Advertisement

ಯಾದಗಿರಿ: ಮೂವರು ಮಹಿಳೆಯರ ಸೋಂಕಿನ ಮೂಲವೇ ಸಿಗುತ್ತಿಲ್ಲ! 

09:53 PM Jun 18, 2020 | Hari Prasad |

ಯಾದಗಿರಿ: ಮಹಾರಾಷ್ಟ್ರದ ಕೋವಿಡ್ ನಂಜು ಜಿಲ್ಲೆಯನ್ನು ಇನ್ನೂ ಕಾಡುತ್ತಿದೆ.

Advertisement

ಗುರುವಾರ ಯಾದಗಿರಿ ಜಿಲ್ಲೆಯಲ್ಲಿ 8 ಜನರಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ದೃಡಪಟ್ಟಿದೆ.

ಇಂದು ಕೋವಿಡ್ 19 ಸೋಂಕು ದೃಢಪಟ್ಟ ಒಟ್ಟು ಎಂಟು ಜನರಲ್ಲಿ ಐದು ಜನ ಮಹಿಳೆಯರು ಹಾಗೂ ಮೂವರು ಪುರುಷರಾಗಿದ್ದಾರೆ.

ಈ ಎಂಟು ಜನರಲ್ಲಿ ಮೂವರು ಮಹಿಳೆಯರಿಗೂ ಕೋವಿಡ್ 19 ಸೋಂಕು ತಗಲಿದ್ದು ಕಳವಳದ ವಿಚಾರವೆಂದರೆ ಅವರ ಸೋಂಕಿನ ಮೂಲವನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

38 ವರ್ಷದ ಪಿ-7894, 36 ವರ್ಷದ ಪಿ-7895 ಹಾಗೂ 34 ವರ್ಷದ ಪಿ-7896 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು  ಅವರ ಸೋಂಕಿನ ಮೂಲವೇ ಇನ್ನೂ ಪತ್ತೆಯಾಗಿಲ್ಲ.

Advertisement

ಈ ವಿಚಾರ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು ಇದೀಗ ಈ ಮೂವರ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next