Advertisement
ದೊಡ್ಡ ಹೊಡೆತ ಕೋವಿಡ್-19 ಹಾವಳಿಯಿಂದಾಗಿ ವಿಶ್ವಾದ್ಯಂತ ವಿಮಾನಯಾನ ಮತ್ತು ಹಡಗುಯಾನ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜಗತ್ತಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ಸ್ಪೇನ್, ಇಟಲಿ, ಬ್ರಿಟನ್ ನಂತಹ ದೇಶಗಳು ಅಕ್ಷರಶಃ ನರಕ ಸದೃಶವಾಗಿದ್ದು, ಪ್ರವಾಸೋದ್ಯಮವನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದ ಈ ದೇಶಗಳಿಗಾಗುವ ನಷ್ಟ ಹೇಳತೀರದು.
ಇನ್ನು ವಿಶ್ವದಲ್ಲಿ ಪ್ರತಿ 10 ಉದ್ಯೋಗಗಳಲ್ಲಿ ಒಂದು ಪ್ರವಾಸೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ಟ್ರಾವೆಲ್‌ಉದ್ಯಮಕ್ಕೆ ಸೇರಿದೆ ಎಂಬ ಮಾಹಿತಿಯನ್ನು ಟೂರಿಸಂ ಕೌನ್ಸಿಲ್ ಬಹಿರಂಗಪಡಿಸಿದೆ. ಯುರೋಪ್‌ನಲ್ಲಿ ಸುಮಾರು 6 ಕೋಟಿ ಮತ್ತು ಬ್ರಿಟನ್‌ನಲ್ಲಿ 10 ಲಕ್ಷ ಪ್ರವಾಸೋದ್ಯಮ ಉದ್ಯೋಗಗಳು ನಷ್ಟವಾಗುವ ಸಂಭವವಿದೆ. ಸ್ಪೈನ್ ಮತ್ತು ಇಟಲಿಯ ಜಿಡಿಪಿಗೆ ಶೇ. 15ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಹೀಗಾಗಿ ಈ ದೇಶಗಳು ಭವಿಷ್ಯದಲ್ಲಿ ಭಾರೀ ಸಂಕಷ್ಟವನ್ನು ಎದುರಿಸಲಿವೆ. ಶೇ.96 ರಷ್ಟು ಪ್ರವಾಸೋದ್ಯಮ ಸ್ಥಗಿತ
ವಿಶ್ವದ ಶೇ.96ರಷ್ಟು ಪ್ರವಾಸೋದ್ಯಮ ಪ್ರದೇಶಗಳು ಸ್ಥಗಿತಗೊಂಡಿದ್ದು, ವಿಶ್ವ ಪ್ರವಾ ಸೋದ್ಯಮ ಇತಿಹಾಸದಲ್ಲೇ ಹೀಗಾಗಿರಲಿಲ್ಲ. ಶೇ.90ರಷ್ಟು ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಿದ್ದು, ಎಲ್ಲ ದೇಶಗಳ ಸರಕಾರ ಪ್ರವಾಸ ನಿಷೇಧಿಸಿವೆ. ಪರಿಣಾಮ ಪ್ರವಾಸೋದ್ಯಮ ಕ್ಷೇತ್ರದ ಜತೆ ಸಂಪರ್ಕ ಹೊಂದಿದ್ದ ಇತರೆ ಕ್ಷೇತ್ರಗಳ ಕೋಟ್ಯಂತರ ಉದ್ಯೋಗಿಗಳು ಇಂದು ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ ಎಂದಿದೆ ಸಂಸ್ಥೆಯ ವರದಿ.