Advertisement

Tourism: ಮೋದಿ ಭೇಟಿಯ ಇಂಪ್ಯಾಕ್ಟ್: ಗೂಗಲ್‌ನಲ್ಲಿ ಲಕ್ಷದ್ವೀಪಕ್ಕೆ ಸರ್ಚ್‌

12:42 AM Jan 06, 2024 | Team Udayavani |

ಹೊಸ‌ದಿಲ್ಲಿ: ದೇಶದ ಪ್ರವಾಸೋದ್ಯಮವನ್ನು ಉತ್ತೇಜಿ­ಸು­ವಲ್ಲಿ ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿಯೂ ತೆಗೆದುಕೊಂಡ ಕ್ರಮಗಳು ಹಲವು. 2024ರಲ್ಲಿ ಅಂಥ ಮೊದಲ ಪ್ರಯತ್ನವೇ ಯಶಸ್ಸು ನೀಡಿದ್ದು, ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಗೂಗಲ್‌ನಲ್ಲಿ ಲಕ್ಷದ್ವೀಪದ ಕುರಿತು ಅತೀಹೆಚ್ಚು ಹುಡುಕಾಟ ನಡೆಸಲಾಗಿದೆ ಹಾಗೂ ಪ್ರವಾಸಿಗರು ಮಾಲ್ದೀವ್ಸ್‌ ಬಿಟ್ಟು ಲಕ್ಷದ್ವೀಪದತ್ತ ಚಿತ್ತಹರಿಸುತ್ತಿದ್ದಾರೆಂದು ತಿಳಿದುಬಂದಿದೆ.

Advertisement

ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ದಿನ ಭಾರತದಲ್ಲಿ 50,000ಕ್ಕೂ ಹೆಚ್ಚು ಬಾರಿ ಗೂಗಲ್‌ನಲ್ಲಿ ಲಕ್ಷದ್ವೀಪವನ್ನು ಸರ್ಚ್‌ ಮಾಡಲಾಗಿದ್ದು, ಆ ದಿನ ಸರ್ಚ್‌ ಆದ ಅಗ್ರ 9ನೇ ಪದವೂ ಇದೇ ಆಗಿದೆ. ಇನ್ನು ಅಲ್ಲಿನ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿ ಕೊಂಡಿದ್ದ ಮೋದಿ, ಪ್ರವಾಸಿಗರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಎಂದೂ ಕರೆ ನೀಡಿದ್ದರು.

ಈ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಹೋಗಬೇಕೆಂದು­ಕೊಂಡಿದ್ದ ಮಂದಿ ಲಕ್ಷದ್ವೀಪದ ಸೌಂದರ್ಯಕ್ಕೆ ಮರುಳಾಗಿ ಆ ಪ್ರದೇಶದ ಬಗ್ಗೆ ಹುಡುಕಾಟ ಹೆಚ್ಚಿಸಿರುವುದು ವರದಿಯಾಗಿದೆ. ಭಾರತ­ದಿಂದಲೇ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದ್ದ ಮಾಲ್ದೀವ್ಸ್‌ಗೆ ಇದೀಗ ಲಕ್ಷದ್ವೀಪ ಪೈಪೋಟಿ ನೀಡಲಿದ್ದು, ಮೋದಿಯೇ ಇದಕ್ಕೆ ನಾಂದಿ ಹಾಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next