Advertisement
ಅವರು ಶನಿವಾರ ಕುಂದಾಪುರದ ಕೋಡಿ ಪಂಚಗಂಗಾವಳಿ ನದಿ ತೀರದ ಹಿನ್ನೀರು ಪ್ರದೇಶಗಳಲ್ಲಿ ಬೋಟ್ ಮೂಲಕ ಸಂಚರಿಸಿ ಕಾಂಡ್ಲಾ ವನಗಳನ್ನು ವೀಕ್ಷಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಇಲ್ಲಿನ ರಮಣೀಯ ಪ್ರದೇಶಗಳ ದೃಶ್ಯಾವಳಿ ಗಳನ್ನು ಸೆರೆ ಹಿಡಿದು ಇಕೋ ಟೂರಿಸಂ ಕೇಂದ್ರಗಳನ್ನು ಗುರುತಿಸಲಾಗುವುದು. ಹಿನ್ನೀರು ಪ್ರದೇಶಗಳಲ್ಲಿ ಇನ್ನಷ್ಟು ಕಾಂಡ್ಲಾ ವನಗಳನ್ನು ಬೆಳೆಸುವ ಗುರಿ ಇದೆ. ಇಕೋ ಟೂರಿಸಂ ಮೂಲಕ ಬರುವ ಆದಾಯವನ್ನು ಬಳಸಿಕೊಂಡು ಕಾಂಡ್ಲಾ ವನಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳಿವೆ ಎಂದರು. ಶೇ. 33ಕ್ಕೇರಿಸುವ ಗುರಿ
ಯಡಿಯೂರಪ್ಪ ಅವರ ಹಿಂದಿನ ಸರಕಾರದ ಅವಧಿಯಲ್ಲಿ ರೂಪಿಸಲಾದ “ಹಸಿರು ಕವಚ’ ಯೋಜನೆಯಿಂದಾಗಿ ರಾಜ್ಯದಲ್ಲಿ ಶೇ. 13ರಷ್ಟಿದ್ದ ಹಸಿರು ಕವಚ ಪ್ರಸ್ತುತ ಶೇ. 23ಕ್ಕೇರಿದೆ. ಅದನ್ನು ಶೇ. 33ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಒಂದೆರಡು ವರ್ಷಗಳಲ್ಲಿ ಮುಗಿಯುವ ಯೋಜನೆ ಇದಲ್ಲ; ಕಾಲಾವಕಾಶ ಬೇಕು ಎಂದ ಅವರು, ಬಂಡೀಪುರ ಸೇರಿದಂತೆ ಹಾಗೂ ಇತರ ಅರಣ್ಯ ಇಲಾಖೆಯ ಪ್ರವಾಸ ಸ್ಥಳಗಳಿಗೆ ಕೋವಿಡ್ ಕಾರಣದಿಂದ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ ದಟ್ಟಾರಣ್ಯ ಪ್ರದೇಶಗಳಿಗೆ ಪ್ರವಾಸಿಗ ರಿಗೆ ಅನುಮತಿ ಇಲ್ಲ ಎಂದು ತಿಳಿಸಿದರು.
Related Articles
Advertisement
ಜಿಲ್ಲೆಯಾದ್ಯಂತ ಸಚಿವರ ಪ್ರವಾಸಉಡುಪಿ: ಸಚಿವ ಲಿಂಬಾವಳಿ ಶನಿವಾರ ಕುಂದಾಪುರ, ಉಡುಪಿ ಮತ್ತು ಕಾರ್ಕಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಮಾಡಿ ಕೋಡಿ ಪಂಚಗಂಗಾವಳಿ ನದಿ ತೀರದ ಹಿನ್ನೀರು ಪ್ರದೇಶಗಳಲ್ಲಿ ಬೋಟ್ ಮೂಲಕ ಕಾಂಡ್ಲಾ ವನಗಳನ್ನು ವೀಕ್ಷಿಸಿದರು. ಬಳಿಕ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖಾ ಸಭೆ ನಡೆಸಿದರು. ಹೆಬ್ರಿಯಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೊàದ್ಯಾನ ಉದ್ಘಾಟನೆ, ಕಾರ್ಕಳದಲ್ಲಿ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಉದ್ಘಾಟನೆ ನೆರವೇರಿಸಿ ಕೋಟಿ ಚೆನ್ನಯ ಥೀಂ ಪಾರ್ಕ್‌ಗೆ ಭೇಟಿ ನೀಡಿದರು.