Advertisement

ಯಾದಗಿರಿಯಲ್ಲಿ 907ಕ್ಕೆ ಏರಿದ ಸೋಂಕಿತರ ಸಂಖ್ಯೆ ; ಜಮ್ಮು- ಕಾಶ್ಮೀರ ನಂಟು!

10:11 PM Jun 24, 2020 | Hari Prasad |

ಯಾದಗಿರಿ: ಜಿಲ್ಲೆಯಲ್ಲಿ ಇಷ್ಟು ದಿನಗಳಿಂದ ಮಹಾರಾಷ್ಟ್ರದ ನಂಟಿರುವ ಸೋಂಕಿತರು ಪತ್ತೆಯಾಗುತ್ತಿದ್ದರೆ, ಇದೀಗ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿಗೆ ಜಮ್ಮು ಕಾಶ್ಮೀರದ ನಂಟು ಇರುವುದು ಬೆಳಕಿಗೆ ಬಂದಿದೆ.

Advertisement

ಜಮ್ಮು ಕಾಶ್ಮೀರದಿಂದ ಹಿಂತಿರುಗಿದ್ದ ಗುರುಮಠಕಲ್ ತಾಲೂಕಿನ ದೊಡ್ಡಸಂಬ್ರದ ನಾಲ್ವರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.

ಇನ್ನು ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ನಾಲ್ವರಲ್ಲಿಯೂ ಈ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಬುಧವಾರವೂ 13 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 907ಕ್ಕೆ ತಲುಪಿದೆ.

42 ವರ್ಷ ಪುರುಷ ಪಿ-9800, 33 ವರ್ಷದ ಮಹಿಳೆ ಪಿ-9801, 15 ವರ್ಷದ ಯುವಕ ಪಿ-9802 ಹಾಗೂ 19 ವರ್ಷದ ಯುವತಿ ಪಿ-9803 ಇವರು ಜಮ್ಮು ಕಾಶ್ಮೀರದಿಂದ ಹಿಂತಿರುಗಿದ್ದಾರೆ ಎನ್ನಲಾಗಿದ್ದು, ಅವರಲ್ಲಿ ಸೋಂಕು ದೃಢವಾಗಿದೆ.

ಇನ್ನು 9 ಜನರು ಮಹಾರಾಷ್ಟçದ ನಂಟು ಹೊಂದಿದ್ದು, ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ಒಬ್ಬರು 17 ವರ್ಷದ ಯುವಕರು ಪಿ-9804, ಪಿ-9805 ಮತ್ತು 35 ವರ್ಷದ ಮಹಿಳೆ ಪಿ-9806, 29 ವರ್ಷದ ಯುವಕ ಪಿ-9807ಗೆ ಸೋಂಕು ದೃಢವಾಗಿದೆ.

Advertisement

ಅಲ್ಲದೆ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ 15 ವರ್ಷದ ಯುವಕ ಪಿ-9798, ಯಾದಗಿರಿ ತಾಲೂಕಿನ ಮದ್ದರಕಿ ಗ್ರಾಮದ 25 ವರ್ಷದ ಪುರುಷ ಪಿ- 9795, ನಾಗರಹಾಳ ಗ್ರಾಮದ 17 ವರ್ಷದ ಯುವಕ ಪಿ-9796, ಹುಲಕಲ್ ನ 26 ವರ್ಷದ ಪುರುಷ 9797, ಚಿತ್ತಾಪುರ ತಾಲೂಕಿನ ನಾಲವಾರದ 19 ವರ್ಷದ ಯುವಕ ಪಿ-9799 ಸೋಂಕಿಗೆ ತುತ್ತಾಗಿದ್ದಾರೆ.

ಬುಧವಾರ 101 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್ 19 ಖಚಿತಪಟ್ಟವರಲ್ಲಿ ಮತ್ತೆ 101 ಜನ ಸೇರಿ ಜೂನ್ 24ರವರೆಗೆ ಒಟ್ಟು 690 ಜನ ಗುಣಮುಖರಾಗಿದ್ದಾರೆ. ಉಳಿದ 216 ಪ್ರಕರಣಗಳು ಸಕ್ರಿಯವಾಗಿದೆ. ಬುಧವಾರದ 100 ನೆಗೆಟಿವ್ ವರದಿ ಸೇರಿ ಈವರೆಗೆ 22537 ಮಾದರಿಗಳ ವರದಿ ನೆಗೆಟಿವ್ ಬಂದಿವೆ. 445 ಜನರ ಮಾದರಿ ಸಂಗ್ರಹಿಸಲಾಗಿದ್ದು ಇನ್ನು 1230 ಮಾದರಿಗಳ ವರದಿ ಬರಬೇಕಿದೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1395 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2803 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.  ಜಿಲ್ಲೆಯ 17 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 728 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು  ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ಜರಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next