Advertisement

ತಪ್ಪೆಸಗಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ

05:52 AM Jan 14, 2019 | Team Udayavani |

ದಾವಣಗೆರೆ: ಅಧಿಕಾರಿಗಳ ತಪ್ಪಿನಿಂದ ನಮಗೆ ಅನ್ಯಾಯವಾಗಿದೆ ಎಂಬ ರೈತರ ಅಹವಾಲಿಗೆ ಸ್ಪಂದಿಸಿದ ಸಚಿವ ವೆಂಕಟರಮಣಪ್ಪ ಅವರು, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

Advertisement

ಜಮೀನಿನಲ್ಲಿನ ಬೆಳೆ, ನಷ್ಟ ಹಾಗೂ ಇತರೆ ವಿಷಯದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ತಪ್ಪು ವರದಿಯಿಂದ ನಮಗೆ ಪರಿಹಾರ ಸಿಗುವಲ್ಲಿ ತೊಂದರೆ ಆಗಿದೆ ಎಂಬುದಾಗಿ ಬರ ಪರಿಸ್ಥಿತಿ ಅಧ್ಯಯನ ಹಾಗೂ ಪರಿಹಾರ ಕಾಮಗಾರಿ ನಿರ್ವಹಣೆ ವೀಕ್ಷಿಸಲು ಆಗಮಿಸಿದ್ದ ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ತಂಡಕ್ಕೆ ರೈತರು ಮನವರಿಕೆ ಮಾಡಿಕೊಟ್ಟಾಗ, ತಂಡದ ಸದಸ್ಯ, ಮತ್ತೋರ್ವ ಸಚಿವ ವೆಂಕಟರಮಣಪ್ಪ, ಬೆಳೆ ವಿಮೆ ವಿಷಯದಲ್ಲಿ ತಪ್ಪೆಸಗಿರುವ ಕೆಳಗಿನ ಹಂತದ ಆಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ, ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

15 ದಿನದ ಕೂಲಿ ಕೊಟ್ಟಿಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆಯಡಿ ಜಗಳೂರು ತಾಲೂಕಿನ ತೋರಣಗಟ್ಟ ಗ್ರಾಪಂ ವ್ಯಾಪ್ತಿಯ ಜಮ್ಮಾಪುರ ಕೆರೆ ಹೂಳೆತ್ತುವ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ 15 ದಿನ ಕೂಲಿ ಕೊಟ್ಟಿಲ್ಲ. 10 ಲಕ್ಷ ರೂ. ವೆಚ್ಚದಲ್ಲಿ 300 ಎಕರೆ ಪ್ರದೇಶದಲ್ಲಿರುವ ಆ ಕೆರೆ ಹೂಳೆತ್ತುವ ಕೆಲಸಕ್ಕೆ ಪ್ರತಿದಿನ ನಾಲ್ಕು ಟ್ರ್ಯಾಕ್ಟರ್‌ಗಳಲ್ಲಿ ತಲಾ 20 ಜನರಂತೆ ಕಾರ್ಮಿಕರು ಬರುತ್ತಿದ್ದಾರೆ. ಕಾರ್ಮಿಕರಿಗೆ 249 ರೂ. ಕೂಲಿ ನಿಗದಿ ಮಾಡಲಾಗಿದೆ. ಒಂದು ತಿಂಗಳಿನಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 15 ದಿನದ ಕೂಲಿ ಮಾತ್ರ ಪಾವತಿಸಲಾಗಿದೆ.

ಸಿಇಒ ವರ ವಕಾಲತ್ತು: ಜಿಲ್ಲಾ ಪಂಚಾಯಿತಿ ಸಿಇಒ ಅಶ್ವತಿ ಉತ್ತಮ ಅಧಿಕಾರಿ. ಬಹಳ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ಅಧಿಕಾರಿ ನಮಗೆ ಸಿಕ್ಕಿರುವುದು ಪುಣ್ಯ. ಅವರನ್ನ ನಮ್ಮ ಜಿಲ್ಲೆಯಲ್ಲೆ ಮುಂದುವರಿಸಬೇಕು ಎಂದು ಬರ ಪರಿಹಾರ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದ ಸಚಿವರ ತಂಡಕ್ಕೆ ಕೆಲವು ಮುಖಂಡರು ಒತ್ತಾಯಿಸಿದ ಘಟನೆ ನಡೆಯಿತು.

ನರೇಗಾ ಯೋಜನೆಯಡಿ ಜಗಳೂರು ತಾಲೂಕು ತೋರಣಗಟ್ಟ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಮ್ಮಾಪುರ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಸಚಿವರ ತಂಡದೆದುರು, ಸಿಇಒ ವಿಷಯ ಪ್ರಸ್ತಾಪಿಸಿದ ಕೆಲವರು, ಅವರು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ ಎಂದರು.

Advertisement

ಸಿಇಒ ಅಶ್ವತಿ ಹಾಗೂ ಈ ಹಿಂದೆ ಜಿಪಂ ಉಪ ಕಾರ್ಯದರ್ಶಿಯಾಗಿದ್ದ ಷಡಕ್ಷರಪ್ಪ ನಡೆಸಿರುವ ಭ್ರಷ್ಟಾಚಾರ, ಅನುದಾನ ದುರ್ಬಳಕೆ ಬಗ್ಗೆ ತನಿಖೆ ನಡೆಸುವಂತೆ ಹಿಂದಿನ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಆರ್‌. ಜಯಶೀಲ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next