ಬಸವಕಲ್ಯಾಣ: ನಗರ ಹೊರವಲಯದ ಹಚ್ಚ ಹಸಿರು ಗುಡ್ಡದ ಮೇಲೆ ಬಸವ ಮಹಾಮನೆ ಆವರಣದಲ್ಲಿನ ನಿರ್ಮಿಸಲಾದ 108 ಅಡಿ ಎತ್ತರದ ಬೃಹತ್ ಬಸವೇಶ್ವರರ ಮೂರ್ತಿ ಮತ್ತು ಶರಣರು ಕಾಯಕ ಮಾಡುವ ಶಿಲ್ಪಕಲಾಕೃತಿಗಳು ಪ್ರವಾಸಿಗರ ಆಕರ್ಷಣಿಯ ಕೇಂದ್ರವಾಗಿವೆ.
ಅಂದಾಜು 25 ಎಕರೆ ಭೂಮಿಯ ಈ ಆವರಣದಲ್ಲಿ ನಿರ್ಮಾಣಗೊಂಡ ವಿಶ್ವಗುರು ಬಸವಣ್ಣವರ ಮೂರ್ತಿ, ವಿವಿಧ ಹೂಗಳಿಂದ ಕೂಡಿದ ಸುಂದವಾದ ಉದ್ಯಾನವನ ಮತ್ತು ಶರಣರ ಮೂಲ ಕಸುಬಾದ ಕುಂಬಾರಿಕೆ, ಚಮ್ಮಾರಿಕೆ, ಹೈನುಗಾರಿಕೆ, ಕೃಷಿಯಲ್ಲಿ ತೊಡಗಿರುವ ರೈತನ ನೈಜ
ಶಿಲ್ಪಕಲಾಕೃತಿ ಕೆತ್ತನೆ ಮಾಡಿರುವುದು 12ನೇ ಶತಮಾನದ ಶರಣರ ಯುಗವನ್ನು ನೆನಪಿಸುವಂತೆ ಮಾಡುತ್ತದೆ.
ಇವು ಪ್ರವಾಸಿಗರನ್ನು ಸೆಳೆಯುತ್ತಿವೆ. ಹಾಗಾಗಿ ಬೀದರ್, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೆಂಗಳೂರು ವಿದ್ಯಾರ್ಥಿಗಳು ಹಾಗೂ ವಿದೇಶಿ ಪ್ರವಾಸಿಗರು ಕೂಡ ಇಲ್ಲಿಗೆ ಭೇಟಿ ನೀಡಿ ವೀಕ್ಷಿಸುವುದು ಸಾಮಾನ್ಯವಾಗಿದೆ.
ಕರ್ನಾಟಕದ ಯಾವ ಪ್ರವಾಸಿ ತಾಣಗಳಿಗೂ ಕಡಿಮೆ ಇಲ್ಲದಂತಹ ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಆದ್ದರಿಂದಲೇ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ.
ವಿಶ್ವಗುರು ಬಸವಣ್ಣನವರು ನಡೆದಾಡಿದ ಭೂಮಿಯಾದ ಬಸವಕಲ್ಯಾಣದಲ್ಲಿ ಇಂತಹ ಬೃಹತ್ ಮೂರ್ತಿ ಮತ್ತು ಶರಣರ ಸಂದೇಶಗಳನ್ನು ಸಾರುವ ಕಲಾಕೃತಿಗಳನ್ನು ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿರುವುದು ಇಲ್ಲಿನ ವಿಶೇಷತೆಯಾಗಿದೆ.
ಶಂಕರ ಕುಕ್ಕಾ ಪಾಟೀಲ, ಸಾಮಾಜಿಕ ಕಾರ್ಯಕರ್ತ
ಇದು ಕೇವಲ ಪ್ರವಾಸಿಗರು ಬಂದು ಹೋಗುವ ತಾಣವಲ್ಲ. ಇಲ್ಲಿ ನಿರ್ಮಿಸಲಾದ ಒಂದೊಂದು ಶಿಲ್ಪ ಕಲಾಕೃತಿಗಳು ಒಂದೊಂದು ಅರ್ಥ ತಿಳಿಸುತ್ತದೆ. ಅವನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು. ಆಗ ಮಾತ್ರ ನಾವು ಇಲ್ಲಿಗೆ ಬಂದು ಹೋಗಿದ್ದು ಸಾರ್ಥಕವಾಗುತ್ತದೆ
ಸಾಯಿನಾಥ, ಪ್ರವಾಸಿಗ ವಿಜಯಪುರ