Advertisement

ಜಗ್ಗೇಶ್‌ ಬರ್ತ್‌ಡೇಗೆ ತೋತಾಪುರಿ ಫ‌ಸ್ಟ್‌ಲುಕ್‌ 

02:26 PM Mar 12, 2021 | Team Udayavani |

ಜಗ್ಗೇಶ್‌ ಅಭಿನಯದ “ತೋತಾಪುರಿ’ ಚಿತ್ರದ ಚಿತ್ರೀಕರಣ ಮುಗಿದಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ. ಮೊದಲ ಹಂತವಾಗಿ ಜಗ್ಗೇಶ್‌ ಅವರ ಹುಟ್ಟುಹಬ್ಬ (ಮಾ.17)ದಂದು ಚಿತ್ರದ ಟೈಟಲ್‌ ಫ‌ಸ್ಟ್‌ಲುಕ್‌ ರಿಲೀಸ್‌ಮಾಡಲಿದೆ. ಜೊತೆಗೆ ಸಿನಿಮಾದ ಕುರಿತಾದ  ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ರಿವೀಲ್‌ ಮಾಡಲಿದೆ.

Advertisement

ಚಿತ್ರದ ಇನ್ನೊಂದು ವಿಶೇಷವೆಂದರೆ, ಎರಡು ಭಾಗಕ್ಕೂ “ತೋತಾಪುರಿ’ ಶೀರ್ಷಿಕೆ ಇದ್ದರೂ, ಅಡಿಬರಹ ಮಾತ್ರ ಬೇರೆ ಇರಲಿದೆ. ಮೊದಲ ಭಾಗದ “ತೋತಾಪುರಿ’ಗೆ “ತೊಟ್ಟು ಕೀಳ್ಬೇಕು’ ಎಂಬ ಅಡಿಬರಹವಿದ್ದರೆ, ಎರಡನೇ ಭಾಗದ “ತೋತಾಪುರಿ’ಗೆ “ತೊಟ್ಟು ಕಿತ್ತಾಯ್ತು’ ಎಂಬ ಅಡಿಬರಹವಿರಲಿದೆ. ಸದ್ಯದ ಮಟ್ಟಿಗೆ ಈ ಅಡಿಬರಹದಲ್ಲಿ ಒಂದು ಕುತೂಹಲ ಹುಟ್ಟುಹಾಕಿರುವ ನಿರ್ದೇಶಕ ವಿಜಯ ಪ್ರಸಾದ್‌, ಸಿನಿಮಾ ಬಿಡುಗಡೆ ಸಮಯದಲ್ಲಿ ಇನ್ನಷ್ಟು ವಿಷಯ ಹೊರ ಹಾಕಲಿದ್ದಾರೆ.

ಚಿತ್ರದಲ್ಲಿ ದತ್ತಣ್ಣ, ಡಾಲಿ ಧನಂಜಯ, ಸುಮನ್‌ ರಂಗನಾಥ್‌, ಅದಿತಿ ಪ್ರಭುದೇವ, ವೀಣಾ ಸುಂದರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next