Advertisement
ರಾಜ್ಯ ಹಾಗೂ ಹೊರರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಪಾರ ಸಂಖ್ಯೆ ಕಂಡ ಬಂದಿದ್ದಾರೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಶೈಕ್ಷಣಿಕ ಪ್ರವಾಸಕ್ಕೆ ಈ ವರ್ಷ ಮರುಚಾಲನೆ ಸಿಕ್ಕಿರುವುದರಿಂದ ಈ ವರ್ಷ ನಿರಾತಂಕವಾಗಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ರವಿವಾರ ಸೈಂಟ್‌ಮೇರಿ ಐಲ್ಯಾಂಡ್, ಸೀವಾಕ್‌ವೆà, ಪಡುಕರೆ ಬೀಚ್ ಸೇರಿದಂತೆ ಕಡಲತೀರಗಳು ಭರ್ತಿಯಾಗಿದ್ದವು.
ಪ್ರವಾಸಿಗರ ನೂರಾರು ವಾಹನಗಳು ಆಗಮಿಸಿದ ಕಾರಣ ವಾಹನ ದಟ್ಟಣೆ ಹೆಚ್ಚಾಗಿ ಮಲ್ಪೆ ನಗರದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು. ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.