ಮಂಗಳೂರು: ಜಿಲ್ಲೆಯಲ್ಲಿ ಇಂದು (ಎ.2)ರ ಮಧ್ಯಾಹ್ನ 12.30ರ ನಂತರ ಯಾವುದೇ ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿಯಿಲ್ಲ ಇಲ್ಲ ಎಂದು ನಗರ ಪೊಲೀಸ್ ಕಮಿಷನರ್ ಹರ್ಷ ಹೇಳಿದ್ದರು.
ಈ ಬಗ್ಗೆ ಅವರು ಟ್ವಿಟ್ ಮಾಡಿದ್ದು, ಇಂದು ಮಧ್ಯಾಹ್ನ 12.30ರ ನಂತರ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ವೈದ್ಯಕೀಯ ತುರ್ತಿಗಾಗಿ ಜನರು ಆಂಬ್ಯುಲೆನ್ಸ್ ಬಳಸಿಕೊಳ್ಳ ಬೇಕು. ಹೆಚ್ಚಿನ ಮಾಹಿತಿಯನ್ನು ಜಿಲ್ಲಾಡಳಿತದ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೊಂದು ಕೋವಿಡ್-19 ಪ್ರಕರಣ ದೃಢವಾಗಿದೆ. ದುಬೈನಿಂದ ಹಿಂತುರಿಗಿದ್ದ ಪುತ್ತೂರು ಮೂಲದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಅವರ ಗಂಟಲು ದ್ರವ ಪರೀಕ್ಷೆ ಬುಧವಾರ ಬಂದಿದ್ದು, ಸೋಂಕು ದೃಢಪಟ್ಟಿದೆ.