Advertisement

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

09:34 PM Sep 26, 2021 | Team Udayavani |

ಮಹಾನಗರ: ರಮಣೀಯ ಸಾಗರ ತೀರ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಶೈಕ್ಷಣಿಕ, ವೈದ್ಯಕೀಯ ಹಬ್‌, ಸುಂದರ ಪ್ರಾಕೃತಿಕ ತಾಣಗಳು ಮುಂತಾದ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಿರುವ ಹಲವಾರು ಯೋಜನೆಗಳು ಕಡತಗಳಲ್ಲೇ ಬಾಕಿ ಯಾಗಿವೆ. ಪರಿಣಾಮ ಜಿಲ್ಲೆಯಲ್ಲಿ ನಿಂತ ನೀರಾಗಿರುವ ಪ್ರವಾಸೋದ್ಯಮಕ್ಕೆ ಚುರುಕು ನೀಡಬೇಕಿದ್ದು, ಪ್ರವಾಸೋದ್ಯಮ ದಿನವಾದ ಇಂದು (ಸೆ.27) ಈ ಬಗ್ಗೆ ಚಿಂತನೆ ನಡೆಸುವುದು ಅಗತ್ಯವಾಗಿದೆ.

Advertisement

ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆ ಸುಂದರ ಬೀಚ್‌ಗಳು. ಮಂಗಳೂರಿನಲ್ಲಿ 42 ಕಿ.ಮೀ. ಸಮುದ್ರ ತೀರವಿದ್ದು, ಸುರತ್ಕಲ್‌, ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು, ತಲಪಾಡಿ ಬೀಚ್‌ಗಳನ್ನು ಒಳಗೊಂಡಿದೆ. ಕೇಂದ್ರ ಸರಕಾರ 2016ನೇ ಸಾಲಿನಲ್ಲಿ ರೂಪಿಸಿದ್ದ ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸಕೀìಟ್‌ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳನ್ನು ಆಯ್ಕೆ ಮಾಡಿಕೊಂಡು 25.35 ಕೋ.ರೂ. ವೆಚ್ಚದ ಯೋಜನ ವರದಿ ಸಿದ್ಧಪಡಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಲಾಗಿತ್ತು. ಬಳಿಕ ಕೆಲವು ಬದಲಾವಣೆಗಳೊಂದಿಗೆ ಪರಿಷ್ಕೃತ ಯೋಜನ ವರದಿಯನ್ನು 2018ರ ಸೆಪ್ಟಂಬರ್‌ನಲ್ಲಿ ಮರಳಿ ಸಲ್ಲಿಸಲಾಗಿದ್ದು, ಯೋಜನೆ ಕಡತದಲ್ಲೇ ಬಾಕಿಯಾಗಿದೆ.

ಕಾರ್ಯರೂಪಕ್ಕೆ ಬಾರದ ತೇಲುವ ಜಟ್ಟಿ
ಹಿನ್ನೀರು ಪ್ರವಾಸೋದ್ಯಮದಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರಕೂಳೂರು ನದಿ ತೀರ, ಸುಲ್ತಾನ್‌ ಬತ್ತೇರಿ, ತಣ್ಣೂರುಬಾವಿ, ಹಳೆ ಬಂದರು, ಕಸಬ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್‌ ಫೀಟ್‌ ಬಳಿ, ನೇತ್ರಾವತಿ ನದಿತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಸಸಿಹಿತ್ಲು ಕಡಲ ತೀರದ ಬಳಿ ನಂದಿನ ನದಿ ತಟದ ಬಳಿ ಸಹಿತ ಒಟ್ಟು 26 ಕೋ.ರೂ. ವೆಚ್ಚದಲ್ಲಿ 13 ತೇಲುವ ಜಟ್ಟಿಗಳನ್ನು ನಿರ್ಮಿಸುವ ಯೋಜನೆ ಇನ್ನೂ ಪ್ರಸ್ತಾವನೆಯಲ್ಲೇ ಉಳಿದುಕೊಂಡಿದೆ.

ಇದನ್ನೂ ಓದಿ:65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ಹಿಂದಿನ ಕೇಂದ್ರ ಶಿಪ್ಪಿಂಗ್‌ ರಾಜ್ಯ ಸಚಿವ ಮನ್‌ಸುಖ್‌ ಮಾಂಡವೀಯ ಕಳೆದ ವರ್ಷ ಕರ್ನಾಟಕ, ಗೋವಾ, ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ನಡೆಸಿದ್ದ ವೀಡಿಯೋ ಕಾನೆ#ರೆನ್ಸ್‌ನಲ್ಲಿ ಕೇಂದ್ರ ಸರಕಾರದ ಶಿಪ್ಪಿಂಗ್‌ ಸಚಿವಾಲಯದ ವತಿಯಿಂದ ಗುರುಪುರ (ಫಲ್ಗುಣಿ ), ನೇತ್ರಾವತಿ ನದಿಗಳಲ್ಲಿ ಅನುಷ್ಠಾನಗೊಳ್ಳುವ ವಾಟರ್‌ಸ್ಪೋರ್ಟ್ಸ್  ಸುಸಜ್ಜಿತ ಜೆಟ್ಟಿಗಳ ನಿರ್ಮಾಣ ಸಹಿತ 100 ಕೋ.ರೂ. ವೆಚ್ಚದ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ್ದು, ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ಮಂಗಳೂರಿನ ಸಾಗರತೀರದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದ್ದ ಸಸಿಹಿತ್ಲು ಸರ್ಫಿಂಗ್‌ ಉತ್ಸವ ಕೇವಲ ಆರಂಭದ ಎರಡು ವರ್ಷ ಗಳಿಗಷ್ಟೇ ಸೀಮಿತವಾಗಿತ್ತು. ಎಚ್‌.ಡಿ. ಕುಮಾರಸ್ವಾಮಿ ಅವರ ಸರಕಾರದ ಅವಧಿ ಯಲ್ಲಿ ಘೋಷಿಸಿದ್ದ ಟೂರಿಸಂ ಸಕೀìಟ್‌ ಯೋಜನೆ ಬಜೆಟ್‌ನ ಕಡತದಲ್ಲೇ ಉಳಿದುಕೊಂಡಿದೆ.

ಸಮಗ್ರ ಅಭಿವೃದ್ಧಿಗೆ ಕ್ರಮ
ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನವನ್ನು ಇನ್‌ಕ್ಲೂಸಿವ್‌ ಗ್ರೋಥ್‌ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ದ. ಕ.ಜಿಲ್ಲೆಯಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೋಮವಾರ ಮಂಗಳೂರಿನಲ್ಲಿ ಪ್ರವಾಸೋದ್ಯಮ ಸಮಾವೇಶವನ್ನು ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ವಸ್ತುಸ್ಥಿತಿ, ಹಿನ್ನಡೆ, ಮುಂದೆ ಆಗಬೇಕಾಗಿರುವ ಕ್ರಮಗಳ ಬಗ್ಗೆ ಪ್ರವಾಸೋದ್ಯಮದ ಭಾಗಿದಾರಿಗಳು, ಅಧಿಕಾರಿಗಳನ್ನು ಒಳಗೊಂಡು ಸಮಗ್ರ ವಿಶ್ಲೇಷಣೆ, ಚರ್ಚೆ ನಡೆಸಲಾಗುವುದು. ಇಲ್ಲಿನ ಅಭಿಪ್ರಾಯಗಳನ್ನು ಕ್ರೋಡೀಕರಿಸಿ
ಕೊಂಡು ಕ್ರಮಗಳನ್ನು ಕೈಗೊಳ್ಳಲಾ ಗುವುದು.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ. ಕ.

 

Advertisement

Udayavani is now on Telegram. Click here to join our channel and stay updated with the latest news.

Next