Advertisement

ಮೂಡಬಿದಿರೆ:ಟೂರಿಸ್ಟ್‌ ಬಸ್‌ ಪಲ್ಟಿ,10ಮಂದಿಗೆ ಗಾಯ,ಸಂಚಾರ ಅಸ್ತವ್ಯಸ್ತ

10:01 AM Jun 08, 2017 | Team Udayavani |

ಮೂಡಬಿದಿರೆ : ಇಲ್ಲಿನ  ಬೆಳುವಾಯಿ ಬಳಿಯ ಕೆಸರುಗೆದ್ದೆ ಎಂಬಲ್ಲಿ  ಹೆದ್ದಾರಿಯಲ್ಲಿ  ಟೂರಿಸ್ಟ್ ಬಸ್ ಪಲ್ಟಿಯಾಗಿ 10 ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಗಿನ ಜಾವ ಸಂಭವಸಿದೆ. ಘಟನೆಯಿಂದಾಗಿ  ಮೂಡಬಿದಿರೆ-ಕಾರ್ಕಳ ಸಂಪರ್ಕಿಸುವ ರಸ್ತೆ ಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. 

Advertisement

ವಾಹನಗಳ ಸಂಚಾರಕ್ಕೆ  ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.ರಸ್ತೆಯಿಂದ  ಬಸ್‌ ತೆರವುಗೊಳಿಸಲಾಗಿದ್ದು ಇದೀಗ ಹೆದ್ದಾರಿ ವಾಹನ ಸಂಚಾರಕ್ಕೆ ತೆರವುಗೊಳಿಸಲಾಗಿದೆ. 

32 ಪ್ರಯಾಣಿಕರಿದ್ದ  ಟೂರಿಸ್ಟ್ ಬಸ್ ಉಡುಪಿಯಿಂದ ತಿರುಪತಿಗೆ ತೆರಳುತ್ತಿತ್ತು,ವಾಹನದಲ್ಲಿ ಹತ್ತು ಮಂದಿಗೆ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.  

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next