Advertisement

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

11:55 AM Jul 08, 2024 | Team Udayavani |

ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಆಡಳಿತದ ನಡುವಿನ ಸಾಧಕ ಬಾಧಕಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ವಿಶ್ವವ್ಯಾಪಿಯಾಗಿ ನಡೆಯುತ್ತಲೇ ಇರುತ್ತದೆ. ಆದರೆ ರಾಜ ಪ್ರಭುತ್ವದ ಆಡಳಿದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಜನರಿಗೆ ಮೂಲಭೂತವಾಗಿಬೇಕಾಗಿರುವ ನೆಮ್ಮದಿಯ ಬದುಕು ಶಿಕ್ಷಣ ಆರೇೂಗ್ಯ ಉದ್ಯೋಗ ಮುಂತಾದ ಅಗತ್ಯಗಳನ್ನು ಪೂರೈಸಲು ಸಾಧ್ಯ ಅನ್ನುವುದನ್ನು ಸಾಧಿಸಿ ತೇೂರಿಸಿದ ಪ್ರಮುಖ ರಾಷ್ಟ್ರಗಳಲ್ಲಿ ಯುನೈಟೆಡ್ ಅರಬಿಕ್ ಎಮಿರೇಟ್ಸ್ ಅರ್ಥಾತ್ ಯು.ಎ.ಇ. ರಾಷ್ಟ್ರ ಮೊದಲ ಪಂಕ್ತಿಯಲ್ಲಿ ನಿಲ್ಲಬಲ್ಲ ರಾಷ್ಟ್ರ ಅನ್ನುವುದು ಇದಾಗಲೇ ವಿಶ್ವಕ್ಕೆ ಮನದಟ್ಟಾಗಿ ಬಿಟ್ಟಿದೆ.

Advertisement

1971ರಲ್ಲಿ ಬ್ರಿಟಿಷ್ ಆಧಿಪತ್ಯ ದಿಂದ ಮುಕ್ತ ವಾಗಿ ಸ್ವಾತಂತ್ರ್ಯ ದೇಶವಾಗಿ ಹೊರ ಹೊಮ್ಮಿದ ಯು.ಎ.ಇ. ತನ್ನದೆ ಸಂವಿಧಾನವನ್ನು ರಚಿಸಿಕೊಂಡು ಒಕ್ಕೂಟದ ಸಾಂವಿಧಾನಿಕ ಅರಸೊತ್ತಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವದ ಹತ್ತು ಹಲವು ಮೌಲ್ಯಗಳನ್ನು ಅದರಲ್ಲಿ ತುಂಬಿಸಿ ಜಗತ್ತಿನ ಕಣ್ಣನ್ನು ತನ್ನತ್ತ ಸೆಳೆಯುವುದರಲ್ಲಿ ಈ ಪುಟ್ಟ ದೇಶ ಯಶಸ್ವಿಯಾಗಿದೆ ಅನ್ನುವುದನ್ನು ಪ್ರತ್ಯಕ್ಷವಾಗಿ ನೇೂಡಿದಾಗಲೇ ವೇದ್ಯವಾಗುತ್ತದೆ.

ವಿಶ್ವದ ಪ್ರತಿಯೊಂದು ರಾಷ್ಟ್ರದ ನಡುವೆ ಯಾವುದೇ ವೈಷಮ್ಯ ಬೆಳೆಸಿಕೊಳ್ಳದೇ ತನ್ನ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ಕೊಡುವುದರ ಮೂಲಕ ಅಭಿವೃದ್ಧಿಯ ದಿಕ್ಕನೇ ಬದಲಾಯಿಸಿಕೊಂಡ ಹೆಗ್ಗಳಿಕೆಗೆ ಯು.ಎ.ಇ.ಒಕ್ಕೂಟ ರಾಷ್ಟ್ರಕ್ಕೆ ಸಲ್ಲಲೇ ಬೇಕು.
ಇಂಗ್ಲಿಷ್ ನಲ್ಲಿ ಒಂದು ಮಾತಿದೆ” necessity is the mother of inventions” ಅನಿವಾರ್ಯತೆಯೇ ಹೊಸತನದ ಅವಿಷ್ಕಾಕ್ಕೆ ದಾರಿ.ಈ ಮಾತು ಯು.ಎ.ಇ.ಯ ಅಭಿವೃದ್ಧಿಯ ಹಿಂದಿನ ತಾತ್ಪರ್ಯಯವಾಗಿ ಕಾಣುವಂತಿದೆ. ಯು.ಎ.ಇ.ರಾಷ್ಟ್ರ ಭೌಗೋಳಿಕವಾಗಿ ನೈಸರ್ಗಿಕವಾಗಿ ಹೆಚ್ಚೇನು ಸಂಪತ್ತು ಭರಿತವಾದ ದೇಶವಲ್ಲ.ಬದಲಾಗಿ ಸವಾಲುಗಳೇ ಜಾಸ್ತಿ.

ಕುಡಿಯುವ ನೀರಿನಲ್ಲಿ ಶೂನ್ಯತೆ; ಮರಳು ಭೂಮಿ ತಾಪಮಾನ ಕೂಡಾ ಪೂರಕವಾಗಿಲ್ಲ ಕೃಷಿ ಭೂಮಿ ತೀರ ಕಡಿಮೆ..ಆದರೂ ಈ ದೇಶ ಈ ಎಲ್ಲಾ ಸವಾಲುಗಳನ್ನು ಎದುರಿಸಿ ಜಗತ್ತಿನ ಜನರನ್ನು ತನ್ನಡೆಗೆ ಸೆಳೆಯಲು ಸಾಧ್ಯವಾಗಿದೆ ರಾಜಪ್ರಭುತ್ವದ ಆಡಳಿತದಲ್ಲಿ ಕಂಡುಕೊಂಡ ಅಭಿವೃದ್ಧಿಯ ಇಚ್ಛಾ ಶಕ್ತಿ ಅನ್ನುವುದು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾದರಿಯಾಗ ಬೇಕು. ಈ ದೇಶ ಹುಟ್ಟಿದ ತಕ್ಷಣವೇ ಮೊದಲು ಗಮನ ಹರಿಸಿದು ಈ ಎಲ್ಲಾ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಜೊತೆಗೆ ಅಭಿವೃದ್ಧಿಯನ್ನು ಹೇಗೆ ಸಾಧಿಸ ಬಹುದು ಅನ್ನುವುದರ ಕಡೆಗೆ ಮೊದಲು ದೃಷ್ಟಿ ಹಾಯಿಸಿದ್ದು.

Advertisement

ಈ ದೇಶದ ಮೂಲ ಸಂಪತ್ತು ಅಂದರೆ ತೈಲೇೂತ್ಪಾದನೆ, ಪ್ರಸ್ತುತ ಇದು ವಿಶ್ವದ 7ನೇ ಸ್ಥಾನದಲ್ಲಿ ನಿಲ್ಲುತ್ತದೆ. ಇದರಿಂದಾಗಿ ಬಂದ ಸಂಪತ್ತನ್ನು ದೇಶದ ಶಿಕ್ಷಣ ; ಆರೋಗ್ಯ ; ಪ್ರವಾಸೋದ್ಯಮ; ಮೀನುಗಾರಿಕೆ ಮತ್ತು ಅಭಿವೃದ್ಧಿಯ ಜೀವನಾಡಿ ಅನ್ನಿಸಿಕೊಂಡ ಸಮಪರ್ಕವಾದ ರಸ್ತೆ ಸಂಪ೯ಕ; ವಸತಿ ವ್ಯವಸ್ಥೆ ಇವುಗಳೆಲ್ಲವನ್ನೂ ಕೂಡಾ ಅತ್ಯಂತ ಗುಣಮಟ್ಟದ ರೀತಿಯಲ್ಲಿ ಕಟ್ಟುವುದರ ಜೆುಾತೆಗೆ ನಿವಾ೯ಹಣೆಗೂ ಹೆಚ್ಚಿನ ಗಮನಹರಿಸಿತು.

ಇದರಿಂದಾಗಿ ಪ್ರವಾಸೇೂದ್ಯಮ ಬೆಳೆಯಿತು .ಮಾತ್ರವಲ್ಲ ದೇಶ ವಿದೇಶಗಳಲ್ಲಿರುವ ಉದ್ಯಮ ಶೀಲ ವ್ಯಕ್ತಿಗಳು ತಮ್ಮ ಬಂಡವಾಳವನ್ನು ಕೂಡಾ ತನ್ನ ದೇಶದಲ್ಲಿ ವಿನಿಯೇೂಗಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ ತಾನು ಬೆಳೆಯಿತು.. ವಿದೇಶಿ ಉದ್ಯಮಿಗಳಿಗೂ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರ ಫಲವಾಗಿ ಇಂದು ಯು.ಎ.ಇ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರೀತಿಯನ್ನು ಗಳಿಸಲು ಸಾಧ್ಯವಾಯಿತು..ಇದು ಈ ದೇಶದ ಆರ್ಥಿಕ ಅಭಿವೃದ್ಧಿಯ ರೇೂಚಕ ಕಥೆ.

ಇಂದು ಈ ದೇಶದಲ್ಲಿ ಅದೆಷ್ಟೊ ಮಂದಿ ವಿದೇಶಿಗರು ಉದ್ಯೋಗ ಪಡೆದು ನೆಮ್ಮದಿ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಒಂದು ಅಂಕಿ-ಅಂಶದ ಪ್ರಕಾರ ಬರೇ ದಕ್ಷಿಣ ಏಶಿಯಾದಿಂದ ಶೇ 56.ರಷ್ಟು ಮಂದಿ ಒಂದಲ್ಲ ಒಂದು ಉದ್ಯೋಗ ಪಡೆದು ಈ ಯು.ಎ.ಇ.ಯಲ್ಲಿ ಬಂದು ನೆಲೆಸಿದ್ದಾರೆ ಅದೇ ಶೇ. 56ರಲ್ಲಿ ಭಾರತದಿಂದಲೇ ಗರಿಷ್ಠ ಪ್ರಮಾಣದಲ್ಲಿ ಶೇ.35ರಷ್ಟು ಮಂದಿ ಉದ್ಯೋಗ ಉದ್ಯಮ ಮುಂತಾದ ವ್ಯವಹಾರಗಳನ್ನು ಮಾಡಿಕೊಂಡು ತಮ್ಮ ಬದುಕನ್ನು ಸಂಪನ್ನಮಾಡಿಕೊಂಡ ನಿದರ್ಶನ ನಮ್ಮ ಮುಂದೆ ಇದೆ. ಕನಾ ೯ಟಕದಿಂದಲೇ ಸರಿ ಸುಮಾರು ಒಂದುವರೆ ಲಕ್ಷಕ್ಕೂ ಮೀರಿ ಯು.ಎ.ಇ. ನೆಲದಲ್ಲಿ ಬದುಕನ್ನು ಕಟ್ಟಿ ಕೊಂಡವರಿದ್ದಾರೆ.ಇನ್ನೊಂದು ವಿಶೇಷತೆ ಅಂದರೆ ಇದೇ ಯು.ಎ.ಇ.ದೇಶದಲ್ಲಿ ಬಂದು ನೆಲೆಸಿದವರಲ್ಲಿ” ನಮ್ಮ ಕುಂದಾಪುರ”ಎಂಬ ಫೇಸ್ ಬುಕ್ ಪೇಜಿನ ಬಳಗದಲ್ಲಿಯೇ ಗುರುತಿಸಿ ಕೊಂಡವರ ಸಂಖ್ಯೆಯೇ1400ಕ್ಕೂ ಮಿಕ್ಕಿ ಇದೆ.

ಭಾರತದದ ಜೊತೆಗೂ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿರುವ ಇಲ್ಲಿನ ಸರಕಾರ ಅದೇ ರೀತಿಯಲ್ಲಿ ಇಲ್ಲಿನ ಜನರು ಕೂಡಾ ಭಾರತೀಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ..ಅನ್ನುವುದು ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಕಾರಣವಾಯಿತು.

ಯುನೈಟೆಡ್ ಅರಬ್ ಎಮಿರೇಟ್ಸ್ ಒಕ್ಕೂಟದಲ್ಲಿ ಒಟ್ಟು ಏಳು ಪ್ರಾಂತ್ಯಗಳು ಸೇರಿಕೊಂಡಿವೆ. ಉದಾ:ಅಬುಧಾಬಿ; ದುಬೈ ;ಅಜ್ಮಾನ್; ಶಾರ್ಜಾ ;ಉಮ್ಮಆಲ್ ಖುಮೈನ್..ಇದರಲ್ಲಿ ಅಬುಧಾಬಿ ರಾಜಧಾನಿಯಾಗಿ ಗುರುತಿಸಿ ಕೊಂಡಿದೆ.
ರಾಜ ಪ್ರಭುತ್ವದ ಅಡಿಯಲ್ಲಿಯೇ ಬಹುಸುಂದರವಾದ ಬಹು ಅರ್ಥವಾದ ಸಂವಿಧಾನವನ್ನು ರಚಿಸಿಕೊಂಡಿದೆ.ಈ ಸಂವಿಧಾನದ ಆಶಯಗಳನ್ನು ಮುಂದಿನ ದಿನಗಳಲ್ಲಿ ಬರೆಯ ಬೇಕು ಅನ್ನುವುದು ನನ್ನ ಬಯಕೆ.ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷ ಪ್ರಧಾನ ಮಂತ್ರಿ ಸಂಸತ್ತು ..ಆಯ್ಕೆ ..ಎಲ್ಲವನ್ನೂ ಒಂದಿಷ್ಟು ಇತಿ ಮಿತಿಯೊಳಗೆ ತುಂಬಾ ಜಾಗೃತಿಯಿಂದ ಜೇೂಡಿಸಿರುವುದು ವೇದ್ಯವಾಗುತ್ತದೆ.ಈ ಲಿಖಿತ ಸಂವಿಧಾನ .ಓದಿ ಮನನ ಮಾಡಲು ಯೇೂಗ್ಯವಾದ ಸಂವಿಧಾನ ವೂ ಹೌದು. ಒಟ್ಟಿನಲ್ಲಿ ರಾಜ ಪ್ರಭುತ್ವ ದಲ್ಲಿ ಪ್ರಜಾಪ್ರಭುತ್ವದ ಬೆಳಕು ಹರಿದು ಅಭಿವೃದ್ಧಿಯ ದಿಕ್ಕು ಇಲ್ಲಿನ ಜನರಿಗೆ ನೆಮ್ಮದಿ ತಂದಿರುವುದಂತೂ ನಿಜ.

ಪ್ರೊ|ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ.(ಅಬುಧಾಬಿಯಿಂದ)

Advertisement

Udayavani is now on Telegram. Click here to join our channel and stay updated with the latest news.

Next