭಕ್ತರಿಗೆ ನೆಮ್ಮದಿಯ ತಾಣವಾಗಿದೆ. ಇದು ನಾಡಪ್ರಭು ಕೆಂಪೇಗೌಡರ ಆರಾಧ್ಯ ದೈವವೂ ಆಗಿತ್ತು.
Related Articles
Advertisement
ದಸರಾ ರಜಾ ಬಂದಿದೆ. ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಪೋಷಕರು ಪ್ರವಾಸ ಕೈಗೊಳ್ಳುತ್ತಾರೆ. ಇದಕ್ಕಾಗಿ ಪ್ರವಾಸೋಧ್ಯಮ ಇಲಾಖೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸು ವುದು ಅತ್ಯಾವಶ್ಯಕ. ಪ್ರವಾಸೋಧ್ಯಮ ಇಲಾಖೆಯಿಂದ ಮೇಲ್ಕಂಡ ಎಲ್ಲ ಸ್ಥಳಗಳನ್ನು ಮತ್ತೂಷ್ಟು ಅಭಿವೃದ್ಧಿಪಡಿಸಬೇಕಿದೆ. ವಸತಿ, ಹೋಟೆಲ್ ಸೇರಿ ದಂತೆ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಸುಂದರವಾದ ಪ್ರವಾಸಿತಾಣವನ್ನಾಗಿಸಿದರೆ ಮತ್ತೂಷ್ಟು ಪ್ರವಾಸಿಗರನ್ನು ಆಕರ್ಷಿಸು ವುದರಲ್ಲಿ ಸಂದೇಶವಿಲ್ಲ ಎನ್ನುತ್ತಾರೆ ಪ್ರವಾಸಿಗರಾದ ರಮೇಶ, ಪ್ರಕಾಶ್, ವೆಂಕಟೇಶ್, ಕುಮಾರ್.
ಕೆಂಪೇಗೌಡರ ವೀರ ಸಮಾಧಿ ಕೆಂಪಾಪುರ ಅಭಿವೃದ್ಧಿಗೆ ಸಜ್ಜು: ಕೆಂಪೇಗೌಡರ ವೀರ ಸಮಾಧಿ ಕೆಂಪಾಪುರದಲ್ಲಿದ್ದು, ಇದನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಜ್ಜಾಗಿದ್ದು ಇದೊಂದು ಸುಂದರ ಪ್ರವಾಸಿ ತಾಣವನ್ನಾಗಿಸಲು ಸುಮಾರು 60 ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯಕ್ರಮ ರೂಪಗೊಂಡಿದೆ.
ಮಾಗಡಿ ತಾಲೂಕಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಪ್ರವಾಸೋ ಧ್ಯಮ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದೇನೆ. ಹಣ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈಗ ನಮ್ಮ ಕಾಂಗ್ರೆಸ್ ಸರ್ಕಾರ ವಿದ್ದು, ಅಭಿವೃದ್ಧಿಗೆ ಯಾವುದೇ ಅಡ್ಡಿ ಆತಂಕವಿಲ್ಲ. ಅಧಿಕಾರಿಗಳನ್ನು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಿದ್ದಾರೆ. ಪ್ರವಾಸಿಗರ, ಭಕ್ತರ ಅನುಕೂಲಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.-ಎಚ್.ಸಿ.ಬಾಲಕೃಷ್ಣ , ಶಾಸಕ
ತಿರುಮಲೆ ಶ್ರೀನಿವಾಸ್