Advertisement

ವಿದ್ಯಾರ್ಥಿಗಳಿಂದ ಜಾರ್ಖಂಡ್‌ ಪ್ರವಾಸ

11:01 PM Dec 13, 2019 | Team Udayavani |

ಬೆಂಗಳೂರು: ಏಕ್‌ ಭಾರತ್‌ ಶ್ರೇಷ್ಠಭಾರತ್‌ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಕರ್ನಾಟಕದ ವಿದ್ಯಾರ್ಥಿಗಳು ಜಾರ್ಖಂಡ್‌ಗೆ ಪ್ರವಾಸ ಬೆಳೆಸಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿನಿಮಯದ ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಯೋಜನೆಯಡಿ ಜಾರ್ಖಾಂಡ್‌ನ‌ ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಂತ ಹಂತವಾಗಿ ಕರ್ನಾಟಕಕ್ಕೆ ಬಂದು ತಮ್ಮ ಸಾಂಸ್ಕೃತಿಕ ಪರಂಪರೆಗಳ ಪ್ರದರ್ಶನ ಮಾಡಲಿದ್ದಾರೆ. ಹಾಗೆಯೇ ಕರ್ನಾಟಕ ವಿದ್ಯಾರ್ಥಿಗಳು ಜಾರ್ಖಾಂಡ್‌ಗೆ ಹೋಗಿ ಕಲೆ, ಸಂಸ್ಕೃತಿಯ ಪ್ರದರ್ಶನ ಮಾಡಲಿದ್ದಾರೆ.

Advertisement

ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದು, ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂಬಂಧಪಟ್ಟ ಕಾಲೇಜುಗಳು ಕಡ್ಡಾಯವಾಗಿ ಇದನ್ನು ಅನುಷ್ಠಾನ ಮಾಡಬೇಕಿದೆ. ಕರ್ನಾಟಕ-ಜಾರ್ಖಂಡ್‌, ಆಂಧ್ರ ಪ್ರದೇಶ-ಪಂಜಾಬ್‌, ಜಮ್ಮು ಕಾಶ್ಮೀರ-ತಮಿಳುನಾಡು, ಹರಿಯಾಣ ತೆಲಂಗಾಣ, ಗುಜರಾತ್‌-ಛತ್ತಿಸ್‌ಗಡ್‌, ಮಹಾರಾಷ್ಟ್ರ-ಒಡಿಶಾ, ಅಸ್ಸಾಂ-ರಾಜಸ್ತಾನ್‌ ಹೀಗೆ ಎರಡೆರೆಡು ರಾಜ್ಯಗಳ ಗುಂಪು ಮಾಡಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಇಲ್ಲಿನ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಏಕ್‌ ಭಾರತ್‌ ಶ್ರೇಷ್ಠಭಾರತ್‌ ಕಾರ್ಯಕ್ರಮ ನಡೆಸಿಕೊಡಬೇಕಿದೆ. ಬೇರೆ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಆತಿಥ್ಯ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next