Advertisement
ಅಚ್ಚಾಂತುರ್ತಿ-ಕೋಟ್ಟಪ್ಪುರಂ ಸೇತುವೆಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಎದುರಾಗಿದ್ದ ಅಡ್ಡಿಗಳೆಲ್ಲ ನಿವಾರಣೆ ಯಾಗಿವೆೆ. ಕೋಟ್ಟಪ್ಪುರಂ ಹೌಸ್ ಬೋಟ್ ಟರ್ಮಿನಲ್ ರಸ್ತೆಗೆ ಬದಲಿಯಾಗಿ ಕೋಟ್ಟಪ್ಪುರಂ ಕ್ಷೇತ್ರದ ಹಿಂಭಾಗದಿಂದ ಆರಂಭಿಸಿ ತೇಜಸ್ವಿನಿ ನದಿ ದಡದಲ್ಲಿ ಈ ಹಿಂದೆ ತೀರ್ಮಾನಿಸಿದಂತೆ ಹೌಸ್ ಬೋಟ್ ಟರ್ಮಿನಲ್ ತನಕ ಹಾದು ಹೋಗುವ ಒಂದು ಕಿಲೋ ಮೀಟರ್ ರಸ್ತೆಗೆ ಹಾಗೂ ಇಂಟರ್‌ಲಾಕ್ ಕಾಲ್ನಡಿಗೆ ದಾರಿ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಆಡಳಿತಾನುಮತಿ ಲಭಿಸಿದೆ. ಈ ಮೂಲಕ ಶೀಘ್ರವೇ ಹೌಸ್ ಬೋಟ್ ಟರ್ಮಿನಲ್ ನಿರ್ಮಾಣಕಾರ್ಯ ಕೈಗತ್ತಿಕೊಳ್ಳಲಿದೆ.
ತಿರುವನಂತಪುರದ ಪ್ರವಾಸೋದ್ಯಮ ಕಾರ್ಯದರ್ಶಿ ರಾಣಿ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಆರ್ಕಿಟೆಕ್ಟ್ ಟಿ.ವಿ. ಮಧು ಕುಮಾರ್ ಸಿದ್ಧಪಡಿಸಿದ 1.35 ಕೋಟಿ ರೂ. ವೆಚ್ಚದ ಈ ಯೋಜನೆಗೆ ಮಾನ್ಯತೆ ನೀಡಲಾಯಿತು. ಹೌಸ್ ಬೋಟ್ ಟರ್ಮಿನಲ್‌ಗೆ ರಸ್ತೆ ನಿರ್ಮಾಣಕ್ಕೆ ಅಗತ್ಯದ ಸ್ಥಳವನ್ನು 27 ಮಂದಿ ಖಾಸಗಿ ವ್ಯಕ್ತಿಗಳು ನೀಡಿದ್ದಾರೆ. ಶಾಸಕ ಎಂ.ರಾಜಗೋಪಾಲ್ ಅವರ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷ ಕೆ.ಪಿ. ಜಯರಾಜನ್, ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ರಾಫಿ ಮೊದಲಾದವರು ಭೂಮಾಲಕರೊಂದಿಗೆ ನಡೆಸಿದ ಚರ್ಚೆಯ ಮೂಲಕ ಸ್ಥಳವನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಯಿತು. ಈ ಸಂಬಂಧ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಸ್ಥಳ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿದ್ದಾರೆ.
Related Articles
Advertisement
ಪ್ರವಾಸಿ ಕೇಂದ್ರವಾಗಿ ಜಿಲ್ಲೆಹೌಸ್ ಬೋಟ್ ಟರ್ಮಿನಲ್ ನಿರ್ಮಾಣದ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಆರ್ಥಿಕವಾಗಿ ಬಲಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯನ್ನು ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
– ಪಿ.ಸುನಿಲ್ ಕುಮಾರ್, ಡಿ.ಟಿ.ಪಿ.ಸಿ. ಮ್ಯಾನೇಜರ್ ಅಡ್ಡಿ ನಿವಾರಣೆ
ಕಲ್ವರ್ಟ್, ಕಾಲ್ದಾರಿ, ಗೋಡೆ ಸಹಿತ ರಸ್ತೆ ಸಾಕಾರಗೊಂಡಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿಗದಿತ ಕೋಟ್ಟಪ್ಪುರಂ ಹೌಸ್ ಬೋಟ್ ಟರ್ಮಿನಲ್ ನಿರ್ಮಾಣಕ್ಕೆ ಎದುರಾಗಿದ್ದ ಎಲ್ಲ ಅಡ್ಡಿ ಆತಂಕ ನಿವಾರಣೆಯಾಗಲಿದೆ.
– ಬಿಜು ರಾಘವನ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ