Advertisement

ಕೋವಿಡ್ ಕಳವಳ-ಆಗಸ್ಟ್ 27: 9386 ಹೊಸ ಪ್ರಕರಣ ; 7866 ಡಿಸ್ಚಾರ್ಜ್ ; 141 ಸಾವು

08:55 PM Aug 27, 2020 | Hari Prasad |

ಬೆಂಗಳೂರು: ಬುಧವಾರ ಸಾಯಂಕಾಲದಿಂದ ಗುರುವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9386 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.

Advertisement

ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7866 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 141 ಸೋಂಕಿತರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ಮೂರು ಲಕ್ಷಕ್ಕೇರಿದೆ. ನಮ್ಮಲ್ಲಿ ಸದ್ಯಕ್ಕೆ ಒಟ್ಟು 3,09,792 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ 2ಲಕ್ಷಕ್ಕೆ ತಲುಪಿರುವುದು ಆಶಾದಾಯಕ ವಿಷಯವಾಗಿದೆ. ರಾಜ್ಯದಲ್ಲಿ ಇದೀಗ ಒಟ್ಟು 2,19,554 ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಒಟ್ಟು 84,987 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.

ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ ಒಟ್ಟು 5232 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 19 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 747 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 3357 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಮೈಸೂರು (895), ಬಳ್ಳಾರಿ (550), ದಾವಣಗೆರೆ (391), ಹಾಸನ (334), ಶಿವಮೊಗ್ಗ (306), ಬೆಳಗಾವಿ (318), ದಕ್ಷಿಣ ಕನ್ನಡ (297), ರಾಯಚೂರು (239), ಧಾರವಾಡ (234), ಕಲಬುರಗಿ (232), ಚಿಕ್ಕಮಗಳೂರು (229), ಉಡುಪಿ (209), ಮಂಡ್ಯ (197), ಉತ್ತರ ಕನ್ನಡ (164), ಕೊಪ್ಪಳ (155), ತುಮಕೂರು (127), ವಿಜಯಪುರ (121), ಬಾಗಲಕೋಟೆ (121), ಹಾವೇರಿ (117), ಗದಗ (110), ಕೋಲಾರ (108), ರಾಮನಗರ (105), ಯಾದಗಿರಿ (112) ಮತ್ತು ಚಿಕ್ಕಬಳ್ಳಾಪುರ (101) ಜಿಲ್ಲೆಗಳಿವೆ.

Advertisement

ಇನ್ನುಳಿದಂತೆ, ಬೀದರ್ (76), ಬೆಂಗಳೂರು ಗ್ರಾಮಾಂತರ (59), ಚಾಮರಾಜನಗರ (36), ಚಿತ್ರದುರ್ಗ (31), ಮತ್ತು ಕೊಡಗು (25) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇಂದು ರಾಜ್ಯದಲ್ಲಿ ಒಟ್ಟು 29,004 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 39,183 ಸೋಂಕು ಪತ್ತೆ ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಡೆಸಲಾಗಿದೆ. ಈ ಮೂಲಕ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 68,187 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 7,52,854 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಇದನ್ನು ಹೊರತಾಗಿಸಿ ರಾಜ್ಯಾದ್ಯಂತ 18,95,954 ಜನರಿಗೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಈ ಎಲ್ಲಾ ವಿಧಾನಗಳ ಮೂಲಕ ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 26,48,808 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next