Advertisement

ಮೈಸೂರಿನಲ್ಲಿ ಟೂರಿಸಂ ಸರ್ಕಿಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

08:05 PM Oct 05, 2022 | Team Udayavani |

ಮೈಸೂರು: ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿದ್ದು ಮೈಸೂರು ಪ್ರವಾಸೋದ್ಯಮ ಸರ್ಕಿಟ್ ಶೀಘ್ರವೇ ಕಾರ್ಯರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆಯನ್ನು ನೆರವೇರಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಮೈಸೂರು, ಹಳೇಬೀಡು, ಬೇಲೂರು ಸೋಮನಾಥಪುರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ವೆಬ್ ಸೈಟ್ ನಲ್ಲಿ ಬುಕ್ ಮಾಡುವ ಸೌಲಭ್ಯವಿರಲಿದೆ ಎಂದರು.

ಉತ್ತರದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರು ದಸರಾವನ್ನ ಟೂರಿಸ್ಟ್ ಸರ್ಕಿಟ್ ನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. ಇದರ ಅನುಭವದ ಆಧಾರದ ಮೇಲೆ ಸೂಕ್ತ ರೂಪುರೇಷೆಗಳನ್ನು ನೀಡಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಪಾರಂಪರಿಕ ವೈಭವ ಮರುಕಳಿಸಿದೆ

ಈ ಬಾರಿ ದಸರಾ ಎಲ್ಲಾ ಕಾರ್ಯಕ್ರಮಗಳು ವಿಜ್ರೃಂಭಣೆಯಿಂದ ಜರುಗಿವೆ. ನಂದಿ ಪೂಜೆ, ಜಂಬೂ ಸವಾರಿ, ದೇವಿಯನ್ನು ಅರಮನೆಗೆ ತೆಗೆದುಕೊಂಡು ಹೋಗಿರುವುದು ಎಲ್ಲವೂ ಈ ವರ್ಷ ಅರ್ಥಪೂರ್ಣ ವಾಗಿ, ಉತ್ಸಾಹದಿಂದ ನಡೆದಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ರಾಜ್ಯ, ದೇಶ, ವಿದೇಶದಿಂದ ಲಕ್ಷಾಂತರ ಜನರು ಬಂದದು ಪಾಲ್ಗೊಂಡಿದ್ದಾರೆ ಮಹಾಜನತೆ ಶಾಂತಿಯಿಂದ ನಡೆಸಿಕೊಟ್ಟಿದ್ದಕ್ಕಾಗಿ ಅಭಿನಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಮೊದಲಿನ ದಸರಾ ಸಂಭ್ರಮದ ಕಳೆ ಮೂಡಿದೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡಲು ಸಾಧ್ಯವಾಗಿದೆ ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಸಂಸರು, ಆಡಳಿತ ವರ್ಗದವರು ಸಹಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಮೈಸೂರಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ನಾಡ ಹಬ್ಬ, ದೇವಿ ಆರಾಧನೆಯ ಈ ಪರಂಪರೆಯ ಮುಂದಿನ ದಿನಗಳಲ್ಲಿಯೂ ವಿಜೃಂಭಣೆಯಿಂದ ನಡೆಯಲಿ ಎಂದರು.

ದೀಪಾಲಂಕಾರ ಹತ್ತುದಿನಗಳ ಕಾಲ ವಿಸ್ತರಣೆ

ಬಹುಜನರ ಬೇಡಿಕೆಯ ಮೇರೆಗೆ ದಸರಾ ದೀಪಾಲಂಕಾರವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು. .

ನಮ್ಮಲ್ಲಿರುವ ತಾಮಸ ಗುಣಗಳ ವಧೆ ಮಾಡಬೇಕು
ಈ ದಿನ ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮೇಲೆ ಸುದೀರ್ಘ ಯುದ್ಧ ಮಾಡಿ ವಿಜಯ ಸಾಧಿಸಿದ ದಿನ. ಇದರ ಅರ್ಥ ರಾಕ್ಷಸೀ ಶಕ್ತಿಗಳ ಮೇಲೆ ಶಿಷ್ಟರ ವಿಜಯ ಎಂದಿದೆ. ಇದನ್ನು ಅರ್ಥಮಾಡಿಕೊಂಡು ನಮ್ಮ ಬದುಕಿನಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮಲ್ಲಿರುವ ತಾಮಸ ಗುಣಗಳನ್ನು ಸಂಪೂರ್ಣವಾಗಿ ವಧೆ ಮಾಡಿ ಶ್ರೇಷ್ಠ ವಾದ, ಪರೋಪಕಾರಿ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮನುಕುಲ ಉದ್ದಾರವಾಗುತ್ತದೆ. ಇಂಥ ಶಕ್ತಿ ದೇವಿ ನೀಡಲಿ. ರೈತರ ಮಳೆ ಬೆಳೆ ಉತ್ತಮವಾಗಿ ಆಗಲಿ. ಸಕಲ ಕನ್ನಡ ನಾಡಿಗೆ, ಜನತೆಗೆ ಮಂಗಳ ಉಂಟಾಗಲಿ, ಸುಭಿಕ್ಷವಾಗಲಿ. ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಬಂಗಾರದಂಗ ಇರೋಣ್ರಿ..

ಉತ್ತರ ಕರ್ನಾಟಕ ಭಾಷೆಯಲ್ಲಿ ಬನ್ನಿ ಹಬ್ಬದ ಶುಭಾಶಯ‌ ಕೋರಿದ ಸಿಎಂ ಬೊಮ್ಮಾಯಿ ಅವರು,ನಾವು ನೀವು ಬನ್ನಿ ಕೊಟ್ಟು ಬಂಗಾರದಂಗ ಇರೋಣ್ರಿ..ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳ್ಳದ್ ಮಾಡ್ಲಿ‌ , ನಾಡಿನ್ಯಾಗ ಮಳಿ ಬೆಳಿ ಎಲ್ಲಾ ಚಂದ್ ಆಗ್ಲಿ. ಜನ ಜಾನುವಾರು ನೆಮ್ಮದಿಯಿಂದ ಬದುಕೊಹಂಗ ಮಾಡತಾಯಿ ಅಂತ ಬೇಡಿಕೊಳ್ತಿನಿ.. ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next