Advertisement
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡುವ ದಿಸೆಯಲ್ಲಿ ಟೂರಿಸಂ ಸರ್ಕ್ನೂಟ್ ಸ್ಥಾಪಿಸಬೇಕು ಎಂಬ ಪ್ರಸ್ತಾವನೆ ಕಳೆದ ಹಲವಾರು ವರ್ಷಗಳಿಂದ ಇದೆ. ಇದೀಗ ರಾಜ್ಯ ಸರಕಾರ ನಿಯುಕ್ತಿಗೊಳಿಸಿರುವ ಡಿಲೊçಟ್ ಏಜೆನ್ಸಿ ನಡೆಸಿರುವ “ಎಕಾಮಿಕ್ ಡೆವಲಪ್‌ಮೆಂಟ್ ಅಸ್ಸೆಸ್‌ಮೆಂಟ್ ಫಾರ್ ಕೋಸ್ಟಲ್ ಡಿಸ್ಟ್ರಿಕ್ಟ್ ‘ ಸರ್ವೇ ಕರಾವಳಿಯಲ್ಲಿ ಪ್ರವಾಸೋದ್ಯಮದಲ್ಲಿ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರಿನಿಂದ ಗೋವಾದವರೆಗೆ ಟೂರಿಸಂ ಸರ್ಕ್ನೂಟ್ ಮಾಡಬೇಕು ಎಂದು ಸಲಹೆ ನೀಡಿದೆ.
ಎಲ್ಲ ಅರ್ಹತೆಗಳಿದ್ದರೂ ಆಸಕ್ತಿ ಮತ್ತು ಉತ್ತೇಜನದ ಕೊರತೆಯಿಂದ ದ. ಕನ್ನಡ ಹಾಗೂ ಉಡುಪಿ ಜಿಲ್ಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳ ನಕಾಶೆಯಲ್ಲಿ ಗುರುತಿಸಿಕೊಳ್ಳಲು ವಿಫಲವಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ 2011-12ನೇ ಸಾಲಿನಲ್ಲಿ ದೇಶದಲ್ಲಿ 53 ಮೆಗಾ ಸರ್ಕ್ನೂಟ್/ಡೆಸ್ಟಿನೇಶನ್‌ಗಳನ್ನು ಗುರುತಿಸಿತ್ತು. ಇದರಲ್ಲಿ 35 ಯೋಜನೆಗಳಿಗೆ ಮಂಜೂರಾತಿ ಲಭಿಸಿದ್ದು ಕರ್ನಾಟಕದ ಹಂಪೆ, ಪಟ್ಟದಕಲ್ ಹಾಗೂ ಬಾದಾಮಿ, ಐಹೊಳೆ, ಕೇರಳದ ಮುಜಿರಿಸ್ ಹೆರಿಟೇಜ್ ಸರ್ಕ್ನೂಟ್, ಅಲಪುಳ ಹಿನ್ನೀರು ಸರ್ಕ್ಯೂಟ್ ಸೇರಿತ್ತು.
Related Articles
Advertisement
ಪ್ರಮುಖ ಸಂದರ್ಶನ ತಾಣಗಳುಮಂಗಳೂರಿನಿಂದ ಗೋವಾದವರೆಗೆ ಟೂರಿಸ್ಟ್ ಸರ್ಕ್ಯೂಟ್ ರೂಪುಗೊಂಡರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಾಧ್ಯವಾಗಬಹುದು. ಗೋವಾ, ಉತ್ತರ ಕನ್ನಡದ ಗೋಕರ್ಣ ಸೇರಿದಂತೆ ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರನ್ನು ಮಂಗಳೂರಿಗೂ ಆಕರ್ಷಿಸಲು ಸಾಧ್ಯವಿದೆ. ದ.ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳು ಸೇರಿದಂತೆ 18 ಪ್ರಮುಖ ತಾಣಗಳಿವೆ. ಇದರಲ್ಲಿ 11 ತಾಣಗಳು ಮಂಗಳೂರು ನಗರದಲ್ಲಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಪೊಳಲಿ, ಶ್ರೀ ಕ್ಷೇತ್ರ ಕಟೀಲು, ಶ್ರೀ ಮಂಗಳಾದೇವಿ ಕ್ಷೇತ್ರ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು, ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರ, ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಚಾಪೆಲ್, ಉಳ್ಳಾಲ ಸಯ್ಯದ್ ಮದನಿ ದರ್ಗಾ, ಮೂಡುಬಿದಿರೆ ಸಾವಿರಕಂಬ ಬಸದಿ, ಸುಂದರ ಬೀಚ್‌ಗಳಾದ ಸಸಿಹಿತ್ಲು ಬೀಚ್, ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸುಲ್ತಾನ್ ಬತ್ತೇರಿ ಸೋಮೇಶ್ವರ ಬೀಚ್, ಪಿಲಿಕುಳ ನಿಸರ್ಗಧಾಮ ಮುಂತಾದ ಅನೇಕ ಪ್ರವಾಸಿ ತಾಣಗಳಿವೆ. – ಕೇಶವ ಕುಂದರ್