Advertisement

ವ್ರತಧಾರಿಯಾಗಿ ಮಲೆ ಏರಿದ ಅಣ್ಣಾಮಲೈ

08:39 PM Jun 17, 2019 | Hari Prasad |

ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದು ಇತ್ತೀಚೆಗೆ ತಾನೇ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ ಅವರು ಶಬರಿಮಲೆಯಲ್ಲಿ ಪತ್ತೆಯಾಗಿದ್ದಾರೆ!

Advertisement

ಹೌದು, ಗಾಬರಿಯಾಗಬೇಡಿ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರದಿದ್ದ ಅಣ್ಣಾಮಲೈ ಅವರು ವ್ರತಧಾರಿಯಾಗಿ ಪಂಪೆಯಿಂದ ಅಯ್ಯಪ್ಪ ಸನ್ನಿಧಾನಕ್ಕೆ ತೆರಳುತ್ತಿರುವ ಫೊಟೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಶಬರಿಮಲೆಯಲ್ಲಿ ಅಣ್ಣಾಮಲೈ ಅವರನ್ನು ಕಂಡ ಕರ್ನಾಟಕದ ಅಯ್ಯಪ್ಪ ವ್ರತಧಾರಿ ಯಾತ್ರಿಕರು ಅವರನ್ನು ಮಾತನಾಡಿಸಿ ಅವರೊಂದಿಗೆ ಫೊಟೋ ತೆಗಿಸಿಕೊಂಡು ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆ ಮೂಲಕ ಟಫ್ ಕಾಪ್ ಎಂದೇ ಕರೆಸಿಕೊಳ್ಳುತ್ತಿದ್ದ ಅಣ್ಣಾ ಮಲೈ ಅವರು ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವ ಮುನ್ನ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿರಬಹುದೆಂದು ಇದೀಗ ವಿಶ್ಲೇಷಿಸಲಾಗುತ್ತಿದೆ.


Advertisement

Udayavani is now on Telegram. Click here to join our channel and stay updated with the latest news.

Next