Advertisement

ಯಾದಗಿರಿ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆ ; 13 ಹೊಸ ಪ್ರಕರಣ

09:04 PM Jun 15, 2020 | Hari Prasad |

ಯಾದಗಿರಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ ಒಟ್ಟು 13 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಗುರುಮಠಕಲ್ ತಾಲೂಕಿನ ಚಂಡ್ರಿಕಿ ಗ್ರಾಮದ 36 ವರ್ಷದ ಮಹಿಳೆ (ಪಿ-7069), ಪಡಪಲ್ಲಿ ಗ್ರಾಮದ 29 ವರ್ಷದ ಪುರುಷ (ಪಿ-7070), ಯಾದಗಿರಿ ತಾಲ್ಲೂಕಿನ ಥಾನು ನಾಯಕ ತಾಂಡಾದ 17 ವರ್ಷದ ಯುವಕ (ಪಿ-7071), ಪಡಪಲ್ಲಿ ಗ್ರಾಮದ 20 ವರ್ಷದ ಯುವತಿ (ಪಿ-7072) ಅದೇ ಗ್ರಾಮದ  26 ವರ್ಷದ ಮಹಿಳೆ (ಪಿ-7073), ಚಪೆಟ್ಲಾ ಗ್ರಾಮದ 30 ವರ್ಷದ ಮಹಿಳೆ (ಪಿ-7074), ಗುರುಮಠಕಲ್‍ನ 44 ವರ್ಷದ ಪುರುಷ (ಪಿ-7075), ಅರಕೇರಾ ಕೆ. ಗ್ರಾಮದ 35 ವರ್ಷದ ಮಹಿಳೆ (ಪಿ-7076) ಅದೇ ಗ್ರಾಮದ 40 ವರ್ಷದ ಪುರುಷ (ಪಿ-7077), ಸುರಪುರ ತಾಲೂಕಿನ ದೇವಾಪುರದ 24 ವರ್ಷದ ಮಹಿಳೆ (ಪಿ-7078) ಸೇರಿದಂತೆ 13 ಜನ ಸೋಂಕಿತರಲ್ಲಿ 6 ಮಹಿಳೆಯರು, 7 ಪುರುಷರು ತುತ್ತಾಗಿದ್ದಾರೆ.

ಸೋಂಕಿತರೆಲ್ಲರೂ ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದವರು.

ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 822 ಪ್ರಕರಣಗಳ ಪೈಕಿ 373 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next