Advertisement

ಪ್ರವಾಸೋದ್ಯಮಕ್ಕೆ ವನ್ಯಜೀವಿ ಥೀಮ್‌!

12:16 AM Aug 12, 2019 | Team Udayavani |

ಹೊಸದಿಲ್ಲಿ: ಡಿಸ್ಕವರಿ ಚಾನೆಲ್‌ನ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಸಗೈದಿರುವ ಪ್ರಧಾನಿ ನರೇಂದ್ರ ಮೋದಿಯನ್ನೇ ಮಾದರಿಯಾಗಿ ಇಟ್ಟು ಕೊಂಡಿರುವ ಪ್ರವಾಸೋದ್ಯಮ ಸಚಿವಾಲಯವು ಮುಂದಿನ ಎರಡು ತಿಂಗಳ ವರೆಗೆ ನಡೆಸಲಾಗುವ ಇನ್‌ಕ್ರೆಡಿಬಲ್‌ ಇಂಡಿಯಾ ಕ್ಯಾಂಪೇನ್‌ಗೆ “ವನ್ಯಜೀವಿ’ ಥೀಮ್‌ ಆಯ್ದುಕೊಳ್ಳಲು ನಿರ್ಧರಿಸಿದೆ.

Advertisement

ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮವು ಸೋಮವಾರ ಆ. 12ರಂದು ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಪ್ರಧಾನಿಗಿಂತ ದೊಡ್ಡ ನೇತಾರ ನಮ್ಮ ದೇಶದಲ್ಲಿ ಬೇರೆ ಯಾರೂ ಇಲ್ಲ. ಹೀಗಾಗಿ ಇನ್‌ಕ್ರೆಡಿಬಲ್‌ ಇಂಡಿಯಾ ಅಭಿಯಾನಕ್ಕೆ ವೈಲ್ಡ್‌ಲೈಫ್ ಅನ್ನೇ ಥೀಮ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ ಪಟೇಲ್‌ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2002ರಲ್ಲಿ ಇನ್‌ಕ್ರೆಡಿಬಲ್‌ ಇಂಡಿಯಾ ಎಂಬ ಅಭಿಯಾನವನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅಂದಿನಿಂದಲೂ ಪ್ರತಿ ವರ್ಷ ವಿವಿಧ ಧ್ಯೇಯವನ್ನು ಆಧರಿಸಿ ಈ ಕ್ಯಾಂಪೇನ್‌ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next