Advertisement

UV Fusion: ಧರೆಗಿಳಿದ ಗಂಧರ್ವ ಲೋಕ

11:36 AM Nov 21, 2023 | Team Udayavani |

ಇದು ಕರಾವಳಿ ತೀರ. ಬಂದರು ನಗರಿ, ಪಶ್ಚಿಮದಲ್ಲಿ ಸಮುದ್ರದ ಅಲೆಗಳ ಆರ್ಭಟ. ಪೂರ್ವ ಘಟ್ಟದ ಬುಡದಲ್ಲಿ ತಲೆ ಎತ್ತಿ ನಾನೇರಿದೆತ್ತರಕ್ಕೆ ನೀನೇರು ಎಂದು ಸವಾಲೊಡ್ಡಿ ನಿಂತ ನರಸಿಂಹಗಢ (ತುಳುವರ ಗಡಾಯಿಕಲ್ಲು). ಪ್ರಾಕೃತಿಕ ಸಂಪತ್ತಿನಿಂದ ತುಂಬಿ ತುಳುಕುವ ತಾಯ ಮಡಿಲಲ್ಲಿ ಮಿನುಗುತ್ತಿರುವ ಭಾರತದ ಎಲ್ಲ ರಾಜ್ಯಗಳ ಜನರನ್ನು ತನ್ನತ್ತ ಸೆಳೆದು, ಹಸುರ ಸಿರಿಯನ್ನು ಮಡಿಲ್ಲಲಿಟ್ಟು ಪೋಷಿಸುತ್ತಿರುವ ಸಾಂಸ್ಕೃತಿಕ ವೈವಿಧ್ಯಮಯ ಲೋಕ ನಮ್ಮ ಕುಡ್ಲ.

Advertisement

ದೈವಗಳ ಕಾರ್ಣಿಕ, ನಾಗಾರಾಧನೆಗಳ ನೆಲೆವೀಡು. ಪುಣ್ಯ ನೆಲೆಗಳ ಸಂದರ್ಶನಕ್ಕಾಗಿ ಹರಿದು ಬರುವ ಭಕ್ತ ಸಾಗರ. ಮಂಗಳೂರಿನ ಬೋಳಾರ ಪ್ರದೇಶದಲ್ಲಿ ಒಂಭತ್ತನೆಯ ಶತಮಾನದ ಪುರಾತನ ಮಂಗಳಾದೇವಿ ದೇವಾಲಯವಿದೆ. ಈ ದೇವಿಯಿಂದಲೇ ನಗರಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕದ್ರಿ ಮಂಜುನಾಥ ದೇವಾಲಯ ಹೇಗೆ ಹಲವಾರು ಪುಣ್ಯ ಕ್ಷೇತ್ರಗಳನಿಂದ ಕೂಡಿದ ಪುಣ್ಯ ಭೂಮಿ ಮಂಗಳೂರು…. ಸ್ಥಳ ಒಂದೇ ಅದು ಮಂಗಳೂರು.. ಆದರೇ ಮಂಗಳಾಪುರ, ಕುಡ್ಲ, ಮ್ಯಾಂಗಲೂರ್‌, ಮೈಕಾಲ, ಕೋಡಿಯಾಲ ಎಂಬೆಲ್ಲ ನಾಮ ಹಲವು. ಹಲವು ಜಾತಿ, ಧರ್ಮಗಳಿದ್ದರು ವಿವಿಧ ಭಾಷೆ ಮಾತಾಡುವ ಜನರಿದ್ದರು ಯೆನ್ಚ ಉಲ್ಲರ್ ಮಾರ್ರೆ ? ದಾದ ವಿಸೇಸ! ಎಂದು ಮಾತಾಡಿಸುವ ತುಳುನಾಡಿನ ಜನತೆ. ಕಿವಿಗಳಿಗೆ ಮುದಕೊಡುವ ಸ್ಪಷ್ಟ ಕನ್ನಡ..

ಪ್ರವಾಸಿಗರ ಮನಸೆಳೆವ ಪ್ರಾಕೃತಿಕ ಸೊಬಗಿನ ತಾಣಗಳು. ಗಡಾಯಿಕಲ್ಲು, ನರಸಿಂಹಗಢ, ಜಮಲಾಬಾದ್‌ ಕೋಟೆ ಎಬೆಲ್ಲ ಹೆಸರಿನಿಂದ ಕರೆಯಲ್ಪಡುವ ಮಂಗಳೂರು, ಬೆಳ್ತಂಗಡಿ ಇಂದ 5 ಕಿ.ಮೀ ಲಾಯಿಲಾ -ಕಿಲ್ಲೂರು ರಸ್ತೆಯಲ್ಲಿ ಸಾಗಿದರೆ 1,200 ಅಡಿ ಎತ್ತರದಲ್ಲಿರುವ ಏಕಶಿಲಾ ಪರ್ವತ. ಸಮುದ್ರ ಮಟ್ಟದಿಂದ ಸುಮಾರು 1,788 ಅಡಿ ಎತ್ತರದಲ್ಲಿರುವ ಕೋಟೆ ನೋಡಬೇಕೆಂದರೆ ಬರೋಬರಿ 2,800 ಮೈಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದೆ. ಗಡಾಯಿಕಲ್ಲಿನ ಮೇಲೆ ಬಂಗಾಡಿ ಅರಸ ನರಸಿಂಹ ಕಟ್ಟಿಸಿದ ಕೋಟೆಯಿದೆ ಆದ್ದರಿಂದ ಇದು ನರಸಿಂಹಗಡ ಎಂದು ಪ್ರಸಿದ್ಧಯಾಯಿತು.

1794 ರಲ್ಲಿ ಈ ಕೋಟೆಯನ್ನು ಟಿಪ್ಪು ಸುಲ್ತಾನ್‌ ಆಕ್ರಮಿಸಿಕೊಂಡ ಬಳಿಕ ತನ್ನ ತಾಯಿಯ ಹೆಸರನ್ನು ನಾಮಕರಣ ಮಾಡಿದ ಆದ್ದರಿಂದ ಜಮಲಾಬಾದ್‌ ಎಂದು ಕರೆಯಲ್ಪಟ್ಟಿತು. ಈ ಕೋಟೆಯನ್ನು ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಲು ಬಳಸುತಿದ್ದ ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಟಿಪ್ಪು ಬಳಸುತ್ತಿದ್ದ ಯುದ್ಧ ಸಾಧನಗಳು, ಫಿರಂಗಿ ಅವಶೇಷಗಳು, ಅಡುಗೆ ಕೋಣೆ, ಅರೆಯುವಕಲ್ಲು, ಕೆರೆಯನ್ನು ಕಾಣಬಹುದು. ಕೋಟೆ ಹತ್ತುವ ದಾರಿ ನೋಡಿದರೆ ಇಲ್ಲಿಗೆ ಟಿಪ್ಪುವಿನ ಸೈನಿಕರು ಹೇಗೆ ನಡೆದುಕೊಂಡು ಹೋಗುತ್ತಿದ್ದರು ಎಂಬ ಅಚ್ಚರಿ ಮೂಡುವುದು ಸಹಜ. ಪ್ರಾಕೃತಿಕ ಸಿರಿಯಿಂದ ಸಂಪದ್ಭರಿತವಾದ ಪಿಲಿಕುಳ ವನ್ಯಜೀವಿಧಾಮ. ತುಳು ಭಾಷೆಯಲ್ಲಿ ಪಿಲಿ ಎಂದರೆ ಹುಲಿ ಹಾಗು ಕುಳ ಎಂದರೆ ಕೊಳ ಎಂದಾಗುತ್ತದೆ.

Advertisement

ಒಂದೊಮ್ಮೆ ಹುಲಿಗಳು ಇಲ್ಲಿ ನೀರನ್ನು ಕುಡಿಯಲು ಬರುತ್ತಿದ್ದುದರಿಂದ ಇದಕ್ಕೆ ಪಿಲಿಕುಳ ಎಂದು ಕರೆಯಲಾಗಿದೆ. ಪ್ರವಾಸಿಗರ ಕರ್ಣಗಳಿಗೆ ಬಡಿದು ತನ್ನ ನಿಲುವನ್ನು ಗೋಚರಿಸುವ ಪಣಂಬೂರು ಬೀಚ್‌, ಸುರತ್ಕಲ್‌ ಬೀಚ್‌, ತಣ್ಣೀರುಬಾವಿ ಕಡಲ ತೀರ, ಉಳ್ಳಾಲ ಬೀಚ್‌ ಹೀಗೆ ಕಡಲ ತೀರದ ಸಾಲು. ದಸರಾ ಸಮಯದಲ್ಲಿ ಪಟ್ಟಣಕ್ಕೆ ಮೆರಗು ತರುವ ಪಿಲಿ ನೃತ್ಯ, ಮಾರ್ನೆಮಿ ವೇಷ. ಕೋಳಿ ಅಂಕ, ಕಂಬಳ, ಯಕ್ಷಗಾನ, ನಾಟಕ, ತಾಳಮದ್ದಳೆ ಅಂತಹ ಜನಪದ ಮನರಂಜನೆ.

ಮಂಗಳೂರು ಪಟ್ಟಣದಲ್ಲಿರುವ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಪ್ರಾಕೃತಿಕ ಸೌಂದರ್ಯ, ನಾಡಿನ ಆಚಾರ-ವಿಚಾರಗಳಿಂದ ಗಮ್ಯ ಪ್ರವಾಸಿಗರ ಆಕರ್ಷಣೆಯಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಣ್ಣು, ನೀರಿನ ವಾಸನೆ ಅನುಭವಿಸಿದವನೇ ಬಲ್ಲ ಕಸ್ತೂರಿ ಪರಿಮಳ. ಸೃಷ್ಟಿಕರ್ತ ಚಿತ್ರಿಸಿದ ಸುಂದರ ಚಿತ್ರದಂತಿದೆ ನಮ್ಮ ಕುಡ್ಲ.

-ರಕ್ಷಿತಾ ಶಿಶಿರ್‌

ಎಸ್‌.ಡಿ.ಎಂ. ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next